PSI Scam: ಹದಿನೆಂಟು ದಿನಗಳಲ್ಲಿ ಸುತ್ತಾಡಿದ್ದು ಎಲ್ಲೆಲ್ಲಿ ? ಆ 18 ದಿವ್ಯ ದಿನಗಳು!

By Suvarna News  |  First Published Apr 29, 2022, 2:23 PM IST

* ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ರೂವಾರಿ ದಿವ್ಯಾ ಹಾಗರಗಿ ಕಡೆಗೂ ಅರೆಸ್ಟ್
* ಹದಿನೆಂಟು ದಿನಗಳಲ್ಲಿ ಸುತ್ತಾಡಿದ್ದು ಎಲ್ಲೆಲ್ಲಿ ?  
* ಇಲ್ಲಿದೆ ಆ 18 ದಿವ್ಯ ದಿನಗಳು!


ವರದಿ :- ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ

ಕಲಬುರಗಿ. (ಏ.29):
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ರೂವಾರಿ ದಿವ್ಯ ಹಾಗರಗಿ ಕಡೆಗೂ ಅರೆಸ್ಟ್ ಆಗಿದ್ದಾರೆ. ದಿವ್ಯ 18 ದಿನಗಳಿಂದ ನಾಪತ್ತೆಯಾಗಿದ್ದರು.‌ ಹಾಗಾದರೆ ಆ 18 ದಿವ್ಯ ದಿನಗಳು ಹೇಗಿದ್ದವು ? ಆ ಹದಿನೆಂಟು ದಿನಗಳಲ್ಲಿ ದಿವ್ಯ ಸುತ್ತಾಡಿದ್ದು ಎಲ್ಲೆಲ್ಲಿ ? ಎನ್ನುವದರ ಫುಲ್ ಡಿಟೇಲ್ಸ್ ಈ ಕೆಳಗನಂತಿದೆ.

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ದಿವ್ಯ ಕಳೆದ ರಾತ್ರಿ ಸಿಐಡಿ ಪೊಲೀಸರಿಗೆ ಸಿಕ್ಕು ಬಿದ್ದಿದ್ದಾಳೆ. ಮಹಾರಾಷ್ಟ್ರದ ಪೂನಾ ಹೊರವಲಯದ ಮನೆಯೊಂದರಲ್ಲಿ ಅಡಗಿದ್ದ ದಿವ್ಯ ಹಾಗರಗಾ ಹಾಗೂ ಹಾಗೂ ಆಕೆಯ ಜ್ಞಾನಜ್ಯೋತಿ ಶಾಲೆಯ ಮೇಲ್ವಿಚಾರಕರಾದ ಅರ್ಚನಾ ಮತ್ತು ಸುನಂದಾ ಅವರನ್ನು ಸಹ ಸಿಐಡಿ ಪೊಲೀಸರು ಬಂಧಿಸಿದ್ದಾರೆ. 

Latest Videos

undefined

PSI recruitment Scam: ಮಾಸ್ಟರ್‌ ಮೈಂಡ್‌ ದಿವ್ಯಾ ಹಾಗರಗಿ ಬಂಧನವಾಗಿದ್ದು ಹೇಗೆ?

ಈ ದಿವ್ಯ ಹಾಗರಗಿ ಮತ್ತು ಟೀಮ್  ಕಳೆದ 18 ದಿನಗಳಿಂದ ಸಿಐಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದರು. ದಿವ್ಯ ತಲೆಮರೆಸಿಕೊಂಡಿದ್ದ ಹದಿನೆಂಟು ದಿನಗಳ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ..

10 ರಂದು ಮನೆಯಿಂದ ಪರಾರಿ
ದಿವ್ಯಾ ಹಾಗರಗಿ ಕಲಬುರಗಿಯ ತನ್ನ ಮನೆಯಿಂದ ಪರಾರಿಯಾಗಿದ್ದು ಏ. 10 ರಂದು ಮಧ್ಯಾಹ್ನ.. ಕಲಬುರಗಿಯಿಂದ ಅಫಜಲಪೂರ ರಸ್ತೆ 7-8 ಕಿಲೋ ಮೀಟರ ಅವರ ವಾಹನ ಕ್ರಮಿಸಿದ ನಂತರ ದಿವ್ಯಾಳ ಮೊಬೈಲ್ ಸ್ವಿಚ್ಛ ಆಫ್ ಆಗಿತ್ತು. ಆ ನಂಬರ್ ಇದುವರೆಗೂ ಆನ್ ಆಗಿಲ್ಲ ಎನ್ನುವುದು ಗಮನಾರ್ಹ. 

ಸೊಲ್ಲಾಪೂರದಲ್ಲಿ ಎರಡು ದಿನ
ಏ. 10 ರಂದು ಕಲಬುರಗಿಯಿಂದ ಅಫಜಲಪುರ ಮಾರ್ಗವಾಗಿ ಸೊಲ್ಲಾಪೂರ ತಲುಪಿದ ದಿವ್ಯಾ ಹಾಗರಗಿ ಸೊಲ್ಲಾಪೂರದಲ್ಲಿ ಎರಡು ದಿನ ತಂಗಿದ್ದಳು. ಏ.11 ಮತ್ತು 12 ರಂದು ಎರಡು ದಿನ ಸೊಲ್ಲಾಪೂರದಲ್ಲಿ ಕಳೆದ ದಿವ್ಯಾ ಅಲ್ಲಿ ಸಿದ್ರಾಮೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಳು..

ಪುನಾದಲ್ಲಿ ಐದು ದಿನ
ಆ ನಂತರ ಏ. 13 ರಂದು ಸೊಲ್ಲಾಪೂರದಿಂದ ಪೂನಾಗೆ ತೆರಳಿತ್ತು ದಿವ್ಯಾ & ಟೀಂ. ಅಲ್ಲಿ ಐದು ದಿನಗಳ ಕಾಲ ಪೂನಾದಲ್ಲಿಯೇ ಬೀಡು ಬಿಟ್ಟಿದ್ದಳು. ಏ. 14, 15, 16,17,18 ರವರೆಗೆ ದಿವ್ಯಾ ಪೂನಾದಲ್ಲಿ ವಾಸ್ತವ್ಯ ಮಾಡಿದ್ದಳು.

ಗುಜರಾತ್‌ನಲ್ಲಿ ಮೂರು ದಿನ
ಸಿಐಡಿ ತನ್ನ ಬೆನ್ನು ಬಿದ್ದಿರುವುದು ಖಚಿತವಾಗುತ್ತಿದ್ದಂತೆಯೇ ದಿವ್ಯಾ ಹಾಗರಗಿ ಗುಜರಾತಗೆ ಶಿಫ್ಟ್ ಆಗಿದ್ದಳು. ಗುಜರಾತನಲ್ಲಿ ಮೂರು ದಿನಗಳ ಕಾಲ ತಂಗಿದ್ದ ದಿವ್ಯಾ ಹಾಗರಗಿ. ಏ. 19, 20, 21 ರಂದು ಮೂರು ದಿನ ಗುಜರಾತನಲ್ಲಿ ತಂಗಿದ್ದ ದಿವ್ಯಾ ಮತ್ತು ಇನ್ನಿಬ್ಬರು ಪರಿಕ್ಷಾ ಮೇಲ್ವಿಚಾರಕರು. 

ಕೈಕೊಟ್ಟ ಕಾಳಿ ಮಾತೆ
ದಿವ್ಯಾ ಹಾಗರಗಿ ಮೂರು ದಿನ ಗುಜರಾತನಲ್ಲಿ ತಂಗಿದ್ದಾಗ ಅಲ್ಲಿನ ಪ್ರಸಿದ್ದ ದೇವಸ್ಥಾನಗಳಿಗೆ ನಿರಂತರವಾಗಿ ಹೋಗುತ್ತಿದ್ದಳು. ಗುಜರಾತನ ಕಾಳಿ ಮಾತಾ ದೇವಸ್ಥಾನಕ್ಕೆ ಮೂರು ದಿನವೂ ಹೋಗಿ ಬೇಡಿಕೊಂಡಿದ್ದಳು. ಆದ್ರೂ ಅಕ್ರಮದ ರುವಾರಿ ದಿವ್ಯಾಗೆ ಕಾಳಿ ಮಾತಾ ಕೈ ಹಿಡಿಯಲಿಲ್ಲ ಎನ್ನುವುದು ಗಮನಾರ್ಹ. 

ಮರಳಿ ಪೂನಾಕ್ಕೆ
ಏ. 21 ರಂದು ಗುಜರಾತನಿಂದ ಹೊರಟು ಏ. 22 ರಂದು ಮರಳಿ ಪೂನಾ ಸೇರಿದ್ದಳು ದಿವ್ಯಾ ಹಾಗರಗಿ. ಅಲ್ಲದೇ ಏ. 22 ರಿಂದ ಏ.28 ರವರೆಗೆ ಪೂನಾ ಹೊರವಲಯದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದಳು..

ಸಿಐಡಿ ದಾಳಿ
ಕಳೆದ ರಾತ್ರಿ ಸಿಐಡಿ ಪೂನಾ ಹೊರವಲಯದ ಮನೆ ಮೇಲೆ ದಾಳಿ ನಡೆಸಿದಾಗ ದಿವ್ಯಾ ಹಾಗರಗಿ ಮತ್ತು ಪರೀಕ್ಷಾ ಮೇಲ್ವಿಚಾರಕರಾದ ಅರ್ಚನಾ ಮತ್ತು ಸುನಂದಾ ಅವರನ್ನೂ ಸಹ ಬಂಧಿಸಲಾಗಿದೆ. ಇದು ದಿವ್ಯಾ ನಾಪತ್ತೆಯಾಗಿದ್ದ ಅವಧಿಯ ಆ 18 ದಿವ್ಯ ದಿನಗಳ ಸಂಕ್ಷಿಪ್ತ ಮಾಹಿತಿ. 

3 ಲಕ್ಷ ನಗದು ಸಮೇತ ಪರಾರಿ
ದಿವ್ಯಾ ಹಾಗರಗಿ ಪರಾರಿಯಾಗುವ ಮುನ್ನ ಮೂರು ಲಕ್ಷ ರೂಪಾಯಿ ನಗದು ಹಣ ತೆಗೆದುಕೊಂಡು ಹೋಗಿದ್ದಳು. ಇತ್ತ ಗಂಡ ರಾಜೇಶ ಅರೆಸ್ಟ್ ಆದ್ರೂ ದೃತಿಗೆಡದ ದಿವ್ಯಾ ತನ್ನ ಪ್ರಭಾವ ಬಳಸಿ ಸಿಐಡಿ ಕೈಗೆ ಸಿಗದಂತೆ 18 ದಿನ ಕಳೆದಿದ್ದಳು.

ಕಾಟೇಗಾಂವ್ ಶ್ರೀರಕ್ಷಕ
ದಿವ್ಯಾ ಹಾಗರಗಿ ಪರಾರಿಯಾದ ದಿನದಿಂದ ಕೆಲವರು ಸಹಕಾರ ನೀಡಿದ್ದಾರೆ ಎನ್ನುವುದು ಸಿಐಡಿಗೆ ಗೊತ್ತಿದೆ. ಅದಾಗ್ಯೂ ಅತಿ ಹೆಚ್ಚಿನ ಶ್ರೀರಕ್ಷೆ ನೀಡಿದ್ದು ಮಹಾರಾಷ್ಟ್ರದ ಉದ್ಯಮಿ ಸುರೇಶ ಕಾಟೇಗಾಂವ್. ಈ ಉದ್ಯಮಿ ಕಾಟೇಗಾಂವ್ ಮೂಲಕ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಅಕ್ಕಲಕೋಟೆಯವನು. ಸೊಲ್ಲಾಪೂರದಲ್ಲಿ ಬಹಳಷ್ಟು ಉದ್ಯಮ ನಡೆಸುತ್ತಿದ್ದಾನೆ. ಅಷ್ಟೇ ಅಲ್ಲ ಮಹಾರಾಷ್ಟ್ರದಿಂದ ಕಲಬುರಗಿವರೆಗೆ ಮರಳು ಮಾಫಿಯಾದ ಬಹುದೊಡ್ಡ ಕಿಂಗ ಪಿನ್ ಈ ಸುರೇಶ ಕಾಟೆಗಾಂವ್. ಕಲಬುರಗಿಯಲ್ಲಿ ಅಕ್ರಮ ಮರಳು ದಂದೆ ನಡೆಸಲು ದಿವ್ಯಾ ಆತನಿಗೆ ಸಪೋರ್ಟ ಮಾಡುತ್ತಿದ್ದಳು ಎನ್ನಲಾಗಿದೆ. ಆ ಋಣ ತೀರಿಸಲು ಸುರೇಶ ದಿವ್ಯಾಗೆ ಶ್ರೀರಕ್ಷೆ ನೀಡಿದ್ದ. ಸದ್ಯ ಈ ಸುರೇಶ ಮತ್ತು ಆತನೊಂದಿಗೆ ಇದ್ದ ಕಾಳಿದಾಸ ಎನ್ನುವಾತನನ್ನೂ ಸಿಐಡಿ ಪೊಲೀಸರು ಹೆಡೆಮುರಿ ಕಟ್ಟಿ ತರುತ್ತಿದ್ದಾರೆ

click me!