ಪ್ರೇಮಿಗಾಗಿ ತನ್ನ ಕಂದಮ್ಮನನ್ನೇ ಕೊಂದ ಮಹಿಳೆ, 'ದೃಶ್ಯಂ' ಸಿನಿಮಾ ನೋಡಿ ಮೃತದೇಹ ಹೂತಿಟ್ಲು!

Published : Jul 02, 2023, 03:14 PM ISTUpdated : Jul 02, 2023, 03:20 PM IST
ಪ್ರೇಮಿಗಾಗಿ ತನ್ನ ಕಂದಮ್ಮನನ್ನೇ ಕೊಂದ ಮಹಿಳೆ, 'ದೃಶ್ಯಂ' ಸಿನಿಮಾ ನೋಡಿ ಮೃತದೇಹ ಹೂತಿಟ್ಲು!

ಸಾರಾಂಶ

ತಾಯಿಯೊಬ್ಬಳು ಪ್ರೇಮಿಗಾಗಿ ತನ್ನ 2 ವರ್ಷದ ಕಂದಮ್ಮನನ್ನೇ ಕೊಂದಿರುವ ಘಟನೆ ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ನಡೆದಿದೆ. ಆ ನಂತರ ಮಹಿಳೆ 'ದೃಶ್ಯಂ' ಸಿನಿಮಾ ನೋಡಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾಳೆ.

ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ಮಹಿಳೆ ತನ್ನ ಎರಡೂವರೆ ವರ್ಷದ ಮಗುವನ್ನು ಕೊಂದು ತನ್ನ ಮಗು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಬಳಿಕ ಪೊಲೀಸರ ಜತೆ ಸೇರಿ ಸತತ ಮೂರು ದಿನಗಳ ಕಾಲ ಕಾಣೆಯಾಗಿರುವ ಮಗುವಿನ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಮಗುವಿನ ತಾಯಿಯ ಮೇಲೆ ಶಂಕೆ ವ್ಯಕ್ತವಾಗಿದ್ದು, ಆಕೆಯನ್ನು ಬಂಧಿಸಲಾಗಿದೆ.

ಸೂರತ್‌ನ ದಿಂಡೋಲಿ ಪ್ರದೇಶದಲ್ಲಿ ನಿರ್ಮಾಣ ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ನಯನಾ ಮಾಂಡವಿ ತನ್ನ ಎರಡೂವರೆ ವರ್ಷದ ಮಗು ವೀರ್ ಮಾಂಡವಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಮಹಿಳೆ ಕೆಲಸ ಮಾಡುತ್ತಿದ್ದ ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದರು ಆದರೆ ಮಗು (Child) ಆವರಣದಿಂದ ಹೊರಬರುವುದನ್ನು ನೋಡಲಿಲ್ಲ. ಇದನ್ನು ಆಧರಿಸಿ, ಮಗು ಸೈಟ್ ಬಿಟ್ಟು ಹೋಗಿಲ್ಲ ಎಂದು ಅವರು ತೀರ್ಮಾನಿಸಿದರು. ಮಗು ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಮಹಿಳೆಯನ್ನು ಹಲವು ಬಾರಿ ಪ್ರಶ್ನಿಸಿದರೂ ಆಕೆ ಸರಿಯಾದ ರೀತಿಯಲ್ಲಿ ಉತ್ತರ ನೀಡಲ್ಲಿಲ್ಲ. ನಾಪತ್ತೆಯಾದ ಮಗುವಿನ ಹುಡುಕಾಟಕ್ಕೆ ಪೊಲೀಸರು ಶ್ವಾನದಳವನ್ನು ಸಹ ಬಳಸಿದರು, ಆದರೆ ಮಗುವು ನಿರ್ಮಾಣ ಸ್ಥಳವನ್ನು ಬಿಟ್ಟು ಹೋಗಿರುವ ಯಾವುದೇ ಪುರಾವೆಗಳು ಸಿಗಲ್ಲಿಲ್ಲ.

ಗಂಡನ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಫೇಸ್‌ಬುಕ್‌ ಲೈವ್‌ ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ!

ಪ್ರೇಮಿಯೇ ಮಗುವನ್ನು ಕಿಡ್ನಾಪ್ ಮಾಡಿದ್ದಾನೆಂದು ಆರೋಪಿಸಿದ ಮಹಿಳೆ
ಆ ನಂತರ ಮಹಿಳೆ ಪ್ರೇಮಿಯೇ ತನ್ನ ಮಗುವನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಜಾರ್ಖಂಡ್‌ನಲ್ಲಿ ನೆಲೆಸಿರುವ ತನ್ನ ಪ್ರಿಯಕರನೇ ತನ್ನ ಮಗುವನ್ನು ಅಪಹರಿಸಿದ್ದಾನೆ (Kidnap) ಎಂದು ಪೊಲೀಸರಿಗೆ ಹೇಳಿದ್ದಾಳೆ. ಆ ಮಾಹಿತಿಯಂತೆ ಪೊಲೀಸರು ಮಹಿಳೆಯ ಪ್ರೇಮಿಯನ್ನು ಸಂಪರ್ಕಿಸಿದ್ದಾರೆ. ಆದರೆ ಆತ ಸೂರತ್‌ಗೆ ಹೋಗಿಲ್ಲ ಎಂದು ಪೊಲಿಸರಿಗೆ ತಿಳಿಸಿದ್ದಾನೆ. ಮಗು ನಿರ್ಮಾಣ ಸ್ಥಳವನ್ನು ಬಿಟ್ಟು ಹೋಗದ ಕಾರಣ ಮತ್ತು ಅಪಹರಣದ ಬಗ್ಗೆ ಯಾವುದೇ ಪುರಾವೆಗಳಿಲ್ಲದ ಕಾರಣ ಪೊಲೀಸರು ಮಹಿಳೆಯ ವಿಚಾರಣೆಯನ್ನು ತೀವ್ರಗೊಳಿಸಿದರು, ಆಕೆ ಅಂತಿಮವಾಗಿ ತನ್ನ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಳು. ಆದರೆ, ಶವವನ್ನು ಎಲ್ಲಿ ಬಚ್ಚಿಟ್ಟಿದ್ದಾಳೆ ಎಂದು ಕೇಳಿದಾಗ ಸುಳ್ಳು ಮಾಹಿತಿ ನೀಡಿದ್ದಾಳೆ.

ಮೃತದೇಹ ಮಣ್ಣು ಮಾಡಲು ದೃಶ್ಯಂ ವೀಕ್ಷಿಸಿದಳು
ಆರಂಭದಲ್ಲಿ, ಮಹಿಳೆ ಶವವನ್ನು (Deadbody) ಗುಂಡಿಯಲ್ಲಿ ಹೂತಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾಳೆ, ಆದರೆ ಸ್ಥಳವನ್ನು ಅಗೆದು ನೋಡಿದಾಗ ಏನೂ ಪತ್ತೆಯಾಗಲಿಲ್ಲ. ನಂತರ ಶವವನ್ನು ಕೊಳಕ್ಕೆ ಎಸೆದಿರುವುದಾಗಿ ಪೊಲೀಸರಿಗೆ ತಿಳಿಸಿದಳು, ಆದರೆ ಪೊಲೀಸರಿಗೆ ಅಲ್ಲಿಯೂ ಏನೂ ಸಿಗಲಿಲ್ಲ. ಕಠಿಣ ವಿಚಾರಣೆಯ ಅಡಿಯಲ್ಲಿ, ಮಹಿಳೆಯು ಶವವನ್ನು ನಿರ್ಮಾಣ ಸ್ಥಳದ ಶೌಚಾಲಯಕ್ಕಾಗಿ ಉದ್ದೇಶಿಸಲಾದ ಗುಂಡಿಗೆ ಎಸೆದಿದ್ದೇನೆ ಎಂದು ಬಹಿರಂಗಪಡಿಸಿದಳು.

ಅಕ್ರಮ ಸಂಬಂಧ ಹೊಂದಿದ್ದ ಗುಮಾಸ್ತೆಗೆ ವೀರ್ಯ ದಾನ ಮಾಡಿದ ಲೆಫ್ಟಿನೆಂಟ್‌ ಕರ್ನಲ್: ಸೇನೆ ವಿಧಿಸಿದ ಶಿಕ್ಷೆ ಹೀಗಿದೆ..

ತನ್ನ ಮಗನನ್ನು ಕೊಂದು ಶವವನ್ನು ಬಚ್ಚಿಟ್ಟಿರುವ ಉದ್ದೇಶದ ಬಗ್ಗೆ ಮಹಿಳೆಯನ್ನು ಕೇಳಿದಾಗ, ತಾನು ಮೂಲತಃ ಜಾರ್ಖಂಡ್‌ನವಳು ಮಗುವಿನೊಂದಿಗೆ ಬಂದರೆ ಸ್ವೀಕರಿಸುವುದಿಲ್ಲ ಎಂದು ಪ್ರೇಮಿ ತಿಳಿಸಿದ್ದ. ಹೀಗಾಗಿ ಪ್ರಿಯಕರನನ್ನು ಸೇರಲು ಮಗುವನ್ನು ಕೊಂದಿದ್ದಾಗಿ ತಿಳಿಸಿದ್ದಾಳೆ. ಮೃತದೇಹವನ್ನು ಏನು ಮಾಡಬೇಕೆಂದು ತೋಚದೆ ದೃಶ್ಯಂ ಚಲನಚಿತ್ರ ವೀಕ್ಷಿಸಿ ಅದರಂತೆ ಮಾಡಿರುವುದಾಗಿ ಹೇಳಿದ್ದಾಳೆ.

'ದೃಶ್ಯಂ' ಚಿತ್ರದಲ್ಲಿ, ಕೊಲೆಯ ನಂತರ ಶವವನ್ನು ವಿಲೇವಾರಿ ಮಾಡುವ ದೃಶ್ಯವಿದೆ ಮತ್ತು ಯಾವುದೇ ಬಂಧನಗಳಿಲ್ಲದೆ ಪ್ರಕರಣವು ಇತ್ಯರ್ಥವಾಗದೆ ಉಳಿದಿದೆ. ಈ ವಿಧಾನವನ್ನು ಅನುಸರಿಸುವುದರಿಂದ ಪೊಲೀಸರು ತನ್ನನ್ನು ಬಂಧಿಸಲು ಸಾಧ್ಯವಾಗುವುದಿಲ್ಲ ಮತ್ತು ಜಾರ್ಖಂಡ್‌ನಲ್ಲಿರುವ ತನ್ನ ಪ್ರಿಯಕರನೊಂದಿಗೆ ಸೇರಬಹುದು ಎಂದು ಮಹಿಳೆ ಪ್ಲಾನ್ ಮಾಡಿಕೊಂಡಿದ್ದಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!