ಗಂಡನ ಮೇಲಿನ ಸಿಟ್ಟಿಗೆ ತನ್ನ 4 ವರ್ಷದ ಮಗನನ್ನು ಹತ್ಯೆಗೈದ ಆರೋಪ ಹೊತ್ತಿರುವ ಸುಚನಾ ಕುರಿತು ಹಲವು ಅಚ್ಚರಿಯ ಮಾಹಿತಿಗಳು ಬಹಿರಂಗವಾಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ಮಗುವನ್ನು ಲಾಲಿ ಹಾಡಿ ಮಲಗಿಸಿದ ಬಳಿಕ ಕ್ರೂರಿ ತಾಯಿ ಸುಚನಾ ಹತ್ಯೆಗೈದಿದ್ದಳಂತೆ.
ಪಣಜಿ: ಗಂಡನ ಮೇಲಿನ ಸಿಟ್ಟಿಗೆ ತನ್ನ 4 ವರ್ಷದ ಮಗನನ್ನು ಹತ್ಯೆಗೈದ ಆರೋಪ ಹೊತ್ತಿರುವ ಸ್ಟಾರ್ಟ್ ಅಪ್ ಸಿಇಒ ಸೂಚನಾ ಸೇಠ್ ‘ಹತ್ಯೆ ಮಾಡುವ ಮೊದಲು ಮಗುವನ್ನು ಲಾಲಿ ಹಾಡಿ ಮಲಗಿಸಿದೆ ಮತ್ತು ಮಗು ಮಲಗಿದ ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿದೆ’ ಎಂದು ತನಿಖಾಧಿಕಾರಿಗಳ ಬಳಿ ಸ್ವತಃ ಬಹಿರಂಗಪಡಿಸಿದ್ದಾಳೆ.
ಅಲ್ಲದೇ ನನ್ನ ವಿಚ್ಛೇಧಿತ ಪತಿ ವೆಂಕಟ್ ರಾಮನ್ ಮಗುವನ್ನು ಭೇಟಿ ಮಾಡಬೇಕೆಂದು ಒತ್ತಡ ಹೇರುತ್ತಿದ್ದಾನೆ. ಆದರೆ ಅವನು ಮಗುವಿಗೆ ಕೆಟ್ಟ ನಡವಳಿಕೆಗಳನ್ನು ಕಲಿಸಿಕೊಡುತ್ತಾನೆ. ಮಗುವನ್ನು ಒಂದು ದಿನವೂ ಅವನ ಬಳಿ ಕಳಿಸಲು ನನಗೆ ಸಾಧ್ಯವಿರಲಿಲ್ಲ ಎಂದು ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ರನನ್ನೇ ಕೊಂದ ತಾಯಿ: ಹತ್ಯೆಗೂ ಮುನ್ನ ಮಗನಿಗೆ ಕಾಲ್ ಮಾಡಿದ್ದ ತಂದೆ..!
ಗೋವಾದಲ್ಲಿ ಸೂಚನಾ ತಂಗಿದ್ದ ಹೋಟೆಲ್‌ಗೆ ಆಕೆಯನ್ನು ಕರೆದೊಯ್ದಿದ್ದ ಪೊಲೀಸರು ಸೂಚನಾಳ ಹೇಳಿಕೆ ಪ್ರಕಾರ ಮಗುವಿನ ಹತ್ಯೆಯ ಘಟನೆಯನ್ನು ಮರುಸೃಷ್ಟಿ ಮಾಡಿಸಿದ್ದಾರೆ. ಈ ವೇಳೆ ಆಕೆ ಈ ಮಾಹಿತಿ ಹೇಳಿದ್ದಾಳೆ.
ಘಟನೆ ಮರುಸೃಷ್ಟಿಯಲ್ಲಿ ಪತ್ತೆಯಾಗಿದ್ದೇನು?
ನಾನು ನನ್ನ ಮಗನನ್ನು ಹತ್ಯೆ ಮಾಡಲು ಮುಂದಾದ ವೇಳೆ ಮಗು ಎಚ್ಚರವಾಗಿತ್ತು. ಆಗ ಮಗುವಿಗೆ ಲಾಲಿ ಹಾಡಿ ಮಲಗಿಸಿದೆ. ಮಗು ಮಲಗಿದ ಕೂಡಲೇ ಉಸಿರುಗಟ್ಟಿಸಿ ಹತ್ಯೆ ಮಾಡಿದೆ. ಅದಾದ ಬಳಿಕ ಪೋರ್ಕ್ ತೆಗೆದುಕೊಂಡು ನನ್ನ ಕೈಗಳ ನರಕ್ಕೆ ಚುಚ್ಚಿಕೊಂಡು ನಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದೆ ಎಂದು ಸೂಚನಾ ಹೇಳಿದ್ದಾಳೆ. ಅಲ್ಲದೇ ಮಗುವನ್ನು ಇತರ ವಸ್ತುಗಳೊಂದಿಗೆ ಹೇಗೆ ಸೂಟ್‌ಕೇಸ್‌ನಲ್ಲಿ ತುಂಬಿದಳು ಎಂದೂ ಹೇಳಿದಳು.
ಗಂಡ 9 ಲಕ್ಷ ದುಡಿತಾನೆ: ನಿರ್ವಹಣೆಗೆ ತಿಂಗಳಿಗೆ 2.5 ಲಕ್ಷ ಕೊಡ್ಬೇಕು : ಮಗನನ್ನೇ ಕೊಂದ ಲೇಡಿ ಸಿಇಒ