Tripura: ತಾಯಿ, ತಂಗಿ ಸೇರಿ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಬಾಲಕ ಬಂಧನ

By BK AshwinFirst Published Nov 6, 2022, 3:22 PM IST
Highlights

ಮೃತದೇಹಗಳನ್ನು ಪೋಸ್ಟ್‌ ಮಾರ್ಟಮ್‌ಗೆ ಕಳಿಸಲಾಗಿದ್ದು, ಮೃತದೇಹಗಳಲ್ಲಿ ಗಾಯದ ಗುರುತುಗಳಿವೆ ಎಂದು ತಿಳಿದುಬಂದಿದೆ. ಈ ಕೃತ್ಯಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. 

ದೇಶದಲ್ಲಿ ಪ್ರತಿನಿತ್ಯ ಕೊಲೆ ಪ್ರಕರಣಗಳು (Murder Case) ವರದಿಯಾಗುತ್ತಲೇ ಇರುತ್ತದೆ. ಆದರೂ, ನಾವು ಹೇಳಲು ಹೊರಟಿರುವ ಈ ಸ್ಟೋರಿ ಸ್ವಲ್ಪ ಅಪರೂಪದ್ದೇ ಎನ್ನಬಹುದು. ಏಕೆಂದರೆ ತ್ರಿಪುರಾದ (Tripura) ಗ್ರಾಮವೊಂದರಲ್ಲಿ (Village) ತನ್ನ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಹದಿಹರೆಯದ ಬಾಲಕನನ್ನು (Teenage Boy) ಪೊಲೀಸರು ಬಂಧಿಸಿದ್ದಾರೆ (Arrested). ಕೊಡಲಿಯಿಂದ ಆತ ತನ್ನ ತಾತ (70), ಅಮ್ಮ(32), ತಂಗಿ (10) ಹಾಗೂ ಆಂಟಿಯನ್ನು ಕೊಲೆ (Murder) ಮಾಡಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಶನಿವಾರ ತಡರಾತ್ರಿ ಅವರೆಲ್ಲ ಮಲಗಿದ್ದಾಗ ಈ ಘಟನೆ ನಡೆದಿದ್ದು, ಭಾನುವಾರ ಆರೋಪಿ ಬಾಲಕನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಕಮಲ್‌ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಆರೋಪಿ ಬಾಲಕ ಮನೆಯಿಂದ ದೂರ ಓಡಿಹೋಗಿದ್ದ. ನಂತರ ಆತನನ್ನು ಹಲಹಲಿಯಿಂದ ಬಂಧಿಸಲಾಗಿದೆ ಎಂದು ಸಹಾಯಕ ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಜ್ಯೋತಿಷ್‌ಮಾನ್‌ ದಾಸ್‌ ಚೌಧರಿ ಹೇಳಿದ್ದಾರೆ.

ಇದನ್ನು ಓದಿ: ಅಬ್ಬಾ ಇವಳೆಂತಾ ಪಾಕಡಾ ಹುಡುಗಿ, ಬಾಯ್‌ಫ್ರೆಂಡ್‌ಗೆ ವಿಷ ಹಾಕಿ ಕೊಲೆಮಾಡಿ ಮಳ್ಳಿ ತರ ಇದ್ದವಳ ಬಂಧನ

ಈ ಸಂಬಂಧ ಹೇಳಿಕೆಯನ್ನೂ ನೀಡಿರುವ ತ್ರಿಪುರಾ ಪೊಲೀಸರು, ಭಯಾನಕ ಘಟನೆಯೊಂದರಲ್ಲಿ, ಅಪ್ರಾಪ್ತ ಬಾಲಕನೊಬ್ಬ ತನ್ನ ನಾಲ್ವರು ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಘಟನೆ ನಡೆದ ಕೆಲ ಗಂಟೆಗಳಲ್ಲೇ ಬಂಧಿಸಲಾಗಿದೆ. ಈ ಅಪರಾಧಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ತಿಳಿಸಿದ್ದಾರೆ. 

ಬಾಲಕನ ತಂದೆ ಮನೆಗೆ ಬಂದು ನೋಡಿದಾಗ ಮನೆಯಲ್ಲೆಲ್ಲ ರಕ್ತ ಚೆಲ್ಲಿತ್ತು ಹಾಗೂ ಬಾವಿಯಲ್ಲಿ ಮೃತದೇಹಗಳನ್ನು ಬಿಸಾಡಲಾಗಿತ್ತು. ನಂತರ ತಂದೆ ಕೂಗಿಕೊಂಡಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದೂ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 

ಇದನ್ನೂ ಓದಿ: ಹುಡುಗಿನ ಚುಡಾಯಿಸಿದ್ದಕ್ಕೆ ಸ್ಕೆಚ್: ಸ್ನೇಹಿತನನ್ನೇ ಕೊಂದ ಹೈಸ್ಕೂಲ್ ಹುಡುಗ್ರು

ಆರೋಪಿ ಯವಾಗಲೂ ಟಿವಿಯನ್ನು ನೋಡುತ್ತಿದ್ದ ಹಾಗೂ ಅಪರಾಧ ತನಿಖೆಯಂತಹ ಕಾರ್ಯಕ್ರಮಗಳನ್ನು ನೋಡುತ್ತಿದ್ದ ಎಂದೂ ಸ್ಥಳೀಯರು ಆರೋಪಿಸಿದ್ದಾರೆ.   
ಇನ್ನು, ಆರೋಪಿ ಈ ಹಿಂದೆ ಆತನ ಮನೆಯಲ್ಲೇ ಕಳ್ಳತನ ಮಾಡಿದ್ದ ಎಂದು ಡಾ. ಯಾದವ್‌ ತಿಳಿಸಿದ್ದಾರೆ. ಅಲ್ಲದೆ, ಮನೆಯವರನ್ನು ಕೊಲೆ ಮಾಡುವಾಗ ವಾಲ್ಯೂಮ್‌ ಹೆಚ್ಚು ಕೊಟ್ಟು ಸಂಗೀತ ಹಾಕಿದ್ದ. ಇದರಿಂದ ಮನೆಯವರು ಕೂಗಿಕೊಂಡಿದ್ದು ಕೇಳಿಸದಂತೆ ಈ ರೀತಿ ಮಾಡಿದ್ದ ಎಂದೂ ಅವರು ತಿಳಿಸಿದ್ದಾರೆ. 

ಮೃತದೇಹಗಳನ್ನು ಪೋಸ್ಟ್‌ ಮಾರ್ಟಮ್‌ಗೆ ಕಳಿಸಲಾಗಿದ್ದು, ಮೃತದೇಹಗಳಲ್ಲಿ ಗಾಯದ ಗುರುತುಗಳಿವೆ ಎಂದು ತಿಳಿದುಬಂದಿದೆ. ಈ ಕೃತ್ಯಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದೂ ವರದಿಯಾಗಿದೆ.   

ಇದನ್ನೂ ಓದಿ: ಅತ್ಯಾಚಾರವೆಸಗಿ ನೆನಪಿಗಾಗಿ ರುಂಡ ಸಂಗ್ರಹಿಸುತ್ತಿದ್ದ: ಇಲ್ಲಿದೆ ವಿಶ್ವದ 10 ಭಯಾನಕ ಸಿರಿಯಲ್‌ ಕಿಲ್ಲರ್ಸ್‌ ಕಹಾನಿ

ಹದಿಹರೆಯದ ಬಾಲಕ ಈ ರೀತಿ ಭಯಾನಕವಾಗಿ ತನ್ನ ಕುಟುಂಬದವರನ್ನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿರುವುದು ನಿಜಕ್ಕೂ ಭಯ ಹುಟ್ಟಿಸುತ್ತದೆ. ಇಂತಹ ಅಪರಾಧ ಪ್ರಕರಣಗಳು ವರದಿಯಾಗುತ್ತಿರುವುದು ಖಂಡನೀಯವಾಗಿದೆ. ಪೊಲೀಸರುಹಾಗೂ ಸರ್ಕಾರ ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕಿದೆ. ಹದಿಹರೆಯದವರಿಗೆ ಇಂತಹ ಕೃತ್ಯ ನಡೆಸದಂತೆ ಶಿಕ್ಷಣವನ್ನೂ ನೀಡಬೇಕಿದೆ. ಇದರಿಂದಲೂ ಇಂತಹ ಕೃತ್ಯಗಳ ವರದಿ ಕಡಿಮೆಯಾಗಬಹುದು. 

click me!