ಸರಸ ಸಲ್ಲಾಪಕ್ಕೆ ಅಡ್ಡಿ: 4 ವರ್ಷದ ಹೆಣ್ಣು ಮಗುವಿನ ಮಲತಂದೆ ಕ್ರೌರ್ಯ!

By Ravi Janekal  |  First Published Mar 16, 2024, 1:54 PM IST

ಸರಸ ಸಲ್ಲಾಪಕ್ಕೆ ಅಡ್ಡಿಯಾಗುತ್ತದೆಂದು ಮಲತಂದೆಯಿಂದ ಪುಟ್ಟ ಹೆಣ್ಣು ಮಗುವಿನ ಮೇಲೆ ಕಳೆದೊಂದು ವರ್ಷದಿಂದ ಚಿತ್ರಹಿಂಸೆ ನೀಡಿ ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ.


ಆನೇಕಲ್ (ಮಾ.16): ಸರಸ ಸಲ್ಲಾಪಕ್ಕೆ ಅಡ್ಡಿಯಾಗುತ್ತದೆಂದು ಮಲತಂದೆಯಿಂದ ಪುಟ್ಟ ಹೆಣ್ಣು ಮಗುವಿನ ಮೇಲೆ ಕಳೆದೊಂದು ವರ್ಷದಿಂದ ಚಿತ್ರಹಿಂಸೆ ನೀಡಿ ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ.

ದಿಶಾ(4), ಮಲತಂದೆ ಹಾಗೂ ತಾಯಿಯಿಂದ ಹಲ್ಲೆಗೊಳಗಾದ ಮಗು. ಚಿಕ್ಕಬಳ್ಳಾಪುರ ಮೂಲದ ಮಲತಂದೆ ಮಂಜುನಾಥ್ ಹಾಗೂ ತಾಯಿ ಮಂಜುಳಳಿಂದ ಹಲ್ಲೆ. ತಾಯಿ ಮಂಜುಳಾ ಜೊತೆಗೆ ವಾಸವಿದ್ದ ನಾಲ್ಕು ವರ್ಷದ ಹೆಣ್ಣುಮಗು. ಇದೇ ವೇಳೆ ತಾಯಿಯೊಂದಿಗೆ ಸಂಬಂಧ ಬೆಳೆಸಿದ್ದ ಆರೋಪಿ ಮನೆಯಲ್ಲೇ ವಾಸವಾಗಿದ್ದ, ಮನೆಯಲ್ಲಿ ಸರಸ ಸಲ್ಲಾಪದ ವೇಳೆ ಪದೇಪದೆ ಮಗು ಅಡ್ಡಿಯಾಗುತ್ತದೆಂದು ಮಗುವಿನ ಮೇಲೆ ಹಲ್ಲೆ ನಡೆಸಿರುವ ಕ್ರೂರಿಗಳು. ಕಳೆದೊಂದು ವರ್ಷದಿಂದ ಹೆಣ್ಣುಮಗುವಿನ ಮೇಲೆ ನಿರಂತರ ಹಲ್ಲೆ ನಡೆಸಲಾಗಿದೆ. ಮಗುವಿನ ಕೈ ಮತ್ತು ಕುತ್ತಿಗೆ ಭಾಗದಲ್ಲಿ ಹೀಟರ್ ಮತ್ತು ಸಿಗರೇಟ್ ನಿಂದ ಸುಟ್ಟ ಪಾಪಿ ಮಲತಂದೆ. ತಲೆ ಮತ್ತು ಹಣೆ ಭಾಗದಲ್ಲೂ ಹಲ್ಲೆ ಮಾಡಿರುವ ಆರೋಪಿ.

Tap to resize

Latest Videos

undefined

ಜಮೀನು ವಿವಾದ ಕಾಂಗ್ರೆಸ್ ಮುಖಂಡನ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ!

ನಿನ್ನೆ ಸಂಜೆ ಸಹ ಕುಡಿದ ಮತ್ತಿನಲ್ಲಿ ಮಗುವಿನ ಮೇಲೆ ಹಲ್ಲೆ ನಡೆಸಿರುವ ಮಲತಂದೆ ಕೇಬಲ್ ವೈರ್‌ನಿಂದ ಮಗುವಿನ ಮೇಲೆ ಗಂಭೀರವಾಗಿ ನಡೆಸಿರುವ ಕ್ರೂರಿ. ಹಲ್ಲೆಯಿಂದ ಮಗುವಿನ ಕೈ ಕಂದು ಬಣ್ಣಕ್ಕೆ ತಿರುಗಿದೆ. ಮಗುವಿನ ಚೀರಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಮಗುವಿನ ರಕ್ಷಣೆ ಮಾಡಿದ್ದಾರೆ. ಮಲತಂದೆ ಮತ್ತು ತಾಯಿಯಿಂದ ಹಲ್ಲೆ ನಡೆದ ಬಗ್ಗೆ ಸ್ಥಳೀಯರಿಗೆ ತಿಳಿಸಿದ ಮಗು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಮಂಜುನಾಥ ಮತ್ತು ತಾಯಿ ಮಂಜುಳಾಗೆ ಸ್ಥಳೀಯರು ಥಳಿಸಿ ಬಳಿಕ ಹೆಬ್ಬಗೋಡಿ ಠಾಣೆಗೆ ಕರೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಳಗಾವಿ: ಬಾಲ್ಯ ವಿವಾಹ ವಿರೋಧಿಸಿದ ಪತ್ನಿಯ ಕೈಕಾಲು ಮುರಿದ ಕಿರಾತಕ..!

ಇದಕ್ಕೂ ಮೊದಲು ಸುಮಾರು ನಾಲ್ಕು ತಿಂಗಳ ಹಿಂದೆ ಮಗುವಿನ ಅಣ್ಣನ ಮೇಲೂ ಹಲ್ಲೆ ನಡೆಸಿದ್ದ ಮಲತಂದೆ. ಪತ್ನಿಯೊಂದಿಗೆ ಚಕ್ಕಂದಕ್ಕೆ ಮಗು ಅಡ್ಡಿಯಾಗುತ್ತದೆಂದು ಹಲ್ಲೆ ನಡೆಸಿದ್ದ. ಅಂದು ಸಹ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ಪುನಃ ಹೆಣ್ಣು ಮಗುವಿನ ಮೇಲೆ ಹಲ್ಲೆ ನಡೆಸಿ ದುಷ್ಕೃತ್ಯ ನಡೆಸಿರುವ ಪಾಪಿಗಳು. ಸದ್ಯ CWC ಕೇಂದ್ರದಲ್ಲಿ ಹಾರೈಕೆಯಲ್ಲಿರುವ ಮಗು.

ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

click me!