Vijayapura: ಕಲ್ಲುಗುಂಡಿನಂತಿದ್ದ ಯುವಕ ಕಾರ್‌ಗೆ ಸಿಕ್ಕು ಮುದ್ದೆಯಾಗಿದ್ದ, ಭೀಮಾತೀರದಲ್ಲಿ ಸಂಚಲನ ಮೂಡಿಸಿದ ಆಕ್ಸಿಡೆಂಟ್‌-ಮರ್ಡರ್

By Santosh Naik  |  First Published Aug 13, 2024, 10:30 PM IST

ಅಂದು ಕೋರ್ಟ್‌ನಿಂದ ಹೊರಟಿದ್ದ ಲಾಯರ್‌ ಸಾವು ಕಂಡಿದ್ದ. ಅವನಿಗಾಗಿ ಮೊದಲೇ ಕಾಯುತ್ತಿತ್ತಾ ಅಲ್ಲಿದ್ದ ಒಂದು ಇನೋವಾ. ಕೆಳಗೆ ಸಿಲುಕಿದವನನ್ನ 2. ಕಿ.ಮೀ ಎಳಕೊಂಡು ಹೋಗಿತ್ತು. ಆದರೆ, ಆ ಗಾಡಿಗೆ ನಂಬರ್​​ ಪ್ಲೇಟ್ ಇದ್ದಿರಲಿಲ್ಲ.


ವಿಜಯಪುರ (ಆ.13): ಅವನು ಕರ್ತವ್ಯದಲ್ಲಿದ್ದ ವಕೀಲ ಮಾತ್ರವಲ್ಲ, ಭೀಮಾತೀರದ ಹಂತಕ ಬಾಗಪ್ಪ ಹರಿಜನ್‌ಗೆ ದೂರದ ಸಂಬಂಧಿ. ಎಂದಿನಂತೆ ಕೋರ್ಟ್‌ನಿಂದ ಬರೋವಾಗ ಇನ್ನೊವಾ ಕಾರ್‌ ಡಿಕ್ಕಿ ಹೊಡೆದು ಆತನನ್ನ  2 ಕಿಲೋ ಮೀಟರ್‌ ಎಳೆದೊಯ್ದು ಬಿಸಾಡಿತ್ತು. ಮೇಲ್ನೋಟಕ್ಕೆ ಇದೊಂದು ಆಕ್ಸಿಡೆಂಟ್‌ ಆಗಿತ್ತು. ಆದರೆ, ಈ ಆಕ್ಸಿಡೆಂಟ್‌ ಅನುಮಾನ ಬರೋ ಹಾಗಿತ್ತು. ಇದೊಂದು ಆಕ್ಸಿಡೆಂಟಾ? ಇಲ್ಲಾ ಪ್ಲಾನ್ಡ್‌ ಮರ್ಡರಾ ಅನ್ನೋ ಅನುಮಾನ ಎಲ್ಲರಲ್ಲೂ ಇತ್ತು. ಇಂಟರೆಸ್ಟಿಂಗ್‌ ಕಹಾನಿ ಅಂದ್ರೆ ಅಂದು ಬಾಗಪ್ಪನ ಮೇಲೆ ನಡೆದ ಶೂಟೌಟ್‌ ದಿನ ಹಾಗೂ ವಕೀಲನ ಆಕ್ಸಿಡೆಂಟ್‌ ಆದ ದಿನಗಳೆರಡು ಒಂದೆ ಅನ್ನೋದು. ಹಾಗಾದ್ರೆ ಸದ್ದೆ ಇಲ್ಲದೆ ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ ಶುರುವಾಯ್ತಾ..?  ಅಷ್ಟಕ್ಕೂ ಏನದು ಆ್ಯಕ್ಸಿಡೆಂಟ್​​ ಕಥೆ..? ನಿಜಕ್ಕೂ ಅದು ಆ್ಯಕ್ಸಿಡೆಂಟಾ ಪ್ರೀ ಪ್ಲಾನ್ಡ್​​ ಮರ್ಡರಾ..? ಒಂದು ವಿಚಿತ್ರ ಆ್ಯಕ್ಸಿಡೆಂಟ್​ ಹಿಂದಿನ ಕಥೆ ಇಲ್ಲಿದೆ ನೋಡಿ.

ಭೀಮಾತೀರದ ಬಗ್ಗೆ ನಿಮಗೆಲ್ಲ ಗೊತ್ತೆ ಇದೆ. ವಿಜಯಪುರ ಜಿಲ್ಲೆಯ ಭೀಮಾತೀರ ಅಂದ್ರೆ ಅದ್ರ ಸಹವಾಸವೇ ಬೇಡ ಅನ್ನೋರೇ ಜಾಸ್ತಿ. ಇಂಥಾ ಭೀಮಾತೀರ ಕೆಲ ವರ್ಷಗಳಿಂದ ತಣ್ಣಗಾಗಿದೆ. ಆದರೆ,  ಆಗಾಗ, ನಡೆಯುತ್ತಿರುವ ಘಟನೆಗಳು ಮಾತ್ರ ಭೀಮಾತೀರಕ್ಕೆ ಲಿಂಕ್‌ ಆಗ್ತಿವೆ. ಇಂಥಹ ಘಟನೆಗಳ ಸಾಲಿಗೆ ಈಗ ಮತ್ತೊಂದು ಸೇರ್ಪಡೆಯಾಗಿರೋದು ಈ ಡೆಡ್ಲಿ ಆ್ಯಕ್ಸಿಡೆಂಟ್​​​. ಇನ್ನೊವಾ ಕಾರ್‌ವೊಂದು ಹರಿದು ಭೀಮಾತೀರದ ಬಾಗಪ್ಪನ ದೂರ ಸಂಬಂಧಿ ಸತ್ತಿದ್ದಾರೆ. ಬಾಗಪ್ಪನಿಂದ ದೂರ ಉಳಿದು ಕಳೆದ 2 ವರ್ಷಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿದ್ದ ಯುವಕ ಕಾರ್‌ ಅಪಘಾತದಲ್ಲಿ ಭೀಕರವಾಗಿ ಸಾವನ್ನಪ್ಪಿದ್ದಾನೆ.. ಡಿಕ್ಕಿ ಹೊಡೆದು ಬರೊಬ್ಬರಿ 2 ಕಿ.ಮೀ ಎಳೆದೊಯ್ದ ಇನ್ನೋವಾ ಕಾರು ವಕೀಲನನ್ನ ಮಾಂಸದ ಮುದ್ದೆಯನ್ನಾಗಿ ಮಾಡಿ ರಸ್ತೆಯ ಮಧ್ಯೆ ಬಿಸಾಕಿದೆ..

ಆಗಸ್ಟ್‌ 8 ರಂದು ಸಂಜೆ 4 ಗಂಟೆಗೆ ವಿಜಯಪುರದ ಜಿಲ್ಲಾ ನ್ಯಾಯಾಲಯದಲ್ಲಿ ಕಳೆದ 2 ವರ್ಷಗಳಿಂದ ಪ್ರಾಕ್ಟಿಸ್‌ ನಲ್ಲಿ ತೊಡಗಿರುವ ಯುವ ವಕೀಲ ರವಿ ಮೇಲಿನಕೇರಿ ಊರ್ಫ್‌ ರವಿ ಅಗರಖೇಡ್‌ ಸ್ಕೂಟಿ ಹತ್ತಿ ಬಾಗಲಕೋಟ ಕ್ರಾಸ್‌ ಕಡೆಗೆ ಹೊರಟಿದ್ದ. ಆದರೆ, ಅಚಾನಕ್ಕಾಗಿ ಯಮನಂತೆ ಪ್ರತ್ಯಕ್ಷವಾದ ಇನ್ನೋವಾ ಕಾರೊಂದು ರವಿಯ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಾದ ಪರಿಣಾಮ ರವಿ ಸ್ಕೂಟಿ ದೂರ ಹೋಗಿ ಬಿದ್ದರೆ, ರವಿಯ ದೇಹ ಇನ್ನೋವಾ ಕಾರಿನ ಮುಂಭಾಗದಲ್ಲಿ ಸಿಕ್ಕಿಹಾಕಿಕೊಂಡಿತ್ತು.. ಆದರೆ, ಅದ್ಯಾಕೋ ಗೊತ್ತಿಲ್ಲ,  ಕಾರ್‌ ಚಾಲಕ ಮಾತ್ರ ಕಾರು ನಿಲ್ಲಿಸದೆ 2 ಕಿಲೋ ಮೀಟರ್‌ವರೆಗೂ ಕಾರನ್ನ ಡ್ರೈವ್‌ ಮಾಡಿಕೊಂಡು ಹೋಗಿದ್ದ. 

Latest Videos

undefined

ರವಿಯ ಆಕ್ಸಿಡೆಂಟ್‌ ಮತ್ತು ಅನುಮಾನಸ್ಪದ ಸಾವಿನ ವಿಚಾರ ಈಗ ಭೀಮಾತೀರಕ್ಕೆ ತಳಕು ಹಾಕಿಕೊಳ್ತಿದೆ. ಭೀಮಾತೀರದ ಹಂತಕ ಬಾಗಪ್ಪನಿಗೆ ರವಿ ದೂರದ ಸಂಬಂಧಿ. ಅದಕ್ಕು ಇಂಪಾರ್ಟೆಂಟ್‌ ಅಂದ್ರೆ 2017ರ ಆಗಷ್ಟ 8 ರಂದೇ ಬಾಗಪ್ಪನ ಮೇಲೆ ಪೈರಿಂಗ್‌ ನಡೆದಿತ್ತು, ಸರಿಯಾಗಿ 7 ವರ್ಷಗಳ ಬಳಿಕ ಅದೇ ದಿನ ರವಿ ಮೇಲೆ ಕಾರು ಹರಿದಿದೆ.

ಗಾಬರಿ ಬೀಳಿಸೋ ರೀತಿಯಲ್ಲಿ ನಡೆದಿದ್ದ ಅಪಘಾತ ದೃಶ್ಯ ಅಲ್ಲೆ ಇದ್ದ ಸಿಸಿಟಿವಿಯೊಂದರಲ್ಲಿ ಸೆರೆಯಾಗಿತ್ತು. ಈ ಆಕ್ಸಿಡೆಂಟ್‌ ದೃಶ್ಯಗಳನ್ನ ಕಂಡ ಪೊಲೀಸರು ಕೂಡ ಒಂದು ಕ್ಷಣ ಬೆಚ್ಚಿಬಿದ್ದಿದ್ದರು. ಸಿಸಿಟಿವಿ ದೃಶ್ಯವನ್ನ ನೋಡ್ತಿದ್ದರೆ,  ಒಂದು ಕ್ಷಣ ಎದೆ ಝಲ್‌ ಎನ್ನುತ್ತೆ. ಹಾಗಿದೆ ಲೈವ್‌ ಆಕ್ಸಿಡೆಂಟ್‌ ದೃಶ್ಯ. ಕೊನೆಗೆ, ಕೋರ್ಟ್‌ ರಸ್ತೆಯ ಆರ್‌ಟಿಓ ಕಚೇರಿ ಬಳಿಯಿಂದ ರವಿಯನ್ನ ಎಳೆದೋಯ್ದ ಇನ್ನೋವಾ ಕಾರು ವಿಜಯಪುರ ನಗರದ ಜಿಲ್ಲಾ ಪಂಚಾಯತ್‌ ರಸ್ತೆಗೆ ತಂದಿತ್ತು.  ಸ್ಮಶಾನದ ಬಳಿ ನಡುರೋಡಲ್ಲಿ ರವಿ ಮಾಂಸದ ಮುದ್ದೆಯಾಗಿ ಸಿಕ್ಕಿದ್ದ. ಘಟನಾ ನಡೆದ ದಿನ ಸ್ಥಳಕ್ಕೆ ಎಸ್ಪಿ ಹೃಷಿಕೇಶ್‌ ಸೊನಾವಣೆ, ಎಎಸ್ಪಿ ಶಂಕರ್‌ ಮಾರಿಹಾಳ, ಡಿವೈಎಸ್ಪಿ ಬಸವರಾಜ್‌ ಯಲಿಗಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದಿದ್ದ ವಕೀಲ ರವಿ ಸಂಬಂಧಿಕರು ಕಣ್ಣಿರಿಟ್ಟರು.

ಉತ್ತರ ಪ್ರದೇಶ HORROR! 6 ವರ್ಷದ ಬಾಲಕಿ ಮೇಲೆ 50 ವರ್ಷದ ವೃದ್ಧನ ದೌರ್ಜನ್ಯ, ಬಳಿಕ ಮೇಕೆಯ ಮೇಲೆ ರೇಪ್‌!

ಇನ್ನೂ ಘಟನೆ ಕಣ್ಣಾರೆ ಕಂಡ ಆಟೋ ಚಾಲಕ ಕಾರನ್ನ ನಿಲ್ಲಿಸೋಕೆ ಟ್ರೈ ಮಾಡಿದ್ದರು. ಹಾರ್ನ್‌ ಹೊಡೆದು ಚಾಲಕನಿಗೆ ಕೈ ಮಾಡಿದ್ದರೂ, ಕಾರ್‌ ಚಾಲಕ ನಿಲ್ಲಿಸಲಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ವಿಚಾರ ಸಹ ಪೊಲೀಸರಿಗೆ ಅನುಮಾನ ಮೂಡಿಸಿದೆ. ಅನುಮಾನಕ್ಕೆ ಇನ್ನೊಂದು ಕಾರಣ ಏನೆಂದರೆ, ರವಿ ಮೇಲೆ ಹರಿದು ಬರ್ಬರ ಸಾವಿಗೆ ಕಾರಣವಾದ ಇನ್ನೋವಾ ಕಾರ್‌ಗೆ ನಂಬರ್‌ ಪ್ಲೇಟಗಳೇ ಇದ್ದಿರಲಿಲ್ಲ. ಈ ಕೋನದಲ್ಲೂ ಈಗಾಗಲೇ ಜಿಲ್ಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಟ್ಟು ನಾಲ್ಕು ಇನ್ಸಪೆಕ್ಟರ್‌ ಗಳ ನಾಲ್ಕು ತಂಡಗಳ ರಚನೆ ಮಾಡಲಾಗಿದ್ದು, ತನಿಖೆ ಜೋರಾಗಿದೆ.. ಕಾರಲ್ಲಿದ್ದ ನಾಲ್ವರಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ..

'ರಾತ್ರಿ 7.30ಕ್ಕೆ ಹೊರಗಡೆ ಹೋಗಿದ್ಯಾಕೆ..' ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಗೆ ಪ್ರಶ್ನಿಸಿದ ಪೊಲೀಸರು!

ಈ ಆಕ್ಸಿಡೆಂಟ್‌ ವಿಜಯಪುರ ನಗರವನ್ನೆ ಬೆಚ್ಚಿ ಬೀಳಿಸಿತ್ತು. ಅದರಲ್ಲೂ ವಕೀಲರ ವಲಯದಲ್ಲಿ ಈ ಭಯಾನಕ ಘಟನೆ ಆತಂಕ ಮೂಡಿಸಿತ್ತು. ಇದೇ ಕಾರಣಕ್ಕೆ  ವಕೀಲ ರವಿ ಸಾವಿಗೆ ಕಾರಣರಾದವರನ್ನ ಬಂಧಿಸುವಂತೆ, ಕಠಿಣ ಕ್ರಮ ಕೈಗೊಳ್ಳುವಂತೆ ವಕೀಲರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

click me!