ಬೆಂಗಳೂರು: ಮೆಟ್ರೋ ಅಧಿಕಾರಿಗಳಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಸಹಕರಿಸದಿದ್ದರೆ ಕೆಲಸದಿಂದ ವಜಾ ಬೆದರಿಕೆ!

By Sathish Kumar KHFirst Published Mar 16, 2024, 2:11 PM IST
Highlights

ಬೆಂಗಳೂರು ಮೆಟ್ರೋದಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಭದ್ರತಾ ಸಿಬ್ಬಂದಿಗೆ ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಇದನ್ನು ವಿರೋಧಿಸಿದರೆ ಕೆಲಸದಿಂದ ವಜಾ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ದಾಖಲಾಗಿದೆ.

ಬೆಂಗಳೂರು (ಮಾ.16): ಸಿಲಿಕಾನ್ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿರುವ ಬೆಂಗಳೂರು ಮೆಟ್ರೋ ರೈಲ್ ನಿಗಮ ನಿಯಮಿತ(ಬಿಎಂಆರ್‌ಸಿಎಲ್)ದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಮಹಿಳೆಯರಿಗೆ ಮೆಟ್ರೋ ಹಿರಿಯ ಅಧಿಕಾರಿಗಳಿಂದ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ. ನೀವು ಇದಕ್ಕೆ ಸಹಕರಿಸದಿದ್ದರೆ ಕೆಲಸದಿಂದ ವಜಾ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳಾ ಭದ್ರತಾ ಸಿಬ್ಬಂದಿ ಆರೋಪ ಮಾಡಿದ್ದಾರೆ.

ಹೌದು ಮೆಟ್ರೋ ಅಧಿಕಾರಿಯಿಂದ ಮಹಿಳಾ ಸೆಕ್ಯುರಿಟಿ ಗಳಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಮಹಿಳಾ ಭದ್ರತಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋ ಬಗ್ಗೆ ದೂರು ನೀಡಿದ್ದಾರೆ. ರಾಜಾಜಿನಗರದ ಮೆಟ್ರೋ ನಿಲ್ದಾಣದ ಸಹಾಯಕ ವಿಭಾಗಾಧಿಕಾರಿ (Assistant Section Officer) ಗಜೇಂದ್ರ.ಪಿ ವಿರುದ್ಧ ದೂರು ಕೇಳಿಬಂದಿದೆ. ಸುಬ್ರಮ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಗಜೇಂದ್ರ ವಿರುದ್ಧ ಎಫ್ ಐಆರ್ ದಾಖಲು ಆಗಿದೆ. ಮಹಿಳಾ ಸಿಬ್ಬಂದಿಗಳಿಗೆ ಅಶ್ಲೀಲ ಪದಗಳಿಂದ ನಿಂದಿಸೋದಲ್ಲದೆ, ಮೈ-ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಇದಕ್ಕೆ ಸಹಕರಿಸದ ಮಹಿಳೆಯರಿಗೆ ಬೇರೆ ಕಡೆ ವರ್ಗಾವಣೆ ಮಾಡೊದಾಗಿ ಹಾಗೂ ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ‌ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಶಿವಮೊಗ್ಗ: ತಂಗಿಯನ್ನು ಪ್ರೀತಿಸಿದ ಭಾವನನ್ನೇ ಇನ್ನೋವಾ ಕಾರಿನಲ್ಲಿ ಸುಟ್ಟು ಹಾಕಿದ ಭಾವಮೈದುನರು!

ಇನ್ನು ಬೆಂಗಳೂರು ಮೆಟ್ರೋ ಸಂಸ್ಥೆಗೆ ಭದ್ರತಾ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ಒದಗಿಸುವ ಸೆಕ್ಯೂರಿಟಿ ಏಜೆನ್ಸಿ ಮಾಲೀಕನಿಂದಲೂ ಮಹಿಳಾ ಭದ್ರತಾ ಸಿಬ್ಬಂದಿಯು ಲೈಂಗಿಕ ಕಿರುಕುಳಕ್ಕೆ ಸಹಕರಿಸುವಂತೆ ಒತ್ತಾಯ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇನ್ನು ಸೆಕ್ಯೂರಿಟಿ ಏಜೆನ್ಸಿ ಮಾಲೀಕರು ಮಹಿಳಾ ಭದ್ರತಾ ಸಿಬ್ಬಂದಿfಎ ನೀವು ಸಹಕರಿಸಿ ಇಲ್ಲವೇ, ಕೆಲಸದಿಂದ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿರುವ ಬಗ್ಗೆಯೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಜೊತೆಗೆ, ಬಿಎಂಆಆರ್‌ಸಿಎಲ್ ಹಿರಿಯ ಅಧಿಕಾರಿಗಳಿಗೂ ಮಹಿಳೆಯರಿಂದ ದೂರು ನೀಡಲಾಗಿದೆ.

ಸರಸ ಸಲ್ಲಾಪಕ್ಕೆ ಅಡ್ಡಿ: 4 ವರ್ಷದ ಹೆಣ್ಣು ಮಗುವಿನ ಮಲತಂದೆ ಕ್ರೌರ್ಯ!

ಮಹಿಳಾ ಸಿಬ್ಬಂದಿ ನೀಡಿದ ದೂರಿನಲ್ಲಿ ಏನಿದೆ?

  • 1. ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡ್ತಿರುವ XYZ..
  • 2. ನಿಲ್ದಾಣದ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಗಜೇಂದ್ರ.ಪಿ ದೂರುದಾರೆಗೆ ಹಾಗೂ ಇತರೆ ಮಹಿಳಾ ಸಿಬ್ಬಂದಿಗಳಿಗೆ ನಿಂದಿಸುತ್ತಾರೆ.
  • 3. ಮಹಿಳಾ ಭದ್ರತಾ ಸಿಬ್ಬಂದಿಗೆ ಒತ್ತಾಯ ಪೂರ್ವಕವಾಗಿ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಾರೆ.
  • 4. ಮಹಳಾ ಸಿಬ್ಬಂದಿ ಲೈಂಗಿಕ ಕಿರುಕುಳಕ್ಕೆ ವಿರೋಧ ವ್ಯಕ್ತಪಡಿಸಿದರೆ, ಸುಳ್ಳು ಕೇಸ್ ಹಾಕಿ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. 
  • 5. ಮೆಟ್ರೋ ಅಧಿಕಾರಿಗಳು ಮಹಿಳಾ ಭದ್ರತಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂದು ಏಜೆನ್ಸಿ ಮಾಲೀಕರಿಗೆ ದೂರು ನೀಡಿದರೆ, ಅವರಿಗೆ ನೀವು ಸಹಕರಿಸಿ, ಇಲ್ಲ ಕೆಲಸ ಬಿಟ್ಟು ಹೋಗಿ ಎಂದು ಹೇಳಿದ್ದಾರೆ.
click me!