ವಧುವಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಭಗ್ನಪ್ರೇಮಿ

By Anusha Kb  |  First Published Apr 29, 2022, 1:37 PM IST
  • ಭಗ್ನಪ್ರೇಮಿಯಿಂದ ವಧುವಿನ ಬರ್ಬರ ಹತ್ಯೆ
  • ಮಥುರಾದ ಮುಬರಿಕ್‌ಪುರ ಗ್ರಾಮದಲ್ಲಿ ಘಟನೆ
  • ಕಂಟ್ರಿ ಮೇಡ್ ಪಿಸ್ತೂಲ್ ನಿಂದ ಗುಂಡಿಟ್ಟು ಹತ್ಯೆ

ನವದೆಹಲಿ: ಭಗ್ನ ಪ್ರೇಮಿಯೊಬ್ಬ ವಧುವಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ನಡೆದಿದೆ. ಮಥುರಾದ ನೌಜಿಲ್‌ನ (Naujheel) ಮುಬರಿಕ್‌ಪುರ (Mubarikpur) ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಆಘಾತಕಾರಿ ಘಟನೆ ನಡೆದಿದೆ. ವರದಿಗಳ ಪ್ರಕಾರ, ವಧುವಿನ ಕಣ್ಣುಗಳ ಬಳಿ ಗುಂಡು ತಗುಲಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಮಧ್ಯರಾತ್ರಿ 1.30ಕ್ಕೆ ನಡೆದಿದೆ ಎಂದು ತಿಳಿದು ಬಂದಿದೆ. ವಧುವನ್ನು ಹತ್ಯೆ ಮಾಡಿದ ಆರೋಪಿಯನ್ನು ಅನೀಶ್ (Aneesh) ಎಂದು ಗುರುತಿಸಲಾಗಿದ್ದು, ಆತ ವಧುವನ್ನು ಕಂಟ್ರಿ ಮೇಡ್ ಪಿಸ್ತೂಲ್ ನಿಂದ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. 

ವಧು ವರರು ಪರಸ್ಪರ ಹಾರ ಬದಲಾಯಿಸಿದ ನಂತರ ವಧು ಕೊಠಡಿಗೆ ತೆರಳಿದ್ದು, ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ಆಕೆಯ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ವಧುವಿನ ತಂದೆ ಹೇಳಿದ್ದಾರೆ. ಮೃತ ವಧುವನ್ನು ಮುಬಾರಕ್‌ಪುರ (Mubarakpur) ಗ್ರಾಮದ ನಿವಾಸಿ ಖುಬೀರಾಮ್ (Khubiram) ಅವರ ಪುತ್ರಿ ಕಾಜಲ್ (Kajal) ಎಂದು ಗುರುತಿಸಲಾಗಿದೆ. ವಧು ಕಾಜಲ್‌ಗೆ ನೊಯ್ಡಾ ಮೂಲದ ವರನೊಂದಿಗೆ ಮದುವೆ ನಿಗದಿಯಾದ ಬಳಿಕ ಕಾಜಲ್ ಪೋಷಕರು ವಿವಾಹಕ್ಕೆ ಸಿದ್ಧರಾಗಿದ್ದರು.

Uttar Pradesh | A bride was shot dead last night in Mubarikpur village of Naujheel, Mathura

"After 'Jai Mala', my daughter went to the room and an unknown person came and shot her," says father of the deceased girl

"We are probing the matter," says SP (Rural) Shrish Chandra pic.twitter.com/XQIwC25Loy

— ANI UP/Uttarakhand (@ANINewsUP)

Uttar Pradesh: Bride shot dead in Mubarikpur village of Naujheel, Mathura pic.twitter.com/mw54jZKJjz

— Newsroom Post (@NewsroomPostCom)

Tap to resize

Latest Videos

ಗುರುವಾರ ವರನ ಕಡೆಯ ಬಾರಾತ್ (ದಿಬ್ಬಣ) ಆಗಮಿಸಿತ್ತು. ಇನ್ನು ಈ ಆರೋಪಿ ವಧು ವರರು ಹಾರ ಬದಲಾಯಿಸುವ ಸಂದರ್ಭದಲ್ಲಿಯೂ ಕಲ್ಲು ತೂರಾಟ  ನಡೆಸಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಈತ ಅದೇ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ ಚಂದ್ರ (Shrish Chandra)  ಈ ಬಗ್ಗೆ ನಾವು ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು. ಆರೋಪಿಯು ಸಂತ್ರಸ್ತೆಯೊಂದಿಗೆ ಸಂಬಂಧ ಹೊಂದಿದ್ದು, ಆಕೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಆಗಿದ್ದರಿಂದ ಕೋಪಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಿ ನಿರಾಕರಿಸಿದ ಯುವತಿಯ ಮೇಲೆ ಆ್ಯಸಿಡ್‌ ದಾಳಿ: ಭಗ್ನ ಪ್ರೇಮಿಯ ಬಂಧನ

ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನ ಕಿರುಕುಳದಿಂದ ಬೇಸತ್ತ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ತಾಲೂಕು ನಗರಕೆರೆ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು. ಗ್ರಾಮದ 19 ವರ್ಷದ ತರುಣಿ ಸೋನಿಕ (Sonica) ಎಂಬಾಕೆಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವತಿ. ಅದೇ ಗ್ರಾಮದ ಮಂಜಪ್ಪಗೌಡ (Manjappa Gowda) ಎಂಬ ಯುವಕ ಕಳೆದ ಹಲವಾರು ದಿನಗಳಿಂದ ತನ್ನನ್ನು ಪ್ರೀತಿಸುವಂತೆ  ಆಕೆಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಆತನಿಗೆ ಬುದ್ದಿ ಹೇಳಿದ್ದರೂ ಕೇಳಿರಲಿಲ್ಲ. ಇದರಿಂದ ಬೇಸತ್ತ ಸೋನಿಕಾ, ಕೊನೆಗೆ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ಪ್ರೀತಿ ನಿರಾಕರಿಸಿದ್ದಕ್ಕೆ ಹುಡುಗಿ ಮೇಲೆ ಆ್ಯಸಿಡ್ ದಾಳಿ ಮಾಡಿದ ವಿಕೃತ ಪ್ರೇಮಿ
 

click me!