* ಒಡಿಸ್ಸಾ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳ ಬಂಧನ
* ಗಿರಾಕಿಗಳನ್ನು ಹುಡುಕಿ ಗಾಂಜಾ ಚಾಕ್ಲೆಟ್ ಮಾರಾಟ
* ಒಡಿಸ್ಸಾ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳ ಬಂಧನ
ಬೆಂಗಳೂರು(ಮಾ.05): ಗಾಂಜಾ(Marijuana) ಚಾಕ್ಲೆಟ್ ಮಾರಾಟ ಮಾಡುತ್ತಿದ್ದ ಒಡಿಸ್ಸಾ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳನ್ನು ಮಹದೇವಪುರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.
ಒಡಿಸ್ಸಾದ ಬಿನಕಾಪುರ ಗ್ರಾಮದ ಪ್ರದೀಪ್ ಕುಮಾರ್ ರಾವುತ್(33) ಮತ್ತು ಬಾಸುದೇವ್ ಗ್ರಾಮದ ಎಸ್.ಕೆ.ಸಜಾನ್ ಆಲಿ (27) ಬಂಧಿತರು. ಆರೋಪಿಗಳಿಂದ(Accused) 2 ಲಕ್ಷ ಮೌಲ್ಯದ ಒಂದು ಕೆ.ಜಿ.ಗಾಂಜಾ, 18 ಕೆ.ಜಿ. ತೂಕದ 3200 ಗಾಂಜಾ ಚಾಕ್ಲೆಟ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಎ.ನಾರಾಯಣಪುರದ ಮಹದೇವಪುರ ರಿಂಗ್ ರಸ್ತೆಯ ಮೇಲ್ಸೇತುವೆ ಕೆಳಗೆ ಇಬ್ಬರು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Drugs Racket in Bengaluru: ಮೂವರು ಪೆಡ್ಲರ್‌ಗಳ ಸೆರೆ: 80 ಕೆಜಿ ಗಾಂಜಾ ಜಪ್ತಿ
ಆರೋಪಿಗಳು ಒಡಿಸ್ಸಾದ ಬೆಟ್ಟಗುಡ್ಡಗಳಲ್ಲಿ ತಾವೇ ಗಾಂಜಾ ಬೆಳೆದು ಬಳಿಕ ಅದನ್ನು ಕತ್ತರಿಸಿ ಎಲೆ, ಹೂವು, ಕಾಂಡಾ ಬೇರ್ಪಡಿಸಿ ಮಾರಾಟ ಮಾಡುತ್ತಿದ್ದರು. ನಗರದಲ್ಲಿ ದುಬಾರಿ ದರಕ್ಕೆ ಗಾಂಜಾ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ರೈಲಿನಲ್ಲಿ(Railway) ಲಗೇಜ್ ಬ್ಯಾಗ್‌ನಲ್ಲಿ ಗಾಂಜಾ ಹಾಗೂ ಗಾಂಜಾ ಚಾಕ್ಲೆಟ್ ಬಚ್ಚಿಟ್ಟುಕೊಂಡು ನಗರಕ್ಕೆ ತರುತ್ತಿದ್ದರು. ಬಳಿಕ ಜಿಗಣಿ, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಪಾನ್‌ಶಾಪ್‌ಗಳು ಹಾಗೂ ಗಿರಾಕಿಗಳನ್ನು(Customers) ಹುಡುಕಿ ಗಾಂಜಾ ಚಾಕ್ಲೆಟ್ ಮಾರಾಟ ಮಾಡುತ್ತಿದ್ದರೆಂದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಕ್ಕುಲಿ-ನಿಪ್ಪಟ್ಟು ಮಾರೋದು ಬಿಟ್ಟು ಗಾಂಜಾ ದಂಧೆಗೆ ಇಳಿದ ಇಬ್ಬರ ಸೆರೆ!
ಬೆಂಗಳೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್ ರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ಫೆ. 28 ರಂದು ನಡೆದಿತ್ತು. ತಮಿಳುನಾಡಿನ ಹೊಸೂರು ಮೂಲದ ಪ್ರಕಾಶ್(30) ಮತ್ತು ಸುಂದರ್ ಪಾಂಡೆ(32) ಬಂಧಿತರು. ಆರೋಪಿಗಳಿಂದ ಬರೋಬ್ಬರಿ 21 ಕೆ.ಜಿ. ತೂಕದ ಗಾಂಜಾ, .440 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಆರೋಪಿಗಳು ಫೆ.26ರಂದು ಪೀಣ್ಯ 4ನೇ ಹಂತದ 12ನೇ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಕಡಿಮೆ ದರಕ್ಕೆ ಗಾಂಜಾ ಖರೀದಿಸಿ ರೈಲಿನ ಮೂಲಕ ತಮಿಳುನಾಡಿನ ಹೊಸೂರಿಗೆ ತಂದು ಮನೆಯಲ್ಲಿ ಬಚ್ಚಿಡುತ್ತಿದ್ದರು.
ಬಳಿಕ ಗಿರಾಕಿಗಳ ಬೇಡಿಕೆ ಆಧರಿಸಿ ಬೆಂಗಳೂರಿಗೆ ಗಾಂಜಾ ತರುತ್ತಿದ್ದರು. ಪ್ರತಿಷ್ಠಿತ ಕಾಲೇಜುಗಳ ಬಳಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಸೇರಿದಂತೆ ಮಾದಕ ವ್ಯಸನಿಗಳಿಗೆ ದುಬಾರಿ ಮೊತ್ತಕ್ಕೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
Bengaluru Crime: ಒಡಿಶಾದಿಂದ ಗಾಂಜಾ ತಂದು ಮಾರುತ್ತಿದ್ದ ಪೆಡ್ಲರ್‌ಗಳ ಸೆರೆ
ಮೊದಲು ಚಕ್ಕುಲಿ-ನಿಪ್ಪಟ್ಟು ಮಾರಾಟ: ಆರೋಪಿಗಳು ಈ ಹಿಂದೆ ಚಕ್ಕುಲಿ-ನಿಪ್ಪಟ್ಟು ತಯಾರಿಸಿ ಕಿರಾಣಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಬರುವ ಅಲ್ಪ ಪ್ರಮಾಣದ ಹಣದಿಂದ ಜೀವನ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ ಸುಲಭವಾಗಿ ಅಪಾರ ಹಣ ಸಂಪಾದಿಸುವ ಉದ್ದೇಶದಿಂದ ಗಾಂಜಾ ಮಾರಾಟ ದಂಧೆ ಆರಂಭಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಮೂವರು ಪೆಡ್ಲರ್‌ಗಳ ಸೆರೆ: 80 ಕೆಜಿ ಗಾಂಜಾ ಜಪ್ತಿ:
ನೆರೆಯ ಆಂಧ್ರಪ್ರದೇಶದಿಂದ(Andhra Pradesh) ನಗರಕ್ಕೆ ಗಾಂಜಾ(Marijuana) ತಂದು ಮಾರಾಟ ಮಾಡುತ್ತಿದ್ದ ಹೊರರಾಜ್ಯದ ಇಬ್ಬರು ಸೇರಿ ಮೂವರು ಡ್ರಗ್ಸ್ ಪೆಡ್ಲರ್‌ಗಳನ್ನು ಮಹಾಲಕ್ಷ್ಮೇಲೇಔಟ್ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.
ಶ್ರೀರಾಮಪುರದ ಮುತ್ತುರಾಜ್(20), ಮುಂಬೈನ ಗೌತಮ್ (30), ತಿರುಪತಿಯ ರಫಿ (40) ಬಂಧಿತರು(Arrest). ಆರೋಪಿಗಳಿಂದ(Accused) 80.35 ಕೆ.ಜಿ. ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಸರಕು ಸಾಗಣೆ ವಾಹನ ಜಪ್ತಿ ಮಾಡಲಾಗಿದೆ. ಫೆ.21ರಂದು ಮಹಾಲಕ್ಷ್ಮೇಪುರಂನ ಕಮಲಮ್ಮನಗುಂಡಿ ಆಟದ ಮೈದಾನದ ಬಳಿ ಆರೋಪಿ ಮುತ್ತುರಾಜ್ ಗಾಂಜಾ ಮಾರಾಟದಲ್ಲಿ ತೊಡಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆತನನ್ನು ವಶಕ್ಕೆ ಪಡೆದು, ಆತನ ಬಳಿಯಿದ್ದ 350 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಬಳಿಕ ಈತ ನೀಡಿದ ಮಾಹಿತಿ ಮೇರೆಗೆ ಉಳಿದಿಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.