ಮೇಲ್ಛಾವಣಿಯಿಂದ ಆಯಾ ತಪ್ಪಿ ಚಿಪ್ಸ್ ಕರೆಯುವ ದೊಡ್ಡ ಬಾಣಲೆಗೆ ಬಿದ್ದಿದ್ದ ಯುವಕ ಸಾವು. ಕಳೆದ 13 ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡಿದ್ದ ಸಂದೇಶ್ ಚಿಕಿತ್ಸೆ ಫಲಕಾರಿಯಾಗದೆ ಸಾವು
ಚಿಕ್ಕಮಗಳೂರು (ಜೂ.17): ಮಲೆನಾಡಿನ ಯುವಕನ ಬಾಳಿನಲ್ಲಿ ಯಮ ಚಿಪ್ಸ್ ಕರೆಯುವ ಎಣ್ಣೆ ಬಾಣಲೆ ರೂಪದಲ್ಲಿ ಬಂದು ಆ ಯುವಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಚಿಪ್ಸ್ ಕರೆಯುವ ಬಾಣಲೆಗೆ ಬಿದ್ದಿದ್ದ 25 ವರ್ಷದ ಯುವಕ 13 ದಿನಗಳ ಬಳಿಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗವಾದ ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದಲ್ಲಿ ನಡೆದಿದೆ. ಮೃತನನ್ನ 25 ವರ್ಷದ ಯುವಕ ಸಂದೇಶ್ ಎಂದು ಗುರುತಿಸಲಾಗಿದೆ.
Dharmasthala Sowjanya Case: ಸಂತೋಷ್ ದೋಷಿಯಲ್ಲವೆಂದು 10ವರ್ಷದಿಂದ ಹೇಳಿದ್ದೇವೆ: ಸೌಜ
ಮೇಲ್ಛಾವಣಿಯಿಂದ ಆಯಾ ತಪ್ಪಿ ದೊಡ್ಡ ಬಾಣಲೆಗೆ ಬಿದ್ದಿದ್ದ ಯುವಕ :
ಮೃತ ಸಂದೇಶ್ ಕಿಕ್ರೆ ಗ್ರಾಮದಲ್ಲಿ ಚಿಪ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು. ಚಿಫ್ಸ್ ಫ್ಯಾಕ್ಟರಿಯಲ್ಲಿ 20ಕ್ಕೂ ಹೆಚ್ಚು ಯುವಕರು ಕೆಲಸ ಮಾಡುತ್ತಿದ್ದಾರೆ. ಕಳೆದ 13 ದಿನಗಳ ಹಿಂದೆ ಚಿಪ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ವೇಳೆ ಚಿಪ್ಸ್ ಕರೆಯುವ ಓಲೆಗೆ ತಾಪಮಾನ ಹೆಚ್ಚಿರಲಿ, ಎಣ್ಣೆ ಬೇಗ ಬಿಸಿಯಾಗಿಲಿ ಎಂಬ ಕಾರಣಕ್ಕೆ ಎಣ್ಣೆ ಅಂಶ ಇರುವ ತಾಪಮಾನವೂ ಹೆಚ್ಚಿರುವ ಗೇರು ಬೀಜಗಳನ್ನ ಹಾಕುತ್ತಾರೆ. ಹೊಗೆ ಹೆಚ್ಚಾಗಿ ಹೊಗೆ ಕಟ್ಟಿಕೊಂಡಿದ್ದ ಹೊಗೆ ಪೈಪ್ ಕ್ಲೀನ್ ಮಾಡಲು ಫ್ಯಾಕ್ಟರಿಯ ಮೇಲ್ಛಾವಣಿಗೆ ಹತ್ತಿದ್ದ ಸಂದೇಶ್ ಆಯಾ ತಪ್ಪಿ ಸೀದಾ ಚಿಪ್ಸ್ ಕರೆಯುವ ದೊಡ್ಡ ಬಾಣಲೆಗೆ ಬಿದ್ದಿದ್ದರು. ದೇಹದ ಶೇಕಡ 80 ರಷ್ಟು ಭಾಗ ಸುಟ್ಟು ಹೋಗಿತ್ತು. ಕೂಡಲೇ ಶೃಂಗೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿ ನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು.
Dharmasthala Sowjanya Case: ಧರ್ಮಸ್ಥಳ ಅಣ್ಣಪ್ಪ ಇಲ್ಲವಾದರೆ ಮಂಜುನಾಥ ನ್ಯಾಯ
ಕಳೆದ 13 ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡಿದ್ದ ಸಂದೇಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಂದೇಶ್ ಮೇಲ್ಛóವಾಣಿಗೆ ಹತ್ತಿದಾಗ ಕಬ್ಬಿಣದ ರಾಡ್ ಮೇಲೆ ನಡೆದು ಹೋಗಿದ್ದರೆ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಆದರೆ, ಸಂದೇಶ್ ಸಿಮೆಂಟ್ ಶೀಟ್ಗಳ ಮೇಲೆ ನಡೆದು ಹೋದ ಪರಿಣಾಮ ಆಯಾ ತಪ್ಪಿ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಅವರೇ ಬೆಂಕಿ ಹಾಕಿ ಕಾಯಿಸಿದ್ದ ಕುದಿಯತ್ತಿದ್ದ ಎಣ್ಣೆ ಬಾಣಲೆಗೆ ಬಿದ್ದು ತಲೆ ಹಾಗೂ ಕಾಲು ಬಿಟ್ಟು ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು. 13 ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ಸಂದೇಶ ಸಾವನ್ನಪ್ಪಿದ್ದಾರೆ.