
ನವದೆಹಲಿ (ಜ.13): ಕಛ್‌ನ ಗಾಂಧಿಧಾಮ್ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಿಂದ 2.13 ಕೋಟಿ ರೂಪಾಯಿ ನಗದು ತುಂಬಿದ ವಾಹನವನ್ನು ಶುಕ್ರವಾರ ಬೆಳಗ್ಗೆ ದರೋಡೆಕೋರರು ವ್ಯಾನ್ ಅನ್ನು ಅಪಹರಣ ಮಾಡಿದ್ದರು. ಆದರೆ, ಪೊಲೀಸ್ ಸಿಬ್ಬಂದಿ ಹಾಗೂ ಖಾಸಗಿ ನಗದು ನಿರ್ವಹಣೆ ಏಜೆನ್ಸಿ ಸಿಬ್ಬಂದಿಯ ನಿರಂತರ ಫಾಲೋಅಪ್‌ನ ಕಾರಣದಿಂದಾಗಿ 2.13 ಕೋಟಿ ಹಣವಿದ್ದ ವ್ಯಾನ್‌ಅನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸಾಕಷ್ಟು ಬ್ಯಾಂಕ್‌ಗಳು ಇರುವ ಕಾರಣ ಬ್ಯಾಂಕಿಂಗ್ ಸರ್ಕಲ್ ಎಂದೇ ಗುರುತಿಸಿಕೊಂಡಿರುವ ಸ್ವಾಮಿ ವಿವೇಕಾನಂದ ಸರ್ಕಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ವ್ಯಾನ್‌ಗೆ ನಗದು ತುಂಬಿದ ನಂತರ ಖಾಸಗಿ ಏಜೆನ್ಸಿಯ ಸಿಬ್ಬಂದಿ ಬ್ಯಾಂಕ್ ಬಳಿಯೇ ಉಪಹಾರ ಸೇವಿಸಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
'ಏಜೆನ್ಸಿ ಸಿಬ್ಬಂದಿಗಳು ಉಪಹಾರ ಮಾಡುತ್ತಿದ್ದ ವೇಳೆ, ವ್ಯಾನ್‌ನ ಬಳಿ ಬಂದ ವ್ಯಕ್ತಿ, ನಕಲಿ ಕೀ ಸಹಾಯದಿಂದ ವ್ಯಾನ್‌ನ ಡ್ರೈವಿಂಗ್ ಡೋರ್ ತೆಗೆದು, ವ್ಯಾನ್‌ಅನ್ನು ಅಪಹರಣ ಮಾಡುವ ಪ್ರಯತ್ನ ಮಾಡಿದ್ದ ಎಂದು ಕಛ್ ಪೊಲೀಸ್ ಎಸ್‌ಪಿ ಸಾಗರ್ ಬಾಗ್ಮಾರ್ ತಿಳಿಸಿದ್ದಾರೆ. ಎಟಿಎಂಗೆ ಕ್ಯಾಶ್ ಫಿಲ್ ಮಾಡಲು ಏಜೆನ್ಸಿ ಬ್ಯಾಂಕ್‌ನಿಂದ ಹಣ ಸಾಗಿಸುತ್ತಿತ್ತು ಎಂದಿದ್ದಾರೆ. ಏಜೆನ್ಸಿಯ ಸಿಬ್ಬಂದಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಮಾತ್ರವಲ್ಲದೆ, ಎನ್‌ಎಚ್ 41ಗೆ ಪ್ರವೇಶಿಸಿದ್ದ ವ್ಯಾನ್‌ಅನ್ನು ಹಿಂಬಾಲಿಸಿದ್ದರು ಎಂದು ಬಾಗ್ಮಾರ್ ತಿಳಿಸಿದ್ದಾರೆ. ಪೊಲೀಸರು ಕೂಡ ಆ ವ್ಯಾನ್‌ಅನ್ನು ಹಿಂಬಾಲಿಸಲು ಆರಂಭಿಸಿದರು. ಅಂದಾಜು 25 ನಿಮಿಷಗಳ ನಂತರ ವ್ಯಾನ್‌ನ ಮಾಹಿತಿ ಸಿಕ್ಕಿತ್ತು. ಇದರ ಸೂಚನೆ ಸಿಕ್ಕ ಬಳಿಕ ದರೋಡೆಕೋರರು ವ್ಯಾನ್‌ಅನ್ನು ಅಲ್ಲಿಯೇ ಬಿಟ್ಟು ಖಾಸಗಿ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಖಾಸಗಿ ವಾಹನದಲ್ಲಿದ್ದ ಕೆಲಸವರು, ವ್ಯಾನ್‌ನಲ್ಲಿದ್ದ ದರೋಡೆಕೋರರಿಗೆ ಸಹಾಯ ಮಾಡುತ್ತಿದ್ದರು. ಒಂದು ಹಂತದಲ್ಲಿ ಅವರಿಗೆ ತಾವು ಸಿಕ್ಕಿ ಬೀಳುತ್ತೇವೆ ಎಂದು ಗೊತ್ತಾದ ಬೆನ್ನಲ್ಲಿಯೇ ಮೈಥಿ ರೋಹರ್ ಹಳ್ಳಿಯಲ್ಲಿ ವ್ಯಾನ್‌ಅನ್ನು ಅಲ್ಲಿಯೇ ಬಿಟ್ಟು ಖಾಸಗಿ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಂತರ ನಗದು ವ್ಯಾನ್ ಅನ್ನು ಗಾಂಧಿಧಾಮ್ ಪಟ್ಟಣದ ಎ ಡಿವಿಷನ್ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು ಎಂದು ಬಾಗ್ಮಾರ್ ಹೇಳಿದರು. "ನಾವು ವ್ಯಾನ್‌ನಿಂದ ಸಂಪೂರ್ಣ ಮೊತ್ತವನ್ನು ಪತ್ತೆ ಮಾಡಿದ್ದೇವೆ" ಎಂದು ಅವರು ಹೇಳಿದರು. ಎ ವಿಭಾಗದ ಪೊಲೀಸರು ಅಪರಾಧವನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದು, ದರೋಡೆಕೋರರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಮುಂಬೈ ಏರ್‌ಪೋರ್ಟ್‌ನಲ್ಲಿ ಮಣಿಪಾಲ್ ಕಂಪನಿ ನಿರ್ದೇಶಕರ 1 ಲಕ್ಷ ರು. ಕಳವು: ನಿಲ್ದಾಣ ಸಿಬ್ಬಂದಿಯ ಕೈವಾಡ
ಸುಮಾರು ಒಂದು ವರ್ಷದಲ್ಲಿ ಗಾಂಧಿಧಾಮ್‌ನಲ್ಲಿ ಇದು ನಾಲ್ಕನೇ ದರೋಡೆಯಾಗಿದೆ. ಕಳೆದ ಮೇ ತಿಂಗಳಲ್ಲಿ ಬೈಕ್‌ನಲ್ಲಿ ಬಂದ ನಾಲ್ವರು ಖಾಸಗಿ ಕೊರಿಯರ್ ಸಂಸ್ಥೆಯ ಕಚೇರಿಗೆ ನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ 1.5 ಕೋಟಿ ರೂಪಾಯಿ ದೋಚಿದ್ದರು.
ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ಕಳ್ಳತನ; ರೂಮ್‌ನಲ್ಲಿದ್ದ ಹಣ ಮಾಯಾ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ