
ತೆಲಂಗಾಣ (ಜು.30): ಜಗಳವಾದ ಹಿನ್ನೆಲೆಯಲ್ಲಿ ಪತ್ನಿಯನ್ನು ಹೊಡೆದು ಕೊಂದ ಆರೋಪದ ಮೇಲೆ ಹೈದರಾಬಾದ್ ಯುವ ಕಾಂಗ್ರೆಸ್ ಮುಖಂಡನನ್ನು ಬಂಧಿಸಲಾಗಿದೆ. ಜುಲೈ 14 ರಂದು ಯುವ ಕಾಂಗ್ರೆಸ್ ಮುಖಂಡ ವಲ್ಲಭ ರೆಡ್ಡಿ ಎಂಬಾತ ತನ್ನ ಪತ್ನಿ ಲಹರಿ (27) ಎಂಬಾಕೆಯನ್ನು ಹೊಡೆದು ಕೊಲೆಗೈದ ಘಟನೆ ನಡೆದಿದ್ದು, ನಂತರ ಆಕೆ ಬಿದ್ದಿದ್ದಾಳೆ ಎಂದು ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾನೆ. ಪರೀಕ್ಷಿಸಿದ ವೈದ್ಯರು ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ನಂತರ ಅನುಮಾನ ಬಂದ ವೈದ್ಯರು ಇದು ಸಹಜ ಸಾವಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆ ಬಳಿಕ ನಿಜಾಂಶ ಬಯಲಾಗಿದೆ. ಈ ಜೋಡಿ ಸುಮಾರು 15 ತಿಂಗಳ ಹಿಂದೆ ಮದುವೆಯಾಗಿತ್ತು ಎಂದು ವರರಿ ತಿಳಿಸಿದೆ.
ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಲಹರಿ ಕೆಳಗೆ ಬಿದ್ದು ತಲೆಗೆ ಗಾಯವಾಗಿದೆ ಎಂದು ಆಸ್ಪತ್ರೆಯ ವೈದ್ಯರಿಗೆ ವಲ್ಲಭ ರೆಡ್ಡಿ ತಿಳಿಸಿದ್ದ. ಪೊಲೀಸರು ಪ್ರಕಾರ, ಸೆಕ್ಷನ್ 174 (ವಿಚಾರಣೆ ಪ್ರಕ್ರಿಯೆ) ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಶವಪರೀಕ್ಷೆಯಲ್ಲಿ ಲಹರಿಯ ಹೊಟ್ಟೆ ಮತ್ತು ಒಳಭಾಗಕ್ಕೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮಂಗಳೂರು ಪ್ರತಿಷ್ಠಿತ ಎ.ಜೆ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಗರ್ಭಿಣಿ ಸಾವು, ರಣರಂಗವಾದ ಆಸ್ಪತ್ರೆ ಆವರಣ
ಜುಲೈ 13 ರಂದು ರಾತ್ರಿ ದಂಪತಿಗಳು ಜಗಳವಾಡಿದರು, ಅದು ಮರುದಿನದವರೆಗೆ ಮುಂದುವರೆಯಿತು, ನಂತರ ಗಂಡ ವಲ್ಲಭ ಪತ್ನಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಆತನ ಮಾರಕ ಹೊಡೆತಕ್ಕೆ ಅವಳು ಸತ್ತೇ ಹೋದಳು ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ. ಸದ್ಯ ವಲ್ಲಭನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೈಸೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ 25 ಲಕ್ಷ ಹಣದ ಜತೆ ಮಹಿಳಾ ಪ್ರೊಫೆಸರ್ ಎಸ್ಕೇಪ್!
ಮಹಿಳೆಯ ತಂದೆ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆಯ ಸಮಯದಲ್ಲಿ, ಆರೋಪಿಯು ತನ್ನ ಹೆಂಡತಿಯನ್ನು ಕೊಲೆ ಮಾಡಿದ ನಂತರ ನೆಲ ಮತ್ತು ಇತರ ಸ್ಥಳಗಳಿಂದ ರಕ್ತವನ್ನು ಸ್ವಚ್ಛಗೊಳಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ