
ಶೇಷಮೂರ್ತಿ ಅವಧಾನಿ
ಕಲಬುರಗಿ (ಜೂ.18) ರಾತ್ರಿ ಗಸ್ತು ಕೆಲ್ಸ ಮುಗ್ಸಿ ಮುಂಜಾಳಿ ಲಗೂಟ ಬರ್ತೀನಿ ಅಂದು ಹೋಗಿದ್ದ. ಹಂಗೇ ಬರ್ತಾನ ಅಂದಕೊಂಡು ನಾವು ಊಟ ಮಾಡಿ ಇನ್ನೇನು ಮಲಗೋ ತಯಾರಿಯೊಳ್ಗ ಇದ್ವಿ. ಅಷ್ಟತ್ತಿಗೇ ಕೆಲ್ಸಕ್ಕೆಂದು ಹೋದ ನಮ್ಮ ಮೈಸೂ (ಮಯೂರ್)ಗ ಯಾರೋ ಮರ್ಡರ್ ಮಾಡ್ಯಾರಂತ ಸುದ್ದಿ ಬಂತು, ಮೊದಲು ನಂಬದವರು ನಾವು ಅದು ಖರೇನೇ ಅಂತ ಗೊತ್ತಾದಾಗ ಕಣ್ಣೀರಾದ್ವಿ, ಕನಸ್ನಾಗಿಲ್ಲ, ಮನಸ್ಸಾಗಿಲ್ಲ ಅಂತ ಮೈಸೂ ನಮ್ಮನ್ನೆಲ್ಲ ಬಿಟ್ಟು ಹೊಂಟು ಹೋದ ಎಂದು ಚವಡಾಪುರ ತಾಂಡಾದಲ್ಲಿರುವ ಅವರ ಕುಟುಂಬ ಸದಸ್ಯರು, ಕರುಳ ಕುಡಿಗಳು, ಪತ್ನಿ, ಬಂಧುಗಳು ಕಣ್ಣೀರು ಹಾಕುತ್ತಿದ್ದಾರೆ.
ಮರಳು ಮಾಫಿಯಾ ಮೈಸೂ ಕುಟುಂಬವನ್ನೇ ಬೀದಿಗೆ ತಳ್ಳಿದೆ. ತಾವಾಯ್ತು ತಾವು ನಂಬಿರುವ ಪೊಲೀಸ್ ಕೆಲಸವಾಯ್ತು ಎಂದು ಇದ್ದು ಬದುಕುತ್ತಿದ್ದ ಮಯೂರ್ ಚವ್ಹಾಣ್ ಕೆಲಸ ಮಾಡುತ್ತಿರುವಾಗಲೇ ಮರಳುಗಳ್ಳರಿಂದ ಹುತಾತ್ಮರಾಗಿರೋದು ತಾಂಡಾದಲ್ಲೇ ಎಲ್ಲರು ಮರಗುವಂತೆ ಮಾಡಿದೆ.
ಮರಳು ಮಾಫಿಯಾಗೆ ಪೇದೆ ಬಲಿ: ಕರ್ತವ್ಯ ನಿರ್ಲಕ್ಷ ಆರೋಪದಡಿ ಮೂವರು ಪೊಲೀಸರ ಅಮಾನತ್ತು
ಈ ತಾಂಡಾಕ್ಕೆ ‘ಕನ್ನಡಪ್ರಭ’ ಭೇಟಿ ನೀಡಿ ಅಲ್ಲಿದ್ದವರಂದಿಗೆ ಮತುಕತೆ ನೆಸಿದಗ ಮೈಸೂ ಚವ್ಹಾಣ್ ತುಂಬ ಸಂಭಾವಿತ ವ್ಯಕ್ತಿ. ಪೊಲೀಸ್ ಕೆಲಸವಾಯ್ತು, ತಾನಾಯ್ತು, ತನ್ನ ಕುಟುಂಬವಾಯ್ತ ಎಂದು ಇದ್ದಂವ, ಎಲ್ಲಿ ಕೆಲ್ಸ ಹಾಕ್ತಾರೋ ಅಲ್ಲಿಗೆ ಹೋಗಿ ಕೆಲ್ಸ ಮಾಡುವವ ಎಂದು ಜನ ಆತನ ವ್ಯಕ್ತಿತ್ವ ಬಮ್ಣಿಸುತ್ತ ಸಾವಿಗೆ ಮರಗುತ್ತಿದ್ದಾರೆ.
ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ ಮಯೂರ್ ಇಲ್ಲದೆ ಹೇಗೆ ಬದುಕು ಕಟ್ಟೋದು ಎಂದು ಅವರ ಪತ್ನಿ ನಿರ್ಮಲಾ ರೋದಿಸುತ್ತಿದ್ದಾರೆ. ರಾತ್ರಿ ಕೆಲಸಕ್ಕಂತ ಹೋದವರೂ ಮಧ್ಯರಾತ್ರಿಯ ಶವವಾಗಿ ಹಾದಿಬೀದಿಯಲ್ಲಿ ಬಿದ್ದರು ಎಂಬ ಸುದ್ದಿ ಈ ಕುಟುಂಬವನ್ನ ಅರಗಿಸಿಕೊಳ್ಳಲಿಕ್ಕೇ ಆಗುತ್ತಿಲ್ಲ.
ಮಕ್ಕಳ ಕಣ್ಣೀರ ಕೋಡಿ:
ಮೈಸೂ ಚವ್ಹಾಣ್‌ಗೆ ಮೂವರು ಮಕ್ಕಳು. ದೊಡ್ಡ ಮಗಳು ಅಶ್ವಿನಿ, 22 ವರ್ಷದ ಅಶ್ವಿನಿಗೆ ಅದಾಗಲೇ ಮದುವೆ ಮಾಡಿಕೊಟ್ಟಿದ್ದಾರೆ. ಆಕೆಯ ಚೊಚ್ಚಿಲ ಪ್ರಸವಕ್ಕೆಂದು ಮನೆಗೆ ಬಂದವಳಿಗೆ ತಂದೆಯ ಸಾವಿನ ಆಘಾತ ಕಾದಿತ್ತು. ಆಕೆಯಂತೂ ಇನ್ನೂ ಅಳು ನಿಲ್ಲಿಸಿಲ್ಲ. ಮೈಸೂ ಚವ್ಹಾಣ ಅವರ ಮುದ್ದಿನ ಮಗಲಾಗಿದ್ದ ಅಶ್ವಿನಿ ತಂದೆಯೇ ಇನ್ನಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲವೆಂದು ಒಂದೇ ಸವನೇ ರೋದಿಸುತ್ತಿದ್ದಾಳೆ.
ಇನ್ನು ಇಬ್ಬರು ಪುತ್ರರಲ್ಲಿ 19 ವರ್ಷದ ಮಹೇಶ ಪಿಯುಸಿಯಲ್ಲಿದ್ದರೆ 18 ವರ್ಷದ ಉಮೇಶ ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ. ಇವರಿಬ್ಬರೂ ಸಹ ತಂದೆಯೊಂದಿಗೆ ಗುರುವಾರ ರಾತ್ರಿ ಊಟ ಮಾಡಿದ್ದಾರೆ. ಮಾತುಕತೆ ಯಾಡಿದ್ದಾರೆ. ಕೆಲಸಕ್ಕೆ ಹೋಗಿ ಬರೋದಾಗಿ ಹೇಳಿದಾಗ ಒಪ್ಪಿ ಬೈ ಹೇಳಿದ್ದಾರೆ. ಆದರೆ ಅವರಿಗೇನು ಗೊತ್ತು. ಅವರ ತಂದೆ ಹೀಗೆ ಬೈ ಹೇಳಿ ಹೋದವರು ಬದುಕಿಗೇ ಕಾಯಂ ಆಗಿ ವಿದಾಯ ಹೇಳೋರಿದ್ದಾರೆಂಬ ಸಂಗತಿ. ಮಧ್ಯರಾತ್ರಿಯಿಂದಲೇ ಕಣ್ಣೀರು ಹಾಕುತ್ತಿರುವವ ಕುಟುಂಬದ ರೋದನ ಇನ್ನೂ ನಿಂತಿಲ್ಲ. ಇಡೀ ಸಂಸಾರದ ಬಾರ ಹೊತ್ತಿದ್ದ ಮಯೂರ್ ಹೀಗೆ ನಡುವಲ್ಲೇ ತಮ್ಮನ್ನೆಲ್ಲ ಬಿಟ್ಟು ಹೋದನಲ್ಲ, ತನ್ನದಲ್ಲದ ತಪ್ಪಿಗೆ ಸಾವಾಯ್ತಲ್ಲ ಎಂದು ವರು ಆತಂಕದಲ್ಲಿದ್ದರೆ.
ನೆಲೋಗಿಗೆ ಹೋಗಿ 10 ತಿಂಗಳಾಗಿತ್ತು
ಅಫಜಲ್ಪುರದಲ್ಲೇ ಕೆಲಸದಲ್ಲಿದ್ದ ಮಯೂರ್‌ಗೆ ನೆಲೋಗಿ ಪೋಸ್ಟಿಂಗ್ ಆಗಿ 10 ತಿಂಗಳಾಗಿತ್ತು, ಚವಡಾಪುರದಿಂದ ನೆಲೋಗಿ ತುಂಬಾ ಹತ್ತಿರ, 14 ಕಿಮೀ ಎಂದು ಪೋಸ್ಟಿಂಗ್ ಆದಲ್ಲೋ ಹೋಗಿ ಕೆಲಸಕ್ಕೆ ಸೇರಿದ್ದ ಚವ್ಹಾಣ್ ಅಲ್ಲಿಯೂ ಠಾಣೆಯಲ್ಲಿ ಒಪ್ಪಿಸಿದ ಕೆಲಸ ಮಾಡುವಲ್ಲಿ ಹೆಸರುವಾಸಿ. ಹೀಗಾಗಿ ಎಲ್ಲರಿಗೂ ಚವ್ಹಾಣ್ ಅಂದರೆ ತುಂಬ ಪ್ರೀತಿ. ಆದರೆ ಮರಳು ಮಾಫಿಯಾ ಚವ್ಹಾಣ್ ಬಲಿ ಪಡೆದಿರೋದು ಎಲ್ಲರು ದುಃಖಿಸುವಂತೆ ಮಾಡಿದೆ.
ನಾಲ್ವರು ಸಹೋದರರಲ್ಲಿ ಶಿÊಕಾಂತ ಚವ್ಹಾಣ್ ‘ಕನ್ನಡಪ್ರಭ’ ಜೊತೆ ಮಾತಾಡುತ್ತ ಅಣ್ಣನ ಸಾವಿಗೆ ಕಂಬನಿ ಮಿಡಿದ. ನಿತ್ಯ ಹೋಗಿ ಬಂದು ಮಾಡ್ತಿದ್ದ. ತಾಂಡಾದಲ್ಲೇ ಮನಿ ಇತ್ತು. ಈಗ ನೋಡಿದ್ರ ಮರಳು ಮಾಫಿಯಾ ದಂಧಿಯವರು ಬಲಿ ಪಡೆದರು. ಆತನ ಸಂಸಾರ ಅನಾಥವಾಗಿದೆ, ಮಕ್ಕಳು ಚಿಕ್ಕವರಿದ್ದಾರೆ, ಮುಂದಿನದೆಲ್ಲವನ್ನು ನೋಡಿಕೊಳ್ಳುವುದೇ ಹೇಗೆಂಬ ಚಿಂತೆ ಕಾಡುತ್ತಿದೆ, ಮರಳು ಮಾಫಿಯಕ್ಕೆ ಶಿಕ್ಷಿಸಬೇಕು ಎಂದು ಶಿವಕಾಂತ ಚವ್ಹಾಣ್ ರೋದಿಸುತ್ತಿದ್ದಾನೆ.
ಅಕ್ರಮ ಮರಳುಗಾರಿಕೆ ವಿರುದ್ದ ಧ್ವನಿ ಎತ್ತಿದ್ರೆ ಹುಷಾರ್!, ಉಡುಪಿಯಲ್ಲಿ ವ್ಯಕ್ತಿ ಮೇಲೆ ಹಲ್ಲೆ
18ಜಿಬಿ1 ಮತ್ತು 18ಜಿಬಿ2
ಚವಡಾಪುರ ತಾಂಡಾದಲ್ಲಿ ರೋಧಿಸುತ್ತಿರುವ ಮಯೂರ್ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಲೇ ಭಾವುಕರಾದ ಎಸ್ಪಿ ಇಶಾ ಪಂತ್, ಮನೆ ಮಂದಿಯೊಂದಿಗೆ ಬಹುಹೊತ್ತು ಕಳೆದ ಇಶಾ ಪಂತ್ ಸಾಂತ್ವನ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ