ಶ್ರದ್ಧಾ ವಾಕರ್ ಹತ್ಯೆ ಕೇಸ್‌: ತಾನು ನಿರಪರಾಧಿ, ವಿಚಾರಣೆ ಎದುರಿಸಲು ಸಿದ್ಧ ಎಂದ ಅಫ್ತಾಬ್‌ ಪೂನಾವಾಲ

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 201 (ಅಪರಾಧದ ಸಾಕ್ಷ್ಯಾಧಾರಗಳು ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಪ್ರಾಥಮಿಕ ಹಂತದ ಅಪರಾಧಗಳ ಪ್ರಕರಣವನ್ನು ದಾಖಲಿಸಲಾಗಿದೆ.

shraddha walkar case aftab poonawala charged with murder disappearance of evidence ash

ನವದೆಹಲಿ (ಮೇ 9, 2023): ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಹಾಗೂ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ  ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಅಫ್ತಾಬ್ ಪೂನಾವಾಲಾ ವಿರುದ್ಧ ದೆಹಲಿ ನ್ಯಾಯಾಲಯ ಮಂಗಳವಾರ ಕೊಲೆ ಆರೋಪ ಹೊರಿಸಿದೆ. ಸಾಕ್ಷ್ಯಾಧಾರಗಳ ನಾಶಕ್ಕೆ ಕಾರಣರಾದ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿದೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 201 (ಅಪರಾಧದ ಸಾಕ್ಷ್ಯಾಧಾರಗಳು ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಪ್ರಾಥಮಿಕ ಹಂತದ ಅಪರಾಧಗಳ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನಿಷಾ ಖುರಾನಾ ಕಕ್ಕರ್ ಹೇಳಿದರು. ಆದರೆ, ಅಫ್ತಾಬ್ ಪೂನಾವಾಲಾ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ಮತ್ತು ವಿಚಾರಣೆ ಎದುರಿಸುವುದಾಗಿ ಹೇಳಿಕೊಂಡಿದ್ದಾನೆ.

ಇದನ್ನು ಓದಿ: ಶ್ರದ್ಧಾ ವಾಕರ್‌ ಹತ್ಯೆಯ ಅಸಲಿ ಸತ್ಯ ಬಹಿರಂಗ..! ದೆಹಲಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದೇನು..?

ಅಫ್ತಾಬ್‌ ಪೂನಾವಾಲಾ ತನ್ನ ಲಿವ್-ಇನ್ ಪಾರ್ಟ್‌ನರ್‌ ಶ್ರದ್ಧಾ ವಾಕರ್‌ನನ್ನು ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 300-ಲೀಟರ್ ರೆಫ್ರಿಜರೇಟರ್‌ನಲ್ಲಿ ಇರಿಸಿದ ನಂತರ ನಗರದ ವಿವಿಧ ಸ್ಥಳಗಳಲ್ಲಿ ಹಲವಾರು ದಿನಗಳಿಂದ ಎಸೆದಿದ್ದಾನೆ ಎಂಬ ಆರೋಪ ಆತನ ಮೇಲಿದ್ದು, ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಜನವರಿಯಲ್ಲಿ ದೆಹಲಿ ಪೊಲೀಸರು ಈ ಪ್ರಕರಣದಲ್ಲಿ 6,629 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಪೊಲೀಸರು ತನಿಖೆ ಆರಂಭಿಸಿದ 75 ದಿನಗಳ ನಂತರ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಮುಂಬೈ ಮೂಲದ ಅಫ್ತಾಬ್‌ ಪೂನಾವಾಲಾ ಮತ್ತು ಶ್ರದ್ಧಾ ವಾಕರ್‌ ಸಂಬಂಧ ಹೊಂದಿದ್ದು, ಮೇ 2022 ರಲ್ಲಿ ದೆಹಲಿಗೆ ತೆರಳಿದ್ದರು. ಆದರೆ, ಸುಮಾರು ಎರಡು ತಿಂಗಳಿಂದ ಆಕೆಯಿಂದ ಯಾವುದೇ ಮಾಹಿತಿಯಿಲ್ಲ ಎಂದು ಶ್ರದ್ಧಾ ವಾಕರ್ ಅವರ ತಂದೆಗೆ ಆಕೆಯ ಸ್ನೇಹಿತೆ ತಿಳಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ತನ್ನ ಮಗಳನ್ನು ಸಂಪರ್ಕಿಸಲು ಸಾಧ್ಯವಾಗದ ನಂತರ, ಶ್ರದ್ಧಾ ವಾಕರ್ ತಂದೆ ಕಳೆದ ಅಕ್ಟೋಬರ್‌ನಲ್ಲಿ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮುಂಬೈ ಪೊಲೀಸರ ತನಿಖೆಯು ದಕ್ಷಿಣ ದೆಹಲಿಯ ಛತ್ತರ್‌ಪುರ ಪಹಾಡಿಯಲ್ಲಿರುವ ದಂಪತಿಯ ಬಾಡಿಗೆ ಕೋಣೆಗೆ ಪೊಲೀಸರನ್ನು ಕರೆದೊಯ್ಯಿತು.

ಇದನ್ನೂ ಓದಿ: ಅಫ್ತಾಬ್‌ ನನ್ನನ್ನು ಕೊಲ್ಲುತ್ತಾನೆ, ತುಂಡಾಗಿ ಕತ್ತರಿಸುತ್ತಾನೆಂದು 2 ವರ್ಷಗಳ ಹಿಂದೆಯೇ ದೂರು ನೀಡಿದ್ದ ಶ್ರದ್ಧಾ..!

ಬಳಿಕ ಡಿಎನ್‌ಎ ಹೊಂದಾಣಿಕೆಯಾದ ನಂತರ, 13 ಕೊಳೆತ ದೇಹದ ಭಾಗಗಳು, ಹೆಚ್ಚಾಗಿ ಮೂಳೆಗಳ ತುಂಡುಗಳು, ಶ್ರದ್ಧಾ ವಾಕರ್‌ ಕೊಲೆಯಾಗಿರುವುದನ್ನು ದೃಢಪಡಿಸಲಾಗಿತ್ತು. ಬಳಿಕ, ತನಿಖೆಗೆ ಪ್ರಗತಿ ಸಿಕ್ಕಿದ್ದು, ಅಫ್ತಾಬ್ ಪೂನಾವಾಲಾ ಅವರನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಬಂಧಿಸಲಾಯಿತು ಮತ್ತು ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ಅಫ್ತಾಬ್ ವಿರುದ್ಧ Shraddha Walkar ದೂರು: ಪೊಲೀಸರ ಕ್ರಮದ ಬಗ್ಗೆ ತನಿಖೆ ನಡೆಸಲಾಗುವುದು ಎಂದ ಫಡ್ನವೀಸ್

Latest Videos
Follow Us:
Download App:
  • android
  • ios