ಕಾಲೇಜಿನಲ್ಲೇ ಅಪ್ರಾಪ್ತ ಯುವತಿ ಜೊತೆ ಅಸಭ್ಯ ವರ್ತನೆ, ಎಸ್‌ಪಿ ನಾಯಕ & ಡಿಂಪಲ್‌ ಯಾದವ್‌ ಆಪ್ತ ನವಾಬ್‌ ಸಿಂಗ್‌ ಬಂಧನ!

By Santosh Naik  |  First Published Aug 13, 2024, 6:54 PM IST

ವರದಿಗಳ ಪ್ರಕಾರ, ಅಪ್ರಾಪ್ತ ಬಾಲಕಿಗೆ ಕಾಲೇಜಿನಲ್ಲಿಯೇ ಕೆಲಸ ಕೊಡಿಸುವುದಾಗಿ ನವಾಬ್‌ ಸಿಂಗ್‌ ಹೇಳಿದ್ದ. ಆಕೆಯ ಸಂಬಂಧಿಯ ಜೊತೆ ಅಕೆಯನ್ನು ಕನೌಜ್‌ನಲ್ಲಿರುವ ಚೌಧರಿ ಚಂದನ್‌ ಸಿಂಗ್‌ ಕಾಲೇಜಿಗೆ ಬರುವಂತೆ ತಿಳಿಸಿದ್ದ ಎನ್ನಲಾಗಿದೆ.


ನವದೆಹಲಿ (ಆ.13): ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ಭಾರೀ ಹಿನ್ನಡೆ ಎನ್ನುವಂತೆ, ಕನೌಜ್‌ನಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ನಾಯಕ ನವಾಬ್ ಸಿಂಗ್ ಯಾದವ್ ಅವರನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ. ನವಾಬ್ ಸಿಂಗ್ ಅವರು ಮೈನ್‌ಪುರಿ ಸಂಸದ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಅವರ ಪತ್ನಿ ಡಿಂಪಲ್‌ ಯಾದವ್‌ಗೆ ಬಹಳ ಆಪ್ತರಾದ ವ್ಯಕ್ತಿ ಎನಿಸಿದ್ದಾರೆ. ವರದಿಗಳ ಪ್ರಕಾರ, ನವಾಬ್ ಸಿಂಗ್ ಅಪ್ರಾಪ್ತ ಬಾಲಕಿಗೆ ತನ್ನ ಕಾಲೇಜಿನಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಆಮಿಷವೊಡ್ಡಿದ್ದನೆಂದು ಆರೋಪಿಸಿದ್ದಾನೆ ಮತ್ತು ಭಾನುವಾರ (ಆಗಸ್ಟ್ 11) ರಾತ್ರಿ ಕನೌಜ್‌ನಲ್ಲಿರುವ ಚೌಧರಿ ಚಂದನ್ ಸಿಂಗ್ ಕಾಲೇಜಿಗೆ ಆಕೆಯ ಚಿಕ್ಕಮ್ಮನೊಂದಿಗೆ ಬರುವಂತೆ ತಿಳಿಸಿದ್ದ ಎನ್ನಲಾಗಿದೆ. ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಲು ಹುಡುಗಿ ಕಾಲೇಜಿನಿಂದ ಯುಪಿ 112 ಗೆ ಕರೆ ಮಾಡಿದ್ದಾಳೆ ಎಂದು ವರದಿಗಳು ಸೂಚಿಸುತ್ತವೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾಗ ನವಾಬ್‌ ಸಿಂಗ್‌ ಬರೀ ಚಡ್ಡಿಯಲ್ಲಿ ಮಲಗಿಕೊಂಡು, ಬಾಲಕಿಯ ಸಂಬಂಧಿಯ ಜೊತೆ ಮಾತನಾಡುತ್ತಿದ್ದ. ಈ ವೇಳೆ ರೆಡ್‌ಹ್ಯಾಂಡ್‌ ಆಗಿ ಆತ ಸಿಕ್ಕಿಬಿದ್ದಿದ್ದಾನೆ.

ನವಾಬ್ ಸಿಂಗ್ ನನ್ನು ಬಂಧಿಸಿ ಸದರ್ ಕೊತ್ವಾಲಿಗೆ ಕರೆದೊಯ್ಯಲಾಯಿತು. ಬಂಧನವನ್ನು ವಿರೋಧಿಸಿ ಪೊಲೀಸ್ ಠಾಣೆಯಲ್ಲಿ ಬೆಂಬಲಿಗರ ಗುಂಪು ಜಮಾಯಿಸಿ ಪ್ರತಿಭಟನೆ ನಡೆಸಿದ ನಂತರ ಅಶಾಂತಿ ಉಂಟಾಗಿದೆ ಎಂದು ವರದಿಯಾಗಿದೆ.

Tap to resize

Latest Videos

ನವಾಬ್ ಸಿಂಗ್ ಯಾದವ್ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ಇಡೀ ಪ್ರಕರಣವು ತನ್ನ ವಿರುದ್ಧದ ರಾಜಕೀಯ ಪಿತೂರಿಯಾಗಿದೆ ಎಂದು ಆರೋಪಿಸಿದ್ದಾರೆ. ಸಂತ್ರಸ್ತೆಯ ಚಿಕ್ಕಮ್ಮ ಈ ಹಿಂದೆ ಸಮಾಜವಾದಿ ಪಕ್ಷದ ಸದಸ್ಯರಾಗಿದ್ದರು ಮತ್ತು ಇತ್ತೀಚೆಗೆ ಬಿಜೆಪಿಗೆ ಸೇರಿದ್ದಾರೆ, ಈ ಕಾರಣಕ್ಕಾಗಿ ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು "ಈ ವೀಡಿಯೊದ ನಂತರವೂ ಅಖಿಲೇಶ್ ಯಾದವ್ ಅವರು ತಮ್ಮ ಆಪ್ತ ನವಾಬ್ ಸಿಂಗ್ ಯಾದವ್ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆಯೇ?' ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಅವರು, "ಅಯೋಧ್ಯೆಯ ನಂತರ, ಈಗ ಕನೌಜ್‌ನಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಸ್‌ಪಿ ನಾಯಕನನ್ನು ಬಂಧಿಸಲಾಗಿದೆ. ಎಸ್‌ಪಿ ಸರ್ಕಾರದ ಅವಧಿಯಲ್ಲಿ ಆರೋಪಿ ನವಾಬ್ ಸಿಂಗ್ ಯಾದವ್ ಅವರನ್ನು ಮಿನಿ ಸಿಎಂ ಎಂದು ಕರೆಯಲಾಗುತ್ತಿತ್ತು. ನವಾಬ್ ಸಿಂಗ್ ಯಾದವ್ ಅವರನ್ನು ಡಿಂಪಲ್ ಯಾದವ್ ಅವರ ಬಲಗೈ ಬಂಟ ಹಾಗೂ ಕನೌಜ್‌ನ ಸಂಸದ. ಅಖಿಲೇಶ್ ಯಾದವ್ ಇನ್ನೂ ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುತ್ತಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

'ರಾತ್ರಿ 7.30ಕ್ಕೆ ಹೊರಗಡೆ ಹೋಗಿದ್ಯಾಕೆ..' ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಗೆ ಪ್ರಶ್ನಿಸಿದ ಪೊಲೀಸರು!

ಕನ್ನೌಜ್ ಎಸ್ಪಿ ಅಮಿತ್ ಕುಮಾರ್ ಆನಂದ್‌ ಮಾತನಾಡಿದ್ದು "ಬಾಲಕಿಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಾಲಕಿಯನ್ನೂ ವಿಚಾರಣೆ ಮಾಡಲಾಗಿದೆ, ಮತ್ತು ನವಾಬ್ ಸಿಂಗ್ ಯಾದವ್ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಎಫ್ಐಆರ್ ದಾಖಲಿಸಲಾಗಿದೆ." ಈ ಕುರಿತು ಕನೌಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಕನೌಜ್ ಪೊಲೀಸರು ತಿಳಿಸಿದ್ದಾರೆ.

ಹರ್ನಿಯಾ ಅಂತ ಬಂದ ಪುರುಷನಲ್ಲಿ ಕಂಡಿದ್ದು ಮಹಿಳೆಯರ ಅಂಗಗಳು, ವೈದ್ಯರು ಶಾಕ್!

इस वीडियो के बाद भी क्या अखिलेश यादव अपने खास नवाब सिंह यादव का बचाव करेंगे? https://t.co/GcHYVUsmkR pic.twitter.com/feaZdq9D93

— Amit Malviya (@amitmalviya)
click me!