
ಸಹರ್ಸ: ದೇಶದ ವಿವಿಧ ರಾಜ್ಯಗಳ ಪೊಲೀಸರು ನೂರಾರು ವಿಚಾರಗಳಿಂದ ಕೆಟ್ಟ ಹೆಸರು ಪಡೆದಿದ್ದಾರೆ. ಲಂಚ ಪಡೆಯುವುದು, ಅಮಾಯಕರ ಮೇಲೆ ದೌರ್ಜನ್ಯ ಮಾಡುವುದರಿಂದ ಹಿಡಿದು ಸುಳ್ಳು ಕೇಸ್ ಹಾಕಿ ಜನರನ್ನು ಪೀಡಿಸುವವರೆಗೆ ನೂರೆಂಟು ಆರೋಪಗಳು ಪೊಲೀಸರ ಮೇಲಿವೆ. ಇದೇ ರೀತಿಯ ಇನ್ನೊಂದು ಘಟನೆ ಬಿಹಾರದ ಸಹರ್ಸ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪೊಲೀಸ್ ಠಾಣೆಯೊಳಗೆ ಮಹಿಳೆಯೊಬ್ಬಳಿಗೆ ಬೆದರಿಸಿ ಪೊಲೀಸ್ ಅಧಿಕಾರಿಯೊಬ್ಬ ಆಕೆಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಮಹಿಳೆಯನ್ನು ಹೆದರಿಸಿ ಮಸಾಜ್ ಮಾಡಿಕೊಳ್ಳುತ್ತಿದ್ದಾನೆ. ಅಲ್ಲೇ ಪಕ್ಕದಲ್ಲಿ ಆತನ ಯೂನಿಫಾರ್ಮ್ ಬಿಚ್ಚಿಟ್ಟಿರುವುದು ಸಹ ಕಾಣಿಸುತ್ತದೆ. ಪೊಲೀಸ್ ಠಾಣೆಯೊಳಗೆ ರಾಜಾರೋಷವಾಗಿ ಈ ಅಧಿಕಾರಿ ದರ್ಪ ಮೆರೆದಿದ್ದಾನೆ. ಮಹಿಳೆಯ ಮಗ ಯಾವುದೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ಅವನನ್ನು ಜಾಮೀನಿನ ಮೇಲೆ ಬಿಡಿಸುವಂತೆ ಮಹಿಳೆ ಮನವಿ ಮಾಡಲು ಪೊಲೀಸ್ ಠಾಣೆಗೆ ಬಂದಿದ್ದಾಳೆ. ಆಕೆಯ ಅಸಹಾಯತೆಯನ್ನು ದುರ್ಬಳಕೆ ಮಾಡಿಕೊಂಡ ಅಧಿಕಾರಿ ಬಟ್ಟೆ ಬಿಚ್ಚಿ ಮಸಾಜು ಮಾಡುವಂತೆ ಹೇಳಿದ್ದಾನೆ.
ಮಹಿಳೆ ಅಧಿಕಾರಿಗೆ ಪರಿಪರಿಯಾಗಿ ಬೇಡಿಕೊಂಡಿದ್ದಾಳೆ. ಈ ರೀತಿಯ ಕೆಲಸವನ್ನು ಮಾಡಲು ಇಷ್ಟವಿಲ್ಲ ಎಂದು ಬೇಡಿಕೊಂಡಿದ್ದಾಳೆ. ಆದರೆ ಅಧಿಕಾರಿ ಮಾತ್ರ ಬಟ್ಟೆ ಬೆಚ್ಚಿ ಮಸಾಜು ಮಾಡಿದರೆ ಮಗನನ್ನು ಬಿಡಿಸುತ್ತೇನೆ ಎಂದು ಹೆದರಿಸಿ ಮಸಾಜು ಮಾಡಿಸಿಕೊಂಡಿದ್ದಾನೆ. ಪೊಲೀಸ್ ಅಧಿಕಾರಿ ಮಸಾಜು ಮಾಡಿಸಿಕೊಳ್ಳುತ್ತಾ ವಕೀಲರೊಬ್ಬರ ಜೊತೆ ಮಾತನಾಡುತ್ತಿರುವ ಧ್ವನಿ ಕೂಡ ವಿಡಿಯೋದಲ್ಲಿ ಕೇಳುತ್ತಿದೆ.
ಇದನ್ನೂ ಓದಿ: ಯುವತಿ ಸಾವಿನ ಸುತ್ತ ಅನುಮಾನದ ಹುತ್ತ, ಆತ್ಮಹತ್ಯೆಯೋ? ಮರ್ಯಾದಾ ಹತ್ಯೆಯೋ?
ಆಂಗ್ಲ ಪತ್ರಿಕೆಯೊಂದಕ್ಕೆ ಮಾತನಾಡಿರುವ ಉಪ ವಿಭಾಗ ಪೊಲೀಸ್ ಅಧಿಕಾರಿ ಸಂತೋಶ್ ಕುಮಾರ್ ಘಟನೆ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರೂ ಈ ವಿಡಿಯೋನ್ನು ನೋಡಿರುವುದಾಗಿ ತಿಳಿಸಿದ ಸಂತೋಶ್ ಈಗಾಗಲೇ ಘಟನೆ ಸಂಬಂಧ ತನಿಖೆ ಮಾಡಿರುವುದಾಗಿ ತಿಳಿಸಿದ್ದಾರೆ. ಘಟನೆ ಸಂಬಂಧ ತನಿಖೆ ಮಾಡಿ ವರದಿಯನ್ನು ಜಿಲ್ಲಾ ವರಿಷ್ಠಾಧಿಕಾರಿಗೆ ಕೊಟ್ಟಿದ್ದೇನೆ ಮುಂದಿನ ಕ್ರಮವನ್ನು ಅವರು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗಂಡನಿಗೆ ಮೋಸ, ಗದ್ದೆಯಲ್ಲಿ ಬಾಯ್‌ಫ್ರೆಂಡ್ ಜತೆ ಚಕ್ಕಂದ: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಹೆಂಡತಿ
ಒಟ್ಟಿನಲ್ಲಿ ಜನರಿಗೆ ಸಹಾಯಮಾಡಬೇಕಾದ ಪೊಲೀಸರು, ಜನರನ್ನು ಹೆದರಿಸಿ ಅವರ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿದ್ದಾರೆ. ಇದೇ ರೀತಿಯ ಘಟನೆಗಳು ದೇಶಾದ್ಯಂತ ಆಗಾಗ ಕೇಳಿ ಬರುತ್ತಲೇ ಇದೆ, ಆದರೂ ಇಲಾಖೆ ಮಾತ್ರ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಕಾಣುತ್ತಿಲ್ಲ. ಹಾಗಂತ ಯಾರೋ ಒಬ್ಬರು ಮಾಡುವ ತಪ್ಪಿನಿಂದ ಇಡೀ ಇಲಾಖೆಯನ್ನು ದೂರಲೂ ಸಾಧ್ಯವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ