ಶಾಲಾ ಬಾಲಕಿಯೊಬ್ಬಳನ್ನು ಕಾಮುಕರು ಅಟ್ಟಿಸಿಕೊಂಡು ಬಂದಿದ್ದು, ಈ ವೇಳೆ ಬಾಲಕಿ ಶಾಲಾ ಕಟ್ಟಡದಿಂದ ಕೆಳಗೆ ಹಾರಿದ್ದಾಳೆ. ಪರಿಣಾಮ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಒಡಿಶಾ: ಶಾಲಾ ಬಾಲಕಿಯೊಬ್ಬಳನ್ನು ಕಾಮುಕರು ಅಟ್ಟಿಸಿಕೊಂಡು ಬಂದಿದ್ದು, ಈ ವೇಳೆ ಬಾಲಕಿ ಶಾಲಾ ಕಟ್ಟಡದಿಂದ ಕೆಳಗೆ ಹಾರಿದ್ದಾಳೆ. ಪರಿಣಾಮ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ಭಾನುವಾರ (ಜು.17)ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಐವರು ಕಾಮುಕರು ಆಕೆಯನ್ನು ಬೆನ್ನಟ್ಟಿ ಬಂದಿದ್ದು, ಈ ವೇಳೆ ಆಕೆ ಮಾನ ಉಳಿಸಿಕೊಳ್ಳಲು ಬೇರೆ ದಾರಿ ಕಾಣದೇ ಕಟ್ಟಡದಿಂದ ಕೆಳಗೆ ಹಾರಿದ್ದಾಳೆ. ಜೋರಾಗಿ ಮಳೆ ಸುರಿಯುತ್ತಿದ್ದು, ಆರೋಪಿಗಳು ಆಕೆಗೆ ಶಾಲಾ ಕಟ್ಟಡದಲ್ಲಿ ಮಳೆಯಿಂದ ಆಶ್ರಯ ಪಡೆಯುವಂತೆ ಹೇಳಿದ್ದಾರೆ ನಂತರ ಅತ್ಯಾಚಾರವೆಸಗಲು ಯತ್ನಿಸಿದ್ದಾರೆ. ಈ ವೇಳೆ ಬಾಲಕಿ ತಪ್ಪಿಸಿಕೊಳ್ಳಲು ಕಟ್ಟಡದ ಮೇಲೆ ಓಡಿ ಹೋಗಿದ್ದಾಳೆ. ಅಲ್ಲಿಗೂ ದುಷ್ಕರ್ಮಿಗಳು ಹಿಂಬಾಲಿಸಿ ಬಂದಾಗ ಆಕೆ ಬೇರೆ ದಾರಿ ಕಾಣದೇ ಕಟ್ಟಡದಿಂದ ಕೆಳಗೆ ಹಾರಿದ್ದಾಳೆ.
ಹೆರಿಗೆ ವೇಳೆ ಗರ್ಭಿಣಿಯರಿಗೆ ಮತ್ತು ಬರುವ ಇಂಜೆಕ್ಷನ್ ನೀಡಿ ಅತ್ಯಾಚಾರ: ಕಾಮುಕ ಡಾಕ್ಟರ್ ಬಂಧನ
ಘಟನೆಯ ಬಗ್ಗೆ ಬಾಲಕಿಯ ಜೊತೆಗೆ ಇದ್ದ ಸಹೋದರನ ಹೇಳಿಕೆಯ ಆಧಾರದಲ್ಲಿ ಐವರು ಕಾಮುಕರನ್ನು ಬಂಧಿಸಲಾಗಿದೆ ಎಂದು ಕಳಿಂಗಾ ನಗರ ಪೊಲೀಸ್ ಸ್ಟೇಷನ್ ಇನ್ಸ್‌ಪೆಕ್ಟರ್ ಪಿ.ಬಿ ರಾವತ್ ಹೇಳಿದ್ದಾರೆ. ಬಾಲಕಿ ಕಿಯೋಂಜರ್ ಜಿಲ್ಲೆಯ ನಿವಾಸಿಯಾಗಿದ್ದು, ತನ್ನ ಸಹೋದರನೊಂದಿಗೆ ಆಕೆ ಸುಕಿಂದಾ ಕ್ರೋಮೈಟ್ ಕಣಿವೆಯಲ್ಲಿರುವ ತನ್ನ ಅಕ್ಕನ ಮನೆಗೆ ಹೋಗುತ್ತಿದ್ದಳು. ಅವರು ಬಸ್‌ನಿಂದ ಇಳಿದಾಗ ಜೋರಾಗಿ ಮಳೆ ಬರಲು ಶುರುವಾಗಿದ್ದು, ಪುರುಷರ ಗುಂಪು ಶಾಲಾ ಕಟ್ಟಡದಲ್ಲಿ ಉಳಿದುಕೊಳ್ಳಬಹುದು ಮತ್ತು ಮಳೆ ನಿಂತ ನಂತರ ತಮ್ಮ ಗಮ್ಯಸ್ಥಾನಕ್ಕೆ ಹೋಗಬಹುದು ಎಂದು ಸಲಹೆ ನೀಡಿದರು.
11 ವರ್ಷದ ಬಾಲಕಿ ಮೇಲೆ ಐವರು ಯುವಕರಿಂದ ಅತ್ಯಾಚಾರ ಯತ್ನ: ವೀಡಿಯೊ ಹರಿಬಿಟ್ಟ ದುರುಳರು
ಅವರ ಸಲಹೆಯನ್ನು ಕೇಳಿದ ಅಕ್ಕ ತಮ್ಮ ಅಲ್ಲಿಯೇ ಆಶ್ರಯ ಪಡೆದರು. ಆದರೆ, ಇದಾದ ಬಳಿಕ ಈ ಐವರು ತಡರಾತ್ರಿ ವಾಪಸ್ ಬಂದು ಬಾಲಕಿಯ ಸಹೋದರನಿಗೆ ಥಳಿಸಿ ಓಡಿಸಿದ್ದಾರೆ. ನಂತರ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಶಾಲೆಯ ಕಟ್ಟಡದ ಮೇಲ್ಛಾವಣಿಗೆ ಓಡಿದ ಬಾಲಕಿ ಅಲ್ಲಿಂದ ಜಿಗಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸಹಾಯಕ್ಕಾಗಿ ಸಹೋದರನ ಕಿರುಚಾಟ ಕೇಳಿದ ನಂತರ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಗ್ರಾಮಕ್ಕೆ ಆಗಮಿಸಿ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.