ವರದಕ್ಷಿಣೆ ನೀಡದ್ದಕ್ಕೆ ಗ್ಯಾಂಗ್‌ರೇಪ್‌: ವಿಡಿಯೋ ಯೂಟ್ಯೂಬ್‌ಗೇ ಅಪ್ಲೋಡ್‌

Published : Apr 30, 2022, 10:49 AM IST
ವರದಕ್ಷಿಣೆ ನೀಡದ್ದಕ್ಕೆ ಗ್ಯಾಂಗ್‌ರೇಪ್‌: ವಿಡಿಯೋ ಯೂಟ್ಯೂಬ್‌ಗೇ ಅಪ್ಲೋಡ್‌

ಸಾರಾಂಶ

ವರದಕ್ಷಿಣೆ ನೀಡದ್ದಕ್ಕೆ ಪತಿ ಹಾಗೂ ಸಂಬಂಧಿಗಳಿಂದ ಹೇಯ ಕೃತ್ಯ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಅತ್ಯಾಚಾರದ ದೃಶ್ಯ ಚಿತ್ರೀಕರಿಸಿ ಯೂಟ್ಯೂಬ್‌ಗೆ ಅಪ್‌ಲೋಡ್

ಪತ್ನಿ ಕಡೆಯವರು ವರದಕ್ಷಿಣೆ ನೀಡಲಿಲ್ಲವೆಂದು ಸಿಟ್ಟಿಗೆದ್ದ ಪತಿ ಹಾಗೂ ಆತನ ಸಂಬಂಧಿಕರು ಪತ್ನಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಇಷ್ಟೇ ಅಲ್ಲದೇ ಪಾಪಿಗಳು ಸಾಮೂಹಿಕ ಅತ್ಯಾಚಾರದ ದೃಶ್ಯವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದಾರೆ. ರಾಜಸ್ತಾನ್ ಭರತ್‌ಪುರದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ವರದಕ್ಷಿಣೆ ಸಿಗದಕ್ಕೆ ಕ್ರೋಧಗೊಂಡ ಪತಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲು ಪ್ರೇರಣೆ ನೀಡಿದ್ದಾನೆ. ಅಲ್ಲದೇ ವರದಕ್ಷಿಣೆಯಿಂದ ಸಿಗದ ಹಣವನ್ನು ಪತ್ನಿಯ ಅಶ್ಲೀಲ ವಿಡಿಯೋದಿಂದ ಪಡೆಯುವುದಾಗಿ ಆತ ಬೆದರಿಕೆ ಹಾಕಿದ್ದು, ಅದರಂತೆ ಮಾಡಿದ್ದಾನೆ. ಆರೋಪಿಯೂ  1.5 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಬೇಡಿಕೆ ಇರಿಸಿದ್ದ ಎಂದು ತಿಳಿದು ಬಂದಿದೆ. 

ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವ ಮೂಲಕ ವರದಕ್ಷಿಣೆ ಹಣವನ್ನು ಪಡೆಯುವುದಾಗಿ ಪತಿ ತನ್ನ ಹೆಂಡತಿಗೆ ಹೇಳಿದ್ದಾನೆ. ಸಂತ್ರಸ್ತೆಯ ಪತಿ ಮತ್ತು ಆತನ ಸಂಬಂಧಿಕರಿಬ್ಬರ ವಿರುದ್ಧ ಈಗ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಭರತ್‌ಪುರದ (Bharatpur) ಕಮಾನ್ ಪೊಲೀಸ್ ಠಾಣೆಯ ಸ್ಟೇಷನ್ (Kaman Police Station) ಹೌಸ್ ಆಫೀಸರ್ (Station House Officer) ದೌಲತ್ ಸಾಹು ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮಹಿಳೆಯೊಬ್ಬಳು ತನ್ನ ಪತಿ ಮತ್ತು ಇಬ್ಬರು ಸಂಬಂಧಿಕರ ವಿರುದ್ಧ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದಾರೆ. ಯೂಟ್ಯೂಬ್‌ಗೆ ಅಶ್ಲೀಲ ವಿಡಿಯೋ (pornographic video) ಅಪ್‌ಲೋಡ್ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಸಮಯದಲ್ಲಿ, ಇದಿನ್ನೂ ದೃಢೀಕರಿಸಲ್ಪಟ್ಟಿಲ್ಲ ಎಂದು ತಿಳಿದು ಬಂದಿದೆ.

ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧ: ಮದುವೆಯಾಗಿ ವರುಷ ತುಂಬುವ ಮೊದಲೇ ಪತ್ನಿ ಆತ್ಮಹತ್ಯೆ!
ಸಂತ್ರಸ್ತೆ ನನ್ನ ಅತ್ತೆ ಮನೆಯವರು ವರದಕ್ಷಿಣೆಗಾಗಿ ನನಗೆ ಕಿರುಕುಳ ನೀಡುತ್ತಿದ್ದರು. ಅವರಿಗೆ ವರದಕ್ಷಿಣೆ ನೀಡದಿದ್ದಾಗ, ಅವರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು. ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಘಟನೆಯನ್ನು ಚಿತ್ರೀಕರಿಸಿದರು ಮತ್ತು ಆ ವೀಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದರು. ಆರೋಪಿಗಳಲ್ಲಿ ಒಬ್ಬನು ಐದು ದಿನಗಳ ಹಿಂದೆ ನನ್ನನ್ನು ಕಾಮನ್‌ಗೆ ಕರೆತಂದಿದ್ದ. ಮತ್ತು ನನ್ನ ಮೇಲೆ ಅತ್ಯಾಚಾರವೆಸಗಿದ. ಇದಾದ ನಂತರ ನಾನು ನಂತರ ಜಾಗೃತಗೊಂಡ ನಾನು ಅಲ್ಲಿಂದ ತಪ್ಪಿಸಿಕೊಂಡು ನನ್ನ ಮನೆಗೆ ಹೋದೆ.

Bengaluru: ವರದಕ್ಷಿಣೆ ತರದಿದ್ದಕ್ಕೆ ಪತ್ನಿಯ ಕೊಂದ!
ಅತ್ಯಾಚಾರಕ್ಕೊಳಗಾದ ಮಹಿಳೆಗೆ 2019ರಲ್ಲಿ ಹರಿಯಾಣದಲ್ಲಿ (Haryana) ಮದುವೆಯಾಗಿತ್ತು. ಅಂದಿನಿಂದಲೂ ಗಂಡನ ಮನೆಯವರು ಆಕೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಈ ಕಾರಣದಿಂದ ಆಕೆ ತನ್ನ ಪೋಷಕರ ಮನೆಗೆ ಮರಳಿದ್ದಳು. ಇದಾದ ಬಳಿಕ ಪತಿ ಆಕೆಯನ್ನು ಆಮಿಷವೊಡ್ಡಿ ಮತ್ತೆ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ.

ಆಕೆ ಪತಿಯ ಮನೆಗೆ ಹಿಂದಿರುಗಿದ ನಂತರ, ಪತಿ ತನ್ನ ಇಬ್ಬರು ಸಂಬಂಧಿಕರನ್ನು ಮನೆಗೆ ಕರೆಸಿದ್ದ. ಅಲ್ಲದೇ ಪತ್ನಿಯ ಮುಂದೆಯೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವಂತೆ ಸಂಬಂಧಿಕರಿಗೆ ಹೇಳಿ ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ನಿಮ್ಮ ಕುಟುಂಬದ ಸದಸ್ಯರು ನನಗೆ ವರದಕ್ಷಿಣೆ ನೀಡಲು ಸಾಧ್ಯವಿಲ್ಲ, ಆದರೆ ಈಗ ನಾನು ಈ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ(YouTube) ಹಾಕುವ ಮೂಲಕ ಅದೇ ಮೊತ್ತವನ್ನು ಗಳಿಸುತ್ತೇನೆ ಎಂದು ಕೃತ್ಯವೆಸಗುವ ಮೊದಲು ಹೇಳಿದ ಆತ ನಂತರ ಈ ಅಶ್ಲೀಲ ವೀಡಿಯೊವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಇತ್ತೀಚೆಗೆ ಕೌಟುಂಬಿಕ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಪತಿ ಪತ್ನಿಯ ರ ನಡುವೆ ಗಲಾಟೆ ಮಾಮೂಲಿ ಎನಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!