* ಮೂರುವರೆ ಲಕ್ಷದ ಬೊಲೆರೋ ವಾಹನಕ್ಕೆ 1 ಲಕ್ಷ ಫಿಕ್ಸ್ ಮಾಡಿದ್ದ ವಂಚಕ
* ಫೇಸ್‌ಬುಕ್ ಪರಿಚಯ ಮಾಡಿಕೊಂಡಿದ್ದ ಅನಾಮಧೇಯ ವ್ಯಕ್ತಿ
* ತರೀಕೆರೆ ಮೂಲದ ಶಿವಕುಮಾರ್‌ಗೆ ಮೋಸ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಮೇ.24): ಆಟೋ ಚಾಲಕನಿಗೆ ಅನಾಮಧೇಯ ವ್ಯಕ್ತಿಯೊಬ್ಬ ವಂಚನೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕರೆಯಲ್ಲಿ ನಡೆದಿದೆ. ಆಟೋ ಚಾಲಕನಿಂದ ಲಕ್ಷಾಂತರ ರೂಪಾಯಿ ಹಣ ಕೀಳುವ ಪ್ಲಾನ್ ಹಾಕಿದ ನಯವಂಚಕ. ಮೂರುವರೆ ಲಕ್ಷದ ಬೊಲೆರೋ ವಾಹನಕ್ಕೆ 1 ಲಕ್ಷ ಫಿಕ್ಸ್ ಮಾಡಿದ್ದ ಅದರ ಭಾಗವಾಗಿ ಸಾವಿರಾರು ರೂಪಾಯಿ ಹಣವನ್ನು ಕಿತ್ತುಕೊಂಡು ನಾಮ ಹಾಕಿದ್ದಾನೆ. ಅದು ಕೂಡ ಮಿಲಿಟರಿ ಅಧಿಕಾರಿ ಅಂತಾ ಹೇಳಿ ಹಣವನ್ನು ವಂಚನೆ ಮಾಡಿದ್ದಾನೆ. ಇದಕ್ಕೆ ನಯವಂಚಕ ಬಳಸಿಕೊಂಡಿದ್ದು ಫೇಸ್‌ಬುಕ್.
ಫೇಸ್‌ಬುಕ್‌ನಲ್ಲಿ ಹಿತನ್ನಾಗಿ ಹಣ ವಂಚನೆ
ಗೀತಾ ಶಿವಕುಮಾರ್ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ನಿವಾಸಿಗಳು. ಶಿವಕುಮಾರ್ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ರೆ, ತನ್ನಿಂದ ಕುಟುಂಬಕ್ಕೆ ಸ್ವಲ್ಪವಾದ್ರೂ ಸಹಾಯವಾಗಲಿ ಅಂತಾ ಗೀತಾ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು ಇವರಿಗೆ ಇಬ್ಬರು ಮಕ್ಕಳು. ಶಿವಕುಮಾರ್ ತನ್ನ ಪಾಡಿಗೆ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲ ದಿನಗಳ ಹಿಂದೆ ಮೊಬೈಲ್ ನಲ್ಲಿ ಫೇಸ್ ಬುಕ್ ಓಪನ್ ಮಾಡಿದ್ದಾರೆ. ಆಗ ಇವರಿಗೆ ಅನಾಮಿಕ ವ್ಯಕ್ತಿಯೊಬ್ಬರ ಪರಿಚಯವಾಗಿದೆ. ತಾನು ಮಿಲಿಟರಿ ಅಧಿಕಾರಿ ಅಂತಾ ಪರಿಚಯಿಸಿಕೊಂಡ ಆತ, ಬೊಲೆರೋ ವಾಹನ ಮಾರಾಟಕ್ಕೆ ಇಟ್ಟಿರೋದಾಗಿ ತಿಳಿಸಿದ್ದಾನೆ. ಮೂರು ಲಕ್ಷದ ಬೊಲೆರೋನ್ನ ಒಂದು ಲಕ್ಷಕ್ಕೆ ಸಿಗುತ್ತೆ ಅಂತಾ ಖುಷಿಯಾದ ಆಟೋ ಚಾಲಕ, ಆತನ ಮಾತನ್ನ ನಂಬಿ ಹಣವನ್ನ ಹಾಕಿದ್ದಾನೆ..ಅತ್ತ ಹಣವೂ ಇಲ್ಲ ವಾಹನವೂ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
Mandya Crime: ಫೇಸ್‌ಬುಕ್ ಸುಂದರಿ ಜತೆ ಮದುವೆಗೆ ಸಿದ್ಧತೆ ನಡೆಸಿ ಬೆಸ್ತುಬಿದ್ದ ಯುವಕ..!
ಬೊಲೆರೋ 1 ಲಕ್ಷ ಮಾರಾಟ ಎಂದು ಫೋಟೋ ಹಾಕಿ ವಂಚನೆ
ಶಿವಕುಮಾರ್‌ಗೆ ನಯವಂಚಕ ಮಿಲಿಟರಿ ಕಚೇರಿಯಲ್ಲಿ ಕೆಲಸ ಮಾಡ್ತಿರೋ ಪೋಟೋ ಹಾಕಿದ್ದಾನೆ. ಅಲ್ಲದೆ ಮಾರಾಟಕ್ಕಿಟ್ಟಿರೋ ಬೊಲೆರೋದ ಪೋಟೋ.. ಬೊಲೆರೋ ಮೇಲೆ ಆರ್ಮಿ ಅಂತಾ ಬರೆದಿರೋ ಫಲಕ ಬೇರೆ ಹಾಕಿ ಅದರ ಜೊತೆಗೆ ಒಂದಿಷ್ಟು ಗಾಡಿಯ ಡಾಕ್ಯುಮೆಂಟುಗಳು ಬೇರೆ ಹಾಕಿದ್ದೇನೆ. ಆದರೆ ನಯವಂಚಕ ಮೋಸ ಮಾಡಲು ಖತರ್ನಾಕ್ ಸಂಚು ರೂಪಿಸಿದ ಪ್ಲಾನ್ ಇದು. ಆದ್ರೆ ಇದನ್ನು ನಂಬಿದ ಶಿವಕುಮಾರ್ ಇದೀಗ ಹಣವನ್ನು ಕಳೆದುಕೊಂಡಿದ್ದಾರೆ.
ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಬಿಟೆಕ್ ಪದವೀಧರನ ಬಂಧನ
ಶಿವಕುಮಾರ್ ವಂಚಕನಿಗೆ ಪೋನ್ ಪೇ, ಬ್ಯಾಂಕಿನ ಖಾತೆ 20000, 20500, 29000,20000, 8000, 8200.. ಹೀಗೆ ಹಣವನ್ನು ಹಾಕಿದ್ದಾರೆ. ಈಗ ಹಣ ಹಾಕಿದ ಶಿವಕುಮಾರ್ ನ್ನು ಅಮಾಯಕರು ಅನ್ಬೇಕಾ. ಇಲ್ಲಾ ಕಷ್ಟ ಪಟ್ಟು ಕೂಲಿ ನಾಲಿ ಮಾಡಿ ಕೂಡಿಟ್ಟಿದ್ದ ಹಣವನ್ನ ಕಿತ್ಕೊಂಡ ಆತನನ್ನ ನಯವಂಚಕ ಅನ್ಬೇಕಾ..? ಅರ್ಥವಾಗ್ತಿಲ್ಲ..ಆದ್ರೆ ದಂಪತಿಗಳು ಇಂದು ಹಣ ಕಳೆದುಕೊಂಡು ಸಂಕಷ್ಟಕ್ಕೆ ಒಳಾಗಿದ್ದಾರೆ. ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸೋದು, ಜೀವನ ನಿರ್ವಹಣೆಗೆ ಸದ್ಯ ಬರುತ್ತಿದ್ದ ಆದಾಯ ಎಲ್ಲಿಗೂ ಸಾಕಾಗುತ್ತಿರಲಿಲ್ಲ. ಶಿವಕುಮಾರ್ ಗೆ ಆಟೋ ಬಾಡಿಗೆ ಮಾಡಿ ಮಾಡಿ ಸಾಕಾಗಿತ್ತು. ಒಂದೊಳ್ಳೆ ಗಾಡಿ ತೆಗೆದುಕೊಂಡು ಒಳ್ಳೆ ಜೀವನ ಕಟ್ಟಿಕೊಳ್ಳಬೇಕು ಅನ್ನೋ ಆಸೆಯಿತ್ತು. ಹೀಗೆ ಯೋಚನೆ ಮಾಡುತ್ತಿರುವಾಗಲೇ ಶಿವಕುಮಾರ್ಗೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದು ಒಬ್ಬ ಅನಾಮಿಕ ವ್ಯಕ್ತಿ. ತಾನೂ ಮಿಲಿಟರಿ ಅಧಿಕಾರಿ ಅಂತಾ ನಂಬಿಸಿ, ಈ ದಂಪತಿಯಿಂದ ಬರೋಬ್ಬರಿ 91 ಸಾವಿರ ಹಣ ಪಟಾಯಿಸಿಕೊಂಡು, ಫೋನ್ ಸ್ವಿಚ್ ಆಫ್ ಮಾಡ್ಕೊಂಡಿದ್ದಾನೆ.
91 ಸಾವಿರ ಹಣ ಹಾಕಿದ್ಮೇಲೂ ಮತ್ತೆ ಹಣ ಹಾಕುವಂತೆ ಒತ್ತಾಯ
ಫೇಸ್‌ಬುಕ್‌ನಿಂದ ಪರಿಚಯವಾಗಿ ವಾಟ್ಸಾಪ್ ಮೂಲಕ ಚಾಟ್ ಮಾಡಿ ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದಾನೆ ಭೂಪ. ಬೊಲೆರೋ ಫೋಟೋವನ್ನ ಕಳಿಸಿ, ಅದರ ಡಾಕ್ಯುಮೆಂಟ್ ಫೋಟೋವನ್ನ ಕಳಿಸಿ, ತಾನು ಕೆಲಸ ಮಾಡ್ತಿರುವ ಮಿಲಿಟರಿ ಕಚೇರಿಯ ಪೋಟೋ ಅಂತಾ ಅದನ್ನ ಕೂಡ ಕಳಿಸಿ ಈ ದಂಪತಿಗೆ ನೀಚ ಸರಿಯಾಗಿಯೇ ಮೋಸ ಮಾಡಿದ್ದಾನೆ. ಅಲ್ಲದೇ ನಿಮಗೆ ಬೊಲೆರೋ ಡೆಲೆವರಿ ನೀಡಲು ಎಲ್ಲಾ ಡಾಕ್ಯುಮೆಂಟ್ ರೆಡಿಮಾಡಿಕೊಂಡಿರುವುದಾಗಿ ಯಾಮಾರಿಸಿದ್ದಾನೆ. 91 ಸಾವಿರ ಹಣ ಹಾಕಿದ್ಮೇಲೂ ಮತ್ತೆ ಹಣ ಹಾಕುವಂತೆಯೂ ಪೀಡಿಸಿದ್ದಾನೆ. ಬೊಲೆರೋ ಕಳಿಸಿ ಆಮೇಲೆ ಕೊಡ್ತೇವೆ ಅಂದಾಗ ಪೋನ್ ಸ್ವಿಚ್ ಆಫ್ ಮಾಡ್ಕೊಂಡು ಖತರ್ನಾಕ್ ಸುಮ್ಮನಾಗಿದ್ದಾನೆ. 1 ಲಕ್ಷಕ್ಕೆ ಬೊಲೆರೋ ಸಿಗುತ್ತೆ ಅನ್ನೋ ಖುಷಿಯಲ್ಲಿ ಈ ದಂಪತಿ ಕೂಡ ವಿಚಾರ ಮಾಡದೇ ಆತ ಕೇಳಿ ಕೇಳಿದಾಗ ಹಣ ಹಾಕಿದ್ದಾರೆ. ಯಾವಾಗ ಆತ ಮತ್ತೊಂದಿಷ್ಟು ಹಣಕ್ಕೆ ಪೀಡಿಸಿದ್ನೋ ಆಗಷ್ಟೇ ಇವರಿಗೆ ತಾವು ಮೋಸ ಹೋಗ್ತಿರುವ ಅರಿವಾಗಿದೆ. ಆದ್ರೆ ಏನ್ಮಾಡೋದು ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು. ಸದ್ಯ ಚಿಕ್ಕಮಗಳೂರು ಸೈಬರ್ ಠಾಣೆಗೆ ಅನಾಮಿಕ ಹಣ ಪೀಕಿರೋ ಕುರಿತು ಪ್ರಕರಣ ದಾಖಲಿಸಿದ್ದಾರೆ. ಸೈಬರ್ ಪೊಲೀಸರು ಕೂಡ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.