* ಭಯೋತ್ಪಾದನಾ ಚಟುವಟಿಕೆ ಆರೋಪಿಗಳ ವಿರುದ್ಧ ಬಳಸುವ ಕಾಯ್ದೆ
* ಒಮ್ಮೆ ಈ ಕಾಯ್ದೆ ದಾಖಲಿಸಿದರೆ ಜಾಮೀನು ಸಿಗುವುದು ಕಷ್ಟ ಸಾಧ್ಯ
* ಅಗತ್ಯ ಬಿದ್ದಲ್ಲಿ ಕಾಯ್ದೆಯಡಿ ಆರೋಪಿಗಳ ಆಸ್ತಿ ಜಪ್ತಿಗೂ ಅವಕಾಶ
ಶಿವಮೊಗ್ಗ(ಮಾ.05): ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಆರೋಪಿಸಲು ಅನುವು ಮಾಡುವ ಕಾಯ್ದೆಯಾದ ‘ಯುಎಪಿಎ’ಯನ್ನು ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಆರೋಪಿಗಳ ವಿರುದ್ಧ ಬಳಸಲಾಗಿದೆ.
ಇಂಡಿಯನ್ ಪಿನಲ್ ಕೋಡ್(ಐಪಿಸಿ)ಗಿಂದಲೂ ಭಿನ್ನವಾಗಿರುವ ಈ ಕಾಯ್ದೆಯನ್ನು ಒಮ್ಮೆ ದಾಖಲಿಸಿದರೆ ಆರೋಪಿಗಳು ಪಾರಾಗುವುದು ಕಷ್ಟಸಾಧ್ಯ. ಸೆಕ್ಷನ್(43) ಡಿ5 ಅಡಿಯಲ್ಲಿ ಆರೋಪಿಗಳನ್ನು ಜಾಮೀನು ನೀಡುವುದನ್ನು ನಿರ್ಬಂಧಿಸಬಹುದು. ಇನ್ನೂ ಈ ಆ್ಯಕ್ಟ್ನ ಅಳವಡಿಕೆಯಿಂದಾಗಿ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ದಳದ ವ್ಯಾಪ್ತಿಗೆ ಒಳಪಡುತ್ತದೆ. ಕಾಯ್ದೆ ಅನ್ವಯ ಡೆಪ್ಯೂಟಿ ಸೂಪರಿಂಟೆಂಡೆಂಟ್ ಅಥವಾ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ರಾರಯಂಕ್‌ನ ಅಧಿಕಾರಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಬೇಕಾಗುತ್ತದೆ. ಅಗತ್ಯ ಬಿದ್ದಲ್ಲಿ ಆರೋಪಿಗಳ ಆಸ್ತಿ ಜಪ್ತಿ ಅವಕಾಶವನ್ನು ಕಾಯ್ದೆ ನೀಡುತ್ತದೆ. ಸದ್ಯ ಹರ್ಷ ಕೊಲೆ ಆರೋಪಿಗಳ ವಿರುದ್ಧ ಈ ಕಾಯ್ದೆ ದಾಖಲಾಗಿದೆ.
ವ್ಯಕ್ತಿಯ ಮೇಲೆ ಅನ್ಯಕೋಮಿನಿಂದ ಹಲ್ಲೆ: ಶಿವಮೊಗ್ಗದಲ್ಲಿ ಮತ್ತೆ ಆತಂಕ
ಕಾನೂನುಬಾಹಿರ ಚಟುವಟಿಗಳ ತಡೆ ತಿದ್ದುಪಡಿ ಕಾಯ್ದೆ(ಯುಎಪಿಎ)ಯನ್ನು 2019ರಲ್ಲಿ ಸಂಸತ್ ಅಂಗೀಕರಿಸಿದಾಗ ಬಹಳಷ್ಟುವಿರೋಧ ವ್ಯಕ್ತವಾಗಿತ್ತು. ಆದಾಗ್ಯೂ ಕೆಲ ಬದಲಾವಣೆಯೊಂದಿಗೆ ಕಾಯ್ದೆ ಜಾರಿಯಾಗಿತ್ತು. ಈ ಕಾಯ್ದೆಯನ್ನು ಇದೀಗ ಹರ್ಷನ ಕೊಲೆ ಆರೋಪಿಗಳ ಮೇಲೆ ಅನ್ವಯಿಸಲಾಗಿದೆ.
ಹರ್ಷ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರು. ಘೋಷಣೆ
ಶಿವಮೊಗ್ಗ: ಫೆ.20ರಂದು ಹತ್ಯೆಗೀಡಾದ ಹಿಂದೂಪರ ಕಾರ್ಯಕರ್ತ ಹರ್ಷನ(Harsha) ಕುಟುಂಬಕ್ಕೆ ಸರ್ಕಾರ(Government of Karnataka) 25 ಲಕ್ಷ ರು. ಪರಿಹಾರ ಘೋಷಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa) ಹೇಳಿದ್ದರು.
ಮಾ.03 ರಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದ ಅವರು, ಭಾನುವಾರ ತಾವು ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಅವರು ಈ ಚೆಕ್ ಅನ್ನು ಹರ್ಷ ಕುಟುಂಬಕ್ಕೆ ಹಸ್ತಾಂತರಿಸಲಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ ಆಸ್ತಿಗಳಿಗೆ ಹಾನಿಯಿಂದ ನಷ್ಟಕ್ಕೆ ಒಳಗಾದವರಿಗೂ ಪರಿಹಾರ(Compensation) ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದರು.
ಹರ್ಷನ ಹತ್ಯೆಯನ್ನು ಮುಸಲ್ಮಾನ(Muslim) ಗೂಂಡಾಗಳು ಮಾಡಿದ್ದಾರೆ. ಎಲ್ಲ ಮುಸ್ಲಿಂರ ಬಗ್ಗೆ ನಾನು ಈ ಮಾತು ಹೇಳುತ್ತಿಲ್ಲ. ಒಳ್ಳೆಯವರೂ ಇದ್ದಾರೆ. ಆದರೆ ಗೂಂಡಾ ವರ್ತನೆ ತೋರುವ ಮುಸಲ್ಮಾನರಿಗೆ ಮಾತ್ರ ಈ ಮಾತು ಅನ್ವಯಿಸುತ್ತದೆ ಎಂದು ಸ್ಪಷ್ಟನೆ ನೀಡಿದ ಅವರು, ಆದರೆ ಈ ಮುಸಲ್ಮಾನ ಗೂಂಡಾಗಳ ಬಗ್ಗೆ ಕಾಂಗ್ರೆಸ್ ಇದುವರೆಗೂ ಒಂದು ಖಂಡನೆಯ ಮಾತನ್ನು ಹೇಳಿಲ್ಲ. ರಾಜ್ಯ ನಾಯಕರಿಗೆ ಇಲ್ಲಿಗೆ ಬಂದು ಸಾಂತ್ವನ ಹೇಳುವುದಕ್ಕೆ ಸಮಯ ಕೂಡಿ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
'ಬಿಜೆಪಿ ಹರ್ಷನ ತಂಗಿಗೆ MLA, ತಾಯಿಗೆ MP ಟಿಕೆಟ್ ಕೊಡಲಿ, ಅವಿರೋಧವಾಗಿ ಆಯ್ಕೆ ಮಾಡಿಸೋಣ'
ಹತ್ಯೆಯ(Murder) ಬಳಿಕ ನಡೆದ ಗಲಭೆಯಲ್ಲಿ ಹೊರಗಿನ ಶಕ್ತಿಗಳು ಭಾಗಿಯಾಗಿರುವಂತೆ ಕಾಣುತ್ತಿದೆ. ಇದಕ್ಕೆ ಹಿಂದೂ, ಮುಸ್ಲಿಂ ಎರಡೂ ಕಡೆಯವರ ಮನೆ ಮತ್ತು ಆಸ್ತಿಪಾಸ್ತಿಗೆ ಹಾನಿ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆದಾಗ ಮಾತ್ರ ಈ ಸತ್ಯ ಗೊತ್ತಾಗುತ್ತದೆ ಎಂದು ಹೇಳಿದ್ದರು.
ಇದರಲ್ಲಿ ಎಸ್‌ಡಿಪಿಐ(SDPI) ಮತ್ತು ಪಿಎಫ್‌ಐ(PFI) ಪಾತ್ರ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಹಿಜಾಬ್ ವಿವಾದ(Hijab Controversy) ಮತ್ತು ಗಲಭೆಯಂತಹ(Riots) ಘಟನೆಗಳಿಗೆ ಕಾರಣವಾಗುತ್ತಿರುವ ಈ ಎರಡೂ ಸಂಘಟನೆಗಳನ್ನು ನಿಷೇಧಿಸುವಂತೆ ಇತ್ತೀಚೆಗೆ ಯು.ಟಿ. ಖಾದರ್ ನೇತೃತ್ವದಲ್ಲಿ ಅನೇಕ ಮುಸ್ಲಿಂ ಶಾಸಕರು ಒಟ್ಟಾಗಿ ಒತ್ತಾಯ ಹೇಳಿಕೆ ನೀಡಿದ್ದರು. ಆದರೆ, ಇದೇ ಹೊತ್ತಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಈ ಗಲಭೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರಣ ಎಂದು ಟೀಕಿಸುತ್ತಾರೆ. ಅಂದರೆ ಮುಸ್ಲಿಂ ನಾಯಕರಿಗೆ ಇರುವ ತಿಳುವಳಿಕೆ ಮತ್ತು ಅರಿವು ಈ ನಾಯಕರಿಗಿಲ್ಲ ಎಂಬುದು ಗೊತ್ತಾಗಿದೆ ಎಂದು ತಿಳಿಸಿದ್ದರು.