ಕುಡಿದು ಹಿಂಸೆ ಕೊಡುತ್ತಿದ್ದ ಮಗನ ಹಿಂಸೆ ತಾಳಲಾರದೆ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ (ಜು.2): ಮದ್ಯಪಾನ ಮಾಡಿ ಬಂದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಮಗನನ್ನು ತಂದೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಘಟನೆ ತಾಲೂಕಿನ ವಾಣಿಗರಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಾಣಿಗರಹಳ್ಳಿ ಗ್ರಾಮದ ಯುವಕ ಆದಶ್‌ರ್(31) ಬೆಂಕಿಗೆ ಆಹುತಿಯಾದ ವ್ಯಕ್ತಿಯಾಗಿದ್ದು, ಜೂನ್ 29ರ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ತಂದೆ ಜಯರಾಮಯ್ಯ(58), ತನ್ನ ಮಗನನ್ನು ಕೊಂದಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ಆದಶ್‌ರ್ ಯಾವುದೇ ಕೆಲಸ ಮಾಡದೆ ದಿನನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಹಾಗಾಗಿ ಮಗನನ್ನು ತಂದೆಯೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಮಗ ಆದಶ್‌ರ್ ಚೆನ್ನಾಗಿ ಬದುಕಲಿ, ಸ್ವಂತ ದುಡಿಮೆ ಮಾಡಲಿ ಎಂಬ ಉದ್ದೇಶದಿಂದ ಮಗನಿಗೆ ಆಟೋ, ಕಾರು ಖರೀದಿ ಮಾಡಿ ಕೊಡಲಾಗಿತ್ತು. ಆದರೆ ಕುಡಿತದ ಚಟಕ್ಕೆ ಬಿದ್ದಿದ್ದ ಮಗ ಆದಶ್‌ರ್ ಎಲ್ಲವನ್ನು ಹಾಳು ಮಾಡಿದ್ದ. ಕುಡಿತದ ಚಟ ಬಿಡಿಸಲು ಸುಮಾರು ಒಂದೂವರೆ ವರ್ಷಗಳ ಕಾಲ ಪರಿವರ್ತನಾ ಕೇಂದ್ರಕ್ಕೂ ಆತನನ್ನು ಸೇರಿಸಿದ್ದರು ಎಂಬ ಮಾಹಿತಿ ದೊರೆತಿದೆ.
ಇತ್ತೀಚೆಗೆ ಚುನಾವಣೆ ವೇಳೆ ಮತ್ತೆ ಆತ ಕುಡಿತ ಆರಂಭಿಸಿದ್ದ ಎನ್ನಲಾಗಿದೆ. ಎಷ್ಟೇ ಬುದ್ದಿ ಹೇಳಿದರೂ ಕುಡಿತ ಬಿಡದ ಆದಶ್‌ರ್, ಆದಶ್‌ರ್ ಗುರುವಾರ ಕುಡಿದು ಬಂದು ತನ್ನ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ¨ದ್ದ. ಮಗನ ಹಿಂಸೆ ತಾಳಲಾರದೆ ರೋಸಿ ಹೋಗಿದ್ದ ತಂದೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಮನೆಗೆ ಬಂದ ಜಯರಾಮಯ್ಯ ಗ್ರಾಮದ ಸಮೀಪದಲ್ಲಿರುವ ಬಾರ್ ಬಳಿ ಕುಡಿಯುತ್ತಿದ್ದ ತನ್ನ ಮಗನಿಗೆ ಥಳಿಸಿದ್ದಾನೆ. ನಂತರ ಕೈ ಕಾಲು ಕಟ್ಟಿತೋಟಕ್ಕೆ ಎಳೆದೊಯ್ದು ತೋಟದ ಬಳಿ ಹಲಸಿನ ಮರಕ್ಕೆ ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆನ್ನಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಜಯರಾಮಯ್ಯನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.