ಸ್ವರ್ಗದಂತೆ ಎಲ್ಲಾ ಭೋಗ ಅನುಭವಿಸುತ್ತಿದ್ದೇನೆ, ಜೈಲಿನಿಂದ ಕೊಲೆ ಆರೋಪಿಯ ಫೇಸ್‌ಬುಕ್ ಲೈವ್!

By Suvarna NewsFirst Published Mar 16, 2024, 4:22 PM IST
Highlights

ನಾನು ಸ್ವರ್ಗದಲ್ಲಿದ್ದೇನೆ. ಎಲ್ಲಾ ಭೋಗಗಳನ್ನು ಅನುಭವಿಸುತ್ತಿದ್ದೇನೆ ಎಂದು ಜೈಲಿನಿಂದಲೇ ಕೊಲೆ ಆರೋಪಿ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಬಂದಿದ್ದಾನೆ. ಜೈಲಿನಲ್ಲಿ ಆರೋಪಿ ಮೊಬೈಲ್ ಬಳಸಿ ಲೈವ್ ಮಾಡಿರುವುದು ಪೊಲೀಸರಿಗೆ ಗೊತ್ತೇ ಇಲ್ಲ. ಮೃತನ ಸಹೋದರನ ದೂರಿನ ಬಳಿಕ ಈ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.
 

ಲಖನೌ(ಮಾ.16) ಭೀಕರ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಆರೋಪಿಯೊಬ್ಬ ಜೈಲಿನಿಂದಲೇ ಫೇಸ್‌ಬುಕ್ ಲೈವ್ ಮಾಡಿದ್ದಾನೆ. ಇಷ್ಟೇ ಅಲ್ಲ ನಾನಿಲ್ಲಿ ರಾಜನಂತೆ ಎಲ್ಲಾ ಭೋಗಗಳನ್ನು ಅನುಭವಿಸುತ್ತಿದ್ದೇನೆ. ಸ್ವರ್ಗದಂತೆ ಎಲ್ಲಾ ಸೌಲಭ್ಯಗಳು ಇಲ್ಲಿದೆ ಎಂದು ಲೈವ್‌ನಲ್ಲಿ ಹೇಳಿದ್ದಾನೆ. ಉತ್ತರ ಪ್ರದೇಶದ ರಾಯಬರೇಲಿ ಜೈಲಿನಲ್ಲಿರುವ ಈ ಆರೋಪಿ ಈ ರೀತಿ ಲೈವ್ ಮಾಡಿರುವುದು ಪೊಲೀಸರಿಗೆ ಗೊತ್ತೇ ಇಲ್ಲ ಎಂದಿದ್ದಾರೆ. ಮೃತನ ಸಹೋದರ ಈ ಲೈವ್ ವೀಕ್ಷಿಸಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾನೆ. ದೂರಿನ ಬಳಿಕ ಎಚ್ಚೆತ್ತಿರುವ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ.

ಆರೋಪಿ ಆಸಿಫ್ ಈ ವಿಡಿಯೋ ಮಾಡಿದ್ದಾನೆ. 2019ರಲ್ಲಿ PWD ಗುತ್ತಿಗೆದಾರ 34 ವರ್ಷದ ರಾಕೇಶ್ ಯಾದವ್ ಮೇಲೆ ಭೀಕರ ಗುಂಡಿನ ದಾಳಿ ನಡೆಸಿದ್ದ. ಶಹಜನಾಪುರದ ಸದಾರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಹಾಡಹಗಲೇ ಗುಂಡಿನ ದಾಳಿ ನಡೆಸಿ ರಾಕೇಶ್ ಯಾದವನನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಇದೇ ಆಸಿಫ್ ಜೈಲು ಸೇರಿದ್ದ. ಇದೀಗ ಜೈಲಿನಿಂದಲೇ ರಾಜವೈಭೋಗದ ಕುರಿತು ಲೈವ್ ಮಾಡಿದ್ದಾನೆ.

ಧಾರವಾಡ ಕೇಂದ್ರ ಕಾರಾಗೃಹದ  ಕೈದಿಗಳ ಮಧ್ಯೆ ಮಾರಾಮಾರಿ; ಮಲ್ಲೇಶ್ವರ ಬಾಂಬ್‌ ಬ್ಲಾಸ್ಟ್ ಕೈದಿಗೆ ಇರಿದ ಪಾತಕಿ ಪಚ್ಚಿ!

ಜೈಲಿನ ಒಳಗಿನಿಂದಲೇ ಮೊಬೈಲ್ ಫೋನ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಲೈವ್ ಆಗಮಿಸಿದ ಆಸಿಫ್, ಜೈಲಿನ ಆವರಣದಲ್ಲಿ ನಡೆದಾಡಿಕೊಂಡು ಮಾತನಾಡಿದ್ದಾನೆ. ನಾನು ಸ್ವರ್ಗದಲ್ಲಿದ್ದೇನೆ. ಎಲ್ಲಾ ಸೌಲಭ್ಯಗಳನ್ನು ಅನುಭವಿಸುತ್ತಿದ್ದೇನೆ. ಶೀಘ್ರದಲ್ಲೇ ನಾನು ಹೊರಬರುತ್ತೇನೆ. ಯಾವುದೇ ಆತಂಕ ಬೇಡ ಎಂದು ಆಸಿಫ್ ಹೇಳಿದ್ದಾನೆ.

ಪೊಲೀಸರ ನೆರವಿನಿಂದಲೇ ಈ ಆರೋಪಿ ಜೈಲಿನಲ್ಲಿ ರಾಜಾರೋಶವಾಗಿ ಈ ರೀತಿ ಲೈವ್ ಬಂದಿದ್ದಾನೆ. ಲೈವ್ ಬಳಿಕವೂ ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಆದರೆ ಈ ಲೈವ್ ವಿಡಿಯೋ ಗಮನಿಸಿದ ಮೃತ ರಾಕೇಶ್ ಯಾದವ್ ಸಹೋದರ ಉಮೇಶ್ ಪ್ರತಾಪ್ ಸಿಂಗ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾನೆ. ಈ ದೂರಿನ ಬೆನ್ನಲ್ಲೇ ಜಿಲ್ಲಾಡಳಿತ ರಾಯಬರೇಲಿ ಜೈಲಿಗೆ ಬೇಟಿ ನೀಡಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಉಪ ಜೈಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಇತರ ಇಬ್ಬರು ಜೈಲಾಧಿಕಾರಿಗಳಾದ ನೀರಜ್ ಕುಮಾರ್ ಹಾಗೂ ವಿಜಯ್ ಕುಮಾರ್ ರೈಗೆ ಘಟನೆ ವಿವರಣೆ ನೀಡಲು ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಐಜಿ ಕುಂತಲ್ ಕುಮಾರ್ ಹೇಳಿದ್ದಾರೆ. 

 

ಜೈಲಿನಲ್ಲಿ ರಷ್ಯಾದ ವಿಪಕ್ಷ ನಾಯಕ, ವ್ಲಾದಿಮಿರ್ ಪುಟಿನ್ ವಿಮರ್ಷಕ ಅಲೆಕ್ಸಿ ನಿಧನ!

ಆಸಿಫ್ ಹಾಗೂ ರಾಕೇಶ್ ಚೌಧರಿ ಎಂಬ ಇಬ್ಬರು 2019 ಡಿಸೆಂಬರ್ 2 ರಂದು PWD ಗುತ್ತಿಗೆದಾರನ ಹತ್ಯೆ ನಡೆಸಿದ್ದರು. ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ರಾಯಬರೇಲಿ ಜೈಲಿಗಟ್ಟಿದ್ದರು. ಆದರೆ ಜೈಲಿನಲ್ಲೇ ಕುಳಿತೇ ಈ ಆರೋಪಿಗಳು ತಮ್ಮ ಸುಪಾರಿ ವ್ಯವಾಹರಗಳನ್ನು ಮುಂದುವರಿಸಿದ್ದಾರೆ. ಜೈಲು ಅಧಿಕಾರಿಗಳಗ ರಹಸ್ಯ ಅನುಮತಿಯೊಂದಿಗೆ ಈ ಆರೋಪಿಗಳು ಜೈಲಿನೊಳಗೆ ಫೋನ್ ಬಳಸಿದ್ದಾರೆ ಅನ್ನೋದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.
 

click me!