Cyber Fraud: ಸೈಬರ್‌ ವಂಚಕರಿಗೆ ಸಿಮ್‌ ಮಾರುತ್ತಿದ್ದವರ ಬಂಧನ

By Kannadaprabha News  |  First Published Mar 5, 2022, 5:00 AM IST

*  ಆರೋಪಿ ಬಂಧನದಿಂದ ಮೂರು ಪ್ರಕರಣಗಳು ಪತ್ತೆ
*  ವಿದ್ಯಾರ್ಥಿಗಳಿಂದ ಲಕ್ಷಾಂತರ ಹಣ ಪಡೆದು ಆತ ಮೋಸ ಮಾಡುತ್ತಿದ್ದ ಆರೋಪಿ
*  ಬಂಧಿತ ಆರೋಪಿಗಳಿಂದ 120 ಗ್ರಾಂ ಚಿನ್ನಾಭರಣ ಹಾಗೂ 7 ಲಕ್ಷ ಜಪ್ತಿ 


ಬೆಂಗಳೂರು(ಮಾ.05): ಹಣಕ್ಕಾಗಿ ಸೈಬರ್‌ ವಂಚನೆ(Cyber Fraud) ಜಾಲಕ್ಕೆ ಸಿಮ್‌ ಕಾರ್ಡ್‌ ಪೂರೈಸುತ್ತಿದ್ದ ಏರ್‌ಟೆಲ್‌ ಕಂಪನಿಯ ಉದ್ಯೋಗಿ ಹಾಗೂ ಆತನ ಸ್ನೇಹಿತ ಈಶಾನ್ಯ ವಿಭಾಗ ಸಿಇಎನ್‌ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾರೆ.

ಯಲಹಂಕದ ಹರ್ಷ ಹಾಗೂ ಚಿಕ್ಕಬ್ಯಾಲಕೆರೆಯ ಎಸ್‌.ಚೇತನ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 120 ಗ್ರಾಂ ಚಿನ್ನಾಭರಣ ಹಾಗೂ 7 ಲಕ್ಷ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ರೆವಾ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ವಿಭಾಗಕ್ಕೆ ಪ್ರವೇಶ ಕೊಡಿಸುವುದಾಗಿ ವಿದ್ಯಾರ್ಥಿಯೊಬ್ಬನಿಂದ .1.27 ಲಕ್ಷ ಪಡೆದು ವಂಚಿಸಿದ ಪ್ರಕರಣದಲ್ಲಿ ರಾಜೇಶ್ವರ್‌ ಎಂಬಾತನನ್ನು ಬಂಧಿಸಲಾಗಿತ್ತು. ಬಳಿಕ ಆತ ವಿಚಾರಣೆ ವೇಳೆ ಸೈಬರ್‌ ವಂಚನೆಗೆ ಸಿಮ್‌(Sim) ಪೂರೈಸಿದವರ ಮಾಹಿತಿ ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

Bengaluru Crime: ಮದ್ಯ ಸೇವನೆಗೆ ಹಣ ನೀಡದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

1,500 ಸಾವಿರಕ್ಕೆ ಸಿಮ್‌ ಮಾರಾಟ

ಏರ್‌ಟೆಲ್‌ ಸೇಲ್ಸ್‌ ಎಕ್ಸಿಕ್ಯೂಟಿವ್‌ ಹರ್ಷ ಹಾಗೂ ಸಿಮ್‌ ಮಾರಾಟಗಾರ ಚೇತನ್‌ ಬಾಲ್ಯ ಸ್ನೇಹಿತರಾಗಿದ್ದು, ಹಣಕ್ಕಾಗಿ(Money) ಬಿಹಾರ(Bihar) ಮೂಲದ ಸೈಬರ್‌ ವಂಚಕ ರಾಜೇಶ್ವರ್‌ಗೆ ನೆರವಾಗಿದ್ದರು. ನಿರ್ಮಾಣ ಹಂತದ ಕಟ್ಟಡಗಳು ಹಾಗೂ ರಸ್ತೆ ಬದಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಚೇತನ್‌ ಸಿಮ್‌ ಮಾರುತ್ತಿದ್ದ. ಆಗ ಗ್ರಾಹಕರಿಂದ ಹೆಚ್ಚಿನ ಅರ್ಜಿಗಳಿಗೆ ಸಹಿ ಮಾಡಿಸಿಕೊಳ್ಳುತ್ತಿದ್ದಲ್ಲದೆ ಭಾವಚಿತ್ರಗಳನ್ನು ಕೂಡಾ ಚೇತನ್‌ ಪಡೆಯುತ್ತಿದ್ದ. ಈ ದಾಖಲೆಗಳನ್ನು ಬಳಸಿಕೊಂಡು ಆತ, ಸಿಮ್‌ಗಳನ್ನು ಆಕ್ಟೀವ್‌ ಮಾಡಿ ರಾಜೇಶ್ವರ್‌ಗೆ ಮಾರುತ್ತಿದ್ದ.

ಒಂದಕ್ಕಿಂತ ಹೆಚ್ಚಿನ ಬಾರಿ ಬೆರಳು ಮುದ್ರೆಗಳನ್ನು ಪಡೆದು ಆ ಗ್ರಾಹಕರ ಹೆಸರಿನಲ್ಲಿಯೇ ಹೆಚ್ಚಿನ ಸಿಮ್‌ ಕಾರ್ಡ್‌ ಆಕ್ಟೀವ್‌ ಮಾಡುತ್ತಿದ್ದರು. ಉಚಿತ ಅಥವಾ .50 ಮೌಲ್ಯದ ಸಿಮ್‌ಗಳನ್ನು ಸ್ನೇಹಿತ ರಾಜೇಶ್ವರ್‌ಗೆ ತಲಾ ಒಂದಕ್ಕೆ 1,500 ರುಗೆ ಮಾರುತ್ತಿದ್ದರು. ವಿಚಾರಣೆ ವೇಳೆ ರಾಜೇಶ್ವರ್‌ಗೆ 6 ಸಿಮ್‌ಗಳನ್ನು ಕೊಟ್ಟಿರುವುದಾಗಿ ಇಬ್ಬರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಮತ್ತಷ್ಟುಮಾಹಿತಿ ಹೊರಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಮ್‌ ಬಳಸಿ ವಿದ್ಯಾರ್ಥಿಗಳಿಗೆ ವಂಚನೆ

ಬಿಹಾರ ಮೂಲದ ರಾಜೇಶ್ವರ್‌ ವೃತ್ತಿಪರ ಸೈಬರ್‌ ವಂಚಕನಾಗಿದ್ದು, ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ(Students) ಲಕ್ಷಾಂತರ ಹಣ ಪಡೆದು ಆತ ಮೋಸ ಮಾಡುತ್ತಿದ್ದ. ಈ ದಂಧೆಗೆ ಅಗತ್ಯವಾದ ಮೊಬೈಲ್‌ ಸಿಮ್‌ಗಾಗಿ ಆರೋಪಿ ಹುಡುಕಾಟ ನಡೆಸಿದ್ದ. ಆಗ ಮೊದಲು ಚೇತನ್‌ ಪರಿಚಯವಾಗಿದೆ. ಆತನಿಂದ ಹರ್ಷ ಕೂಡಾ ರಾಜೇಶ್ವರ್‌ ಸಂಪರ್ಕಕ್ಕೆ ಬಂದಿದ್ದಾನೆ. ಹಣದಾಸೆ ತೋರಿಸಿ ಈ ಇಬ್ಬರನ್ನು ತನ್ನ ಮೋಸದ ಬಲೆಗೆ ರಾಜೇಶ್ವರ್‌ ಸೆಳೆದಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಲಂಹಕ ಸಮೀಪ ಕಟ್ಟಿಗೇನಹಳ್ಳಿಯಲ್ಲಿರುವ ರೇವಾ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರವೇಶ ಕೊಡಿಸುವುದಾಗಿ ಇಬ್ಬರು ವಿದ್ಯಾರ್ಥಿಗಳಿಗೆ ವಂಚಿಸಿದ ಬಗ್ಗೆ ಈಶಾನ್ಯ ವಿಭಾಗದ ಠಾಣೆಯಲ್ಲಿ 2 ಪ್ರಕರಣಗಳು ಮತ್ತು ದಯಾನಂದ ಸಾಗರ್‌ ವೈದ್ಯಕೀಯ ಕಾಲೇಜಿನಲ್ಲಿ ಮೆಡಿಕಲ್‌ ಸೀಟ್‌ ಆಸೆ ತೋರಿಸಿ ಮತ್ತೊಬ್ಬ ವಿದ್ಯಾರ್ಥಿಗೆ ಟೋಪಿ ಹಾಕಿದ್ದ ಬಗ್ಗೆ ಕುಮಾರಸ್ವಾಮಿ ಲೇಔಟ್‌ನಲ್ಲಿ ದಾಖಲಾಗಿದ್ದ ಮೂರು ಪ್ರಕರಣಗಳು ಈಗ ರಾಜೇಶ್ವರ್‌ ಬಂಧನದಿಂದ ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Bengaluru: ಪೊಲೀಸರ ಸೋಗಿನಲ್ಲಿ ಅಂಗಡಿ ಮಾಲೀಕರ ಸುಲಿಗೆ ಮಾಡ್ತಿದ್ದವನ ಬಂಧನ

ಮಗಳ ಮೇಲೆ ಮಲ ತಂದೆಯಿಂದಲೇ ರೇಪ್‌: ವಿಕೃತಕಾಮಿ ಅರೆಸ್ಟ್‌

ಬಾಳೆಹೊನ್ನೂರು: ಅಪ್ರಾಪ್ತೆ ಮೇಲೆ ಆಕೆಯ ಮಲ ತಂದೆಯೇ ಅತ್ಯಾಚಾರ ನಡೆಸಿದ ಚಿಕ್ಕಮಗಳೂರು(Chikkamagaluru) ಜಿಲ್ಲೆಯ ನರಸಿಂಹರಾಜಪುರ(Narasimharajapura) ತಾಲೂಕಿನ ಬಾಳೆಹೊನ್ನೂರು ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.  ಗ್ರಾಮದ ಕೃಷ್ಣ (34) ಆರೋಪಿ(Accused). ಈತನ ಪತ್ನಿ ಕೂಲಿ ಕೆಲಸಕ್ಕೆ ಹೋದ ವೇಳೆ ಮಗಳ ಮೇಲೆ ಅತ್ಯಾಚಾರ(Rape) ನಡೆಸಿದ್ದಾನೆ. 5 ತಿಂಗಳಿನಿಂದ 7 ಬಾರಿ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಕುರಿತು ಯಾರಿಗೂ ಹೇಳದಂತೆ ಆರೋಪಿ ಕೃಷ್ಣ ಬಾಲಕಿಗೆ(Minor Girl) ಬೆದರಿಕೆಯೊಡ್ಡಿದ್ದ.

ಇತ್ತೀಚೆಗೆ ತಾಯಿಗೆ ವಿಚಾರ ಗೊತ್ತಾದ ಬಳಿಕ ಆತನನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೆಯೂ ಆತ ಹಲ್ಲೆ(Assault) ನಡೆಸಿದ್ದಾನೆ. ಪೊಲೀಸರು(Police) ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ.
 

click me!