ಬೆಂಗಳೂರು: ತಮಟೆ ಶಬ್ದಕ್ಕೆ ನೃತ್ಯ ಮಾಡುವ ವಿಚಾರದಲ್ಲಿ ನಡೆದ ಕೊಲೆ, ಅಪ್ರಾಪ್ತ ಸೇರಿ ನಾಲ್ವರು ಅರೆಸ್ಟ್

By Suvarna News  |  First Published Mar 11, 2024, 1:05 PM IST

ಶಿವರಾತ್ರಿ ಉತ್ಸವದ ವೇಳೆ ತಮಟೆ ಶಬ್ದಕ್ಕೆ ನೃತ್ಯ ಮಾಡುವ ವಿಚಾರವಾಗಿ ಯುವಕರ ಮಧ್ಯೆ ನಡೆದ ಗಲಾಟೆ ನಡೆದು ಒರ್ವನ ಕೊಲೆ ಮಾಡಿರುವ ಪ್ರಕರಣದಲ್ಲಿ  ಬ್ಯಾಟರಾಯನಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 


ಬೆಂಗಳೂರು (ಮಾ.11): ಶಿವರಾತ್ರಿ ಉತ್ಸವದ ವೇಳೆ ತಮಟೆ ಶಬ್ದಕ್ಕೆ ನೃತ್ಯ ಮಾಡುವ ವಿಚಾರವಾಗಿ ಯುವಕರ ಮಧ್ಯೆ ನಡೆದ ಗಲಾಟೆ ನಡೆದು ಒರ್ವನ ಕೊಲೆ ಮಾಡಿರುವ ಪ್ರಕರಣದಲ್ಲಿ  ಬ್ಯಾಟರಾಯನಪುರ ಪೊಲೀಸರು ನಾಲ್ವರು  ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ   ಅಪ್ರಾಪ್ತ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಹೇಳಿದ್ದಾರೆ. 

ರಾಯಚೂರು: ಪ್ರೀತಿಗಾಗಿ ಮಗಳಿಂದ ಕಳವು, ಮರ್ಯಾದೆಗೆ ಅಂಜಿ ಹೆದರಿದ ಹೆತ್ತವರ ಆತ್ಮಹತ್ಯೆ!

Tap to resize

Latest Videos

undefined

ಶ್ರೀನಗರದ ನಿವಾಸಿ ಯೋಗೇಶ್‌ ಕುಮಾರ್ (23) ಕೊಲೆಯಾದ ದುರ್ದೈವಿಯಾಗಿದ್ದು, ಚೇತನ್ ,ರಂಗಾ ,ಪವನ್,  ಓರ್ವ ಅಪ್ರಾಪ್ತ  ಬಂಧಿತರಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮುನೇಶ್ವರ ಬ್ಲಾಕ್‌ನಲ್ಲಿ ಶಿವರಾತ್ರಿ ಹಬ್ಬದ ನಿಮಿತ್ತ ಶುಕ್ರವಾರ ರಾತ್ರಿ 1.30ರಲ್ಲಿ ದೇವರ ಉತ್ಸವದ ವೇಳೆ ಈ ಗಲಾಟೆ ನಡೆದಿತ್ತು.  ಬಳಿಕ ಯೋಗೇಶ್ ನ್ನ ಫಾಲೋ ಮಾಡಿಕೊಂಡು  ನಾಲ್ವರು  ಹೋಗಿದ್ದರು. ಈ ವೇಳೆ ನಾಲ್ವರು ಸೇರಿ ಚಾಕುವಿನಿಂದ ಇರಿದು ಯೋಗೀಶ್ ಕೊಲೆ ಮಾಡಿದ್ದರು.

ಕರ್ನಾಟಕದಲ್ಲೂ ಕಾಟನ್ ಕ್ಯಾಂಡಿ ಬ್ಯಾನ್, ಗೋಬಿ ಮಂಚೂರಿಗೆ ಬಣ್ಣ ನಿಷೇಧ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ

ಮೃತ ಯೋಗೇಶ್ ಮಂಡ್ಯ ಜಿಲ್ಲೆ ಕೊಪ್ಪದವನಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ವಾಹನ ಸರ್ವೀಸ್ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡು ಶ್ರೀನಗರದಲ್ಲಿ ನೆಲೆಸಿದ್ದ.  ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮನೆಯೊಂದರ ಕಾಂಪೌಂಡ್ ಹಾರಿದ್ದ. ಅಗ ಕಾಂಪೌಂಡ್ ನಲ್ಲಿಟ್ಟಿದ್ದ ಗ್ಲಾಸ್ ಚುಚ್ಚಿರಬಹುದು ಎಂದು ಕೆಲವರು ಅಂದುಕೊಂಡಿದ್ದರು. ಪೊಲೀಸರು ತನಿಖೆ ಮಾಡಿದಾಗ ಹತ್ಯೆ ಮಾಡಿರೊದು ಬೆಳಕಿಗೆ ಬಂದಿತ್ತು. ಸದ್ಯ    ಆರೋಪಿಗಳನ್ನ  ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
 

click me!