ನೀರಿನ ಬಿಲ್ ಜಾಸ್ತಿ ಕೇಳಿದ ಮಾಲೀಕ: ನೇಣಿಗೆ ಶರಣಾದ ದಂಪತಿ

Published : May 24, 2022, 04:05 PM IST
ನೀರಿನ ಬಿಲ್ ಜಾಸ್ತಿ ಕೇಳಿದ ಮಾಲೀಕ: ನೇಣಿಗೆ ಶರಣಾದ ದಂಪತಿ

ಸಾರಾಂಶ

ಮಹಾರಾಷ್ಟ್ರದಲ್ಲಿ ಕ್ಷುಲ್ಲಕ ಕಾರಣಕ್ಕೆ ದಂಪತಿ ಆತ್ಮಹತ್ಯೆ ನೀರಿಗೆ ಬಿಲ್ ಜಾಸ್ತಿ ಕೇಳಿದರು ಎಂದು ದಂಪತಿ ಸಾವು ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ನೀಡಲು ಸೂಚನೆ

ನಾಗಪುರ: ಕ್ಷುಲ್ಲಕ ಕಾರಣಕ್ಕೆ ದಂಪತಿ ನೇಣಿಗೆ ಶರಣಾದ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ (Nagpur) ನಡೆದಿದೆ. ತಾವು ಬಾಡಿಗೆಗಿದ್ದ ಮನೆಯ ಮಾಲೀಕ ನೀರಿನ ಬಿಲ್ ಜಾಸ್ತಿ ಕೇಳಿದರೆಂಬ ದಂಪತಿ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗಪುರದ ಕಲಮ್ನಾ (Kalamna) ಪ್ರದೇಶದಲ್ಲಿ ಈ ಅನಾಹುತ ನಡೆದಿದೆ. ಹೀಗೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಜೋಡಿಯನ್ನು 45 ವರ್ಷ ಪ್ರಾಯದ ಮನೋಜ್ ವಾಸುದೇವ್ ಲೋಧಿ (Manoj Vasudeo Lodhi) ಹಾಗೂ 40 ವರ್ಷದ ಮಮ್ತಾ (Mamta) ಎಂದು ಗುರುತಿಸಲಾಗಿದೆ. ಇವರಿಬ್ಬರು ಗೌರಿ ನಗರದ (Gauri Nagar)  ನಿವಾಸಿಗಳಾಗಿದ್ದಾರೆ. ಭಾನುವಾರ ರಾತ್ರಿ ಇವರು ನೇಣಿಗೆ ಶರಣಾಗಿದ್ದು, ಸ್ಥಳದಲ್ಲಿ ಡೆತ್‌ನೋಟ್‌ (suicide note) ಪತ್ತೆಯಾಗಿದೆ. ಅದರಲ್ಲಿ ಅವರು ತಾವು ಬಾಡಿಗೆಗಿದ್ದ ಮನೆಯ ಮಾಲೀಕ ಇಸ್ಫಾಖ್‌ ಶೇಖ್‌ (Ishfaq Sheikh) ನೀರಿಗೆ ಹೆಚ್ಚಿನ ಬಿಲ್ ಹಾಕಿದ್ದಾನೆ ಎಂದು ಬರೆದಿದ್ದಾರೆ.

ಅಲ್ಲದೇ ತಮ್ಮ ಮೃತದೇಹವನ್ನು (dead body) ಮೆಡಿಕಲ್ ಕಾಲೇಜಿಗೆ (Medical college) ನೀಡುವಂತೆ ದಂಪತಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಈ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲು ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಲಮ್ನಾ ಪೊಲೀಸ್ ಠಾಣೆ (Police station) ಅಧಿಕಾರಿಗಳು ಹೇಳಿದ್ದಾರೆ. 

22ನೇ ಮಹಡಿಯಿಂದ ಜಿಗಿದು ಯುವಕ ಯುವತಿ ಆತ್ಮಹತ್ಯೆ

ಬಾರದ ಹಿಂದಷ್ಟೇ ಮುಂಬೈನಲ್ಲಿ ವಾಟ್ಸಾಪ್‌ನಲ್ಲಿ(WhatsApp) ಗೆಳೆಯ ಬ್ಲಾಕ್ ಮಾಡಿಬಿಟ್ಟ ಎಂದು ನೊಂದು 20ರ ಹರೆಯದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಇಬ್ಬರು ಪರಸ್ಪರ ಜಗಳವಾಡಿಕೊಂಡಿದ್ದು, ಇದಾದ ಬಳಿಕ ಯುವಕ ಆಕೆಯ ಸಂಖ್ಯೆಯನ್ನು ವಾಟ್ಸಾಪ್‌ನಲ್ಲಿ ಬ್ಯಾಕ್‌ ಮಾಡಿದ್ದ. ಇದಾದ ಬಳಿಕ ಯುವತಿ ಮುಂಬೈನ ಉಪನಗರದ ದಹಿಸರ್‌ನ ರೈಲ್ವೆ ಹಳಿಗಳ ಪಕ್ಕದಲ್ಲಿರುವ ತನ್ನ ಗೆಳೆಯನ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ತನ್ನ ದುಪ್ಪಟ್ಟದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ಯುವತಿಯನ್ನು ಪ್ರಣಾಲಿ ಲೋಕರೆ (Pranali Lokare) ಎಂದು ಗುರುತಿಸಲಾಗಿದೆ.

ವಾಟ್ಸಾಪ್‌ ನಲ್ಲಿ ಬಾಯ್ ಫ್ರೆಂಡ್ ಬ್ಲಾಕ್ ಮಾಡಿದ್ದಕ್ಕೆ ಯುವತಿ ಆತ್ಮಹತ್ಯೆ

ಮೃತ ಯುವತಿ ಹಾಗೂ ಆಕೆಯ 27 ವರ್ಷದ ಗೆಳೆಯ ಕಳೆದ ಆರು ತಿಂಗಳಿಂದ ಪರಸ್ಪರ ತಿಳಿದಿದ್ದರು. ಭಾನುವಾರ (ಮೇ.15) ರಾತ್ರಿ ಇಬ್ಬರೂ ಒಬ್ಬರ ಮದುವೆಗೆ ಹಾಜರಾಗಿದ್ದರು. ನಂತರ ಯುವತಿ ರಾತ್ರಿಯಿಡೀ ಆತ ಇದ್ದಲ್ಲಿಯೇ ತಾನೂ ಇರಬೇಕೆಂದು ಬಯಸಿದ್ದಳು. ಅಲ್ಲದೇ ಹುಡುಗನ ನಿವಾಸದಲ್ಲೇ ಇರಲು ಬಯಸಿದ್ದಳು. ಆದರೆ ಇದಕ್ಕೆ ಒಪ್ಪದ ಆತ ಆಕೆಯನ್ನು ಮನೆಗೆ ಹೋಗುವಂತೆ ಹೇಳಿದ್ದಾನೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ಇದಾದ ಬಳಿಕ ಹೊರಟು ಹೋದ ಆಕೆ ಮತ್ತೆ ಆತನಿಗೆ ಕರೆ ಮಾಡಿ ಆತನಿದ್ದಲ್ಲಿಗೆ ತಾನು ಬರವುದಾಗಿ ಹೇಳಲು ಶುರು ಮಾಡಿದ್ದಾಳೆ. ಆದರೆ ಆ ಪ್ರದೇಶದಲ್ಲಿ ರಾತ್ರಿಯ ಸಮಯದಲ್ಲಿ ಹಲವಾರು ಮಾದಕ ವ್ಯಸನಿಗಳು ತಿರುಗಾಡುತ್ತಿರುತ್ತಾರೆ. ಹಾಗಾಗಿ ಈ ರೀತಿ ಆಡದಂತೆ ಹೇಳಿದ ಯುವಕ ನಂತರ ಆಕೆಯನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದಾನೆ. 

ಇದಾದ ನಂತರವೂ ಯುವತಿ ರಾತ್ರಿಯೇ ಯುವಕನಿದ್ದಲ್ಲಿಗೆ ಹೋಗಿದ್ದು, ಅವಳನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದು ಏಕೆ ಎಂದು ಆತನನ್ನು ಪ್ರಶ್ನಿಸಲು ಶುರು ಮಾಡಿದ್ದಾಳೆ. ನಂತರ ಯುವಕ ಏನು ಮಾಡಿದನೋ ತಿಳಿದಿಲ್ಲ. ಆತನ ನಿವಾಸದಲ್ಲೇ ಆಕೆ ತನ್ನ ದುಪ್ಪಟ್ಟದಿಂದಲೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ