ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಮಾಡ್ತಿದ್ದ ಕಮೆಂಟ್ಸ್ ಏನು? ಇಷ್ಟ್ಯಾಕೆ ಸಿಟ್ಟು?

By Kannadaprabha News  |  First Published Jun 12, 2024, 7:35 AM IST

ಇನ್‌ಸ್ಟಾಗ್ರಾಂನಲ್ಲಿ ತನ್ನ ಪ್ರಿಯತಮೆಗೆ ಮರ್ಮಾಂಗದ ಪೋಟೋ ಕಳುಹಿಸಿ ಲೈಂಗಿಕ ಕ್ರಿಯೆಗೆ ಬರುವಂತೆ ರೇಣುಕಾಸ್ವಾಮಿ ಆಹ್ವಾನಿಸಿದ್ದೇ ನಟ ದರ್ಶನ್ ಸಿಟ್ಟಿಗೇಳಲು ಕಾರಣವಾಗಿದೆ ಎಂದು ತಿಳಿದು ಬಂದಿದೆ. 
 


ಬೆಂಗಳೂರು (ಜೂ.12): ಇನ್‌ಸ್ಟಾಗ್ರಾಂನಲ್ಲಿ ತನ್ನ ಪ್ರಿಯತಮೆಗೆ ಮರ್ಮಾಂಗದ ಪೋಟೋ ಕಳುಹಿಸಿ ಲೈಂಗಿಕ ಕ್ರಿಯೆಗೆ ಬರುವಂತೆ ರೇಣುಕಾಸ್ವಾಮಿ ಆಹ್ವಾನಿಸಿದ್ದೇ ನಟ ದರ್ಶನ್ ಸಿಟ್ಟಿಗೇಳಲು ಕಾರಣವಾಗಿದೆ ಎಂದು ತಿಳಿದು ಬಂದಿದೆ. ಇನ್‌ಸ್ಟಾಗ್ರಾಂನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಪವಿತ್ರಾಗೌಡ ಪರೋಕ್ಷವಾಗಿ ಪೋಸ್ಟ್ ಹಾಕಿದ್ದು ವಿವಾದವಾಗಿತ್ತು. ಆ ವಿವಾದದ ಬಳಿಕ ಪವಿತ್ರಾ ಗೌಡರಿಗೆ ರೇಣುಕಾಸ್ವಾಮಿ ಕಾಟ ಶುರುವಾಗಿದೆ. ತನ್ನನ್ನು ದರ್ಶನ್‌ ಅಭಿಮಾನಿ ಎಂದು ಹೇಳಿಕೊಂಡು ಆತ, ಇನ್‌ಸ್ಟಾಗ್ರಾಂನಲ್ಲಿ ಪವಿತ್ರಾರವರ ಪೋಟೋಗಳಿಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದ.

ಇನ್‌ಸ್ಟಾಗ್ರಾಂನಲ್ಲಿ ‘ತನೀಶಾ ರೆಡ್ಡಿ 2205’ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ರೇಣುಕಾಸ್ವಾಮಿ, ಪ್ರೊಫೈಲ್‌ಗೆ ಯುವತಿ ಭಾವಚಿತ್ರ ಹಾಕಿದ್ದ. ‘how come darshan sir not travelling with u. he is seen only with his wife vijay lakshmi, ashte bidi paapa nivu keep, keep he in the society’. ‘issue madi joker aghidhu public nallie, same nimma fiend pavithra xyz, so pls u take her, this time karnataka janna avali jyothe nimminu serisi adbitharu publicenalli’

Tap to resize

Latest Videos

ಹಿಂಸಿಸಿ.. ಕೊಂದು, ಮೋರಿಗೆ ಎಸೆದ್ರು; ಕೊಲೆ ಕೇಸ್‌ನಲ್ಲಿ ದರ್ಶನ್‌ ಪೊಲೀಸರ ಎದುರು ಹೇಳಿದ್ದೇನು?

ಹೀಗೆ ರೇಣುಕಾಸ್ವಾಮಿ ಕಾಮೆಂಟ್ ಹಾಕಿದ್ದ. ಇದಲ್ಲದೆ ಇನ್‌ಸ್ಟಾಗ್ರಾಂನಲ್ಲಿ ಪವಿತ್ರಾಗೌಡರಿಗೆ ಖಾಸಗಿಯಾಗಿ ಆತ ನಿರಂತರವಾಗಿ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಿದ್ದ. ಇದೂ ಅತಿರೇಕಕ್ಕೆ ಹೋಗಿ ಮರ್ಮಾಂಗದ ಪೋಟೋ ಕಳುಹಿಸಿ ಆತ ವಿಕೃತಿ ಮೆರೆದಿದ್ದ. ಈ ಮೆಸೇಜ್‌ ಬಗ್ಗೆ ದರ್ಶನ್‌ಗೆ ಪವಿತ್ರಾಗೌಡ ತಿಳಿಸಿದ್ದಳು. ಆಗ ಕೆರಳಿದ ದರ್ಶನ್‌, ರೆಡ್ಡಿ ಹೆಸರಿನ ಖಾತೆ ಬಗ್ಗೆ ವಿಚಾರಿಸಿದಾಗ ರೇಣುಕಾಸ್ವಾಮಿ ಎಂಬುದು ಗೊತ್ತಾಗಿದೆ. ಬಳಿಕ ಬೆದರಿಸಿ ಎಚ್ಚರಿಕೆ ಕೊಡಲು ಕರೆತಂದು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಟೈಂ ಬರುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದ ಪವಿತ್ರಾ: ರೇಣುಕಾಸ್ವಾಮಿ ಕಾಮೆಂಟ್‌ಗಳಿಗೆ ಪವಿತ್ರಾ ಪರ ಆಕೆಯ ಸ್ನೇಹಿತೆ ಪ್ರತಿಕ್ರಿಯಿಸಿದ್ದರು. ಆಗ ತನ್ನ ಸ್ನೇಹಿತೆಗೆ ಸತ್ಯ ಸಂಗತಿ ತಿಳಿಯದೆ ಮಾತನಾಡುವ ಮೂರ್ಖ ಜನರ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸದಂತೆ ಹೇಳಿದ್ದ ಪವಿತ್ರಾ, ಸಮಯವೇ ಉತ್ತರಿಸುತ್ತದೆ ಕಾದು ನೋಡು ಎಂದಿದ್ದಳು.

Darshan Arrest: ಜಡ್ಜ್‌ ಮುಂದೆ ಕಣ್ಣೀರಿಟ್ಟ ದರ್ಶನ್‌, ಪವಿತ್ರಾ ಗೌಡ!

ಯುವತಿ ಸೋಗಿನಲ್ಲಿ ಬಲೆಗೆ ಬೀಳಿಸಿದರು: ಇನ್‌ಸ್ಟಾಗ್ರಾಂನಲ್ಲಿ ತನಿಷಾ ರೆಡ್ಡಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪವಿತ್ರಾಗೌಡರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಾಟ ಕೊಡುತ್ತಿರುವುದು ರೇಣುಕಾಸ್ವಾಮಿ ಎಂಬುದು ದರ್ಶನ್‌ ಗ್ಯಾಂಗ್‌ ಗೊತ್ತಾಗಿದೆ. ಆಗ ಆತನ ಪೂರ್ವಾಪರ ವಿಚಾರಿಸಿದಾಗ ಚಿತ್ರದುರ್ಗದಲ್ಲಿ ಔಷಧಿ ಅಂಗಡಿ ಕೆಲಸಗಾರ ಎಂಬ ಮಾಹಿತಿ ಸಿಕ್ಕಿದೆ. ನಂತರ ಇನ್‌ಸ್ಟಾಗ್ರಾಂನಲ್ಲಿ ಯುವತಿ ಹೆಸರಿನಲ್ಲಿ ಚಿತ್ರದುರ್ಗ ಜಿಲ್ಲೆ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಖಾತೆ ತೆರೆದು ರೇಣುಕಾಸ್ವಾಮಿಯನ್ನು ಖೆಡ್ಡಾಕ್ಕೆ ಕೆಡವಿದ್ದಾನೆ. ಕೆಲ ದಿನಗಳ ಕಾಲ ಯುವತಿ ಸೋಗಿನಲ್ಲಿ ರೇಣುಕಾಸ್ವಾಮಿ ಜತೆ ಆತ ಚಾಟ್ ಮಾಡಿ ಅಂತಿಮವಾಗಿ ಶನಿವಾರ ಭೇಟಿಗೆ ಆಹ್ವಾನಿಸಿದ್ದಾನೆ. ಯುವತಿ ಭೇಟಿ ಮಾಡುವ ಆಸೆಯಿಂದ ಬಂದು ರೇಣುಕಾಸ್ವಾಮಿ ದರ್ಶನ್‌ ಗ್ಯಾಂಗ್ ಬಲೆಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.

click me!