
ಬೆಂಗಳೂರು(ಮೇ.24): ಅನ್ನ ನೀಡುತ್ತಿದ್ದ ಮಾಲೀಕನ ಅಂಗಡಿಗೆ ಕನ್ನ ಹಾಕಿ ಎಂಟು ಕೆಜಿ ಬೆಳ್ಳಿ ಗಟ್ಟಿಕಳವು ಮಾಡಿದ್ದ ನೌಕರ ಸೇರಿದಂತೆ ಮೂವರನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ನಾಗರಬಾವಿ ನಿವಾಸಿಯಾಗಿರುವ ಅಂಗಡಿಯ ನೌಕರ ರಾಹುಲ್ ಜೈನ್, ಎಸ್.ಜಿ.ಪಾಳ್ಯ ನಿವಾಸಿಗಳಾದ ರಾಜೇಶ್ ಹಾಗೂ ಮಧು ಬಂಧಿತರು. ಇವರಿಂದ 3.38 ಲಕ್ಷ ರು. ನಗದು, ಎಂಟು ಕೆ.ಜಿ. ಬೆಳ್ಳಿಯ ಗಟ್ಟಿ, ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru Crime: ಪ್ರಿಯಕರನ ಜತೆ ಸೇರಿ ಹೆತ್ತ ತಾಯಿಯ ಒಡವೆ ಕದ್ದಳು..!
ದುಷ್ಕರ್ಮಿಗಳು ಮೇ 21ರಂದು ರಾತ್ರಿ ಬೃಂದಾವನಗರದ ಯಮುನಾ ನದಿ ರಸ್ತೆಯ ‘ಪ್ಲಾನೆಟ್ಸ್ 9 ಹೋಲ್ಡಿಂಗ್‌್ಸ’ ಹೆಸರಿನ ಸಗಟು ಬೆಳ್ಳಿ ಮಾರಾಟ ಅಂಗಡಿಯ ರೋಲಿಂಗ್ ಶೆಟರ್ ಬೀಗ ಮುರಿದು, ಲಾಕರ್‌ನಲ್ಲಿ ಇರಿಸಿದ್ದ ಬೆಳ್ಳಿ ಗಟ್ಟಿಗಳು, ಆಭರಣಗಳು ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಅಂಗಡಿ ಮಾಲೀಕ ಉತ್ತಮ್ ಚಂದ್ ಜೈನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಮಾರನೇ ದಿನ ಕೆಲಸಕ್ಕೆ ಗೈರು
ಬೆಳ್ಳಿ ಅಂಗಡಿ ಮಾಲೀಕ ಉತ್ತಮ್ ಚಂದ್ ಜೈನ್ ನಂಬಿಕೆ ಗಳಿಸಿದ್ದ ಆರೋಪಿ ರಾಹುಲ್ ಜೈನ್ ದರೋಡೆ ಮಾಡಿದ ಮರುದಿನ ದಿನ ಕೆಲಸಕ್ಕೆ ಬಂದಿರಲಿಲ್ಲ. ಈ ಬಗ್ಗೆ ಅನುಮಾನಗೊಂಡ ಪೊಲೀಸರು, ಮೊದಲಿಗೆ ರಾಹುಲ್ ಜೈನ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದರೋಡೆ ಕೃತ್ಯ ಬೆಳಕಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ