ದೇವರೆ ಇದು ನ್ಯಾಯನಾ... ಒಂದೇ ಒಂದು ಮಾವಿನಹಣ್ಣು ಕಳವಿಗೆ ಸಾವಿನ ಶಿಕ್ಷೆ..!

By Anusha KbFirst Published Jul 3, 2023, 12:02 PM IST
Highlights

ಆತ ಕದ್ದಿದ್ದು ಒಂದೇ ಒಂದು ಮಾವಿನ ಹಣ್ಣು, ಆದರೆ ಈ ಕಳ್ಳತನ ಆತನ ಜೀವವನ್ನೇ ಬಲಿಪಡೆದಿದೆ. ಮಾವಿನ ಹಣ್ಣು ಕದ್ದ ಎಂಬ ಕಾರಣಕ್ಕೆ ಹಣ್ಣಿನ ವ್ಯಾಪಾರಿ ಆತನ ತಲೆಗೆ ಹೊಡೆದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮುಂಬೈ: ಆತ ಕದ್ದಿದ್ದು ಒಂದೇ ಒಂದು ಮಾವಿನ ಹಣ್ಣು, ಆದರೆ ಈ ಕಳ್ಳತನ ಆತನ ಜೀವವನ್ನೇ ಬಲಿಪಡೆದಿದೆ. ಮಾವಿನ ಹಣ್ಣು ಕದ್ದ ಎಂಬ ಕಾರಣಕ್ಕೆ ಹಣ್ಣಿನ ವ್ಯಾಪಾರಿ ಆತನ ತಲೆಗೆ ಹೊಡೆದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇಂತಹ ಹೃದಯ ಭಾರವಾಗಿಸುವ ಘಟನೆ ನಡೆದಿರುವುದು ವಾಣಿಜ್ಯ ನಗರಿ ಮುಂಬೈನ ಪಶ್ಚಿಮ ಕಂಡಿವಿಲಿ ಬಳಿಯ ಛಾರ್‌ಕೊಪ್ ಎಂಬಲ್ಲಿ. 

ಹಣ್ಣುಗಳ ರಾಜ ಮಾವಿನ ಹಣ್ಣನ್ನು ಇಷ್ಟಪಡದವರಿಲ್ಲ, ಬಹಳ ರುಚಿಯಾದ ಒಂದು ತಿಂದರೆ ಮತ್ತೊಂದು ತಿನ್ನಬೇಕೆನಿಸುವ ಈ ಮಾವಿನ ಹಣ್ಣು (Mango fruit) ಹಲವು ತಳಿಗಳಲ್ಲಿದ್ದು, ಮಾರುಕಟ್ಟೆಯಲ್ಲಿ ದುಬಾರಿ ದರವಿದೆ. ದುಬಾರಿ ಬೆಲೆಯಿಂದಾಗಿ ಉತ್ತಮ ತಳಿಯ ಮಾವಿನ ಹಣ್ಣನ್ನು ಕೊಂಡು ತಿನ್ನಲು ಈ 52 ವರ್ಷದ ಈ ವ್ಯಕ್ತಿ ಬಳಿ  ಹಣವಿರಲಿಲ್ಲವೋ  ಏನೋ ಆತ ಅಂಗಡಿಯಿಂದ ಒಂದು ಮಾವಿನ ಹಣ್ಣು ಕದ್ದು ಪರಾರಿಯಾಗಿದ್ದಾನೆ. ಆದರೆ ಹೀಗೆ ಪರಾರಿಯಾಗುವ ವೇಳೆ  ಹಣ್ಣು ವ್ಯಾಪಾರಿ ಆತನ ತಲೆಗೆ ಬಾರಿಸಿದ್ದು,  ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

ವಕಾ ವಕಾ ಮ್ಯಾಂಗೋ : ವಿಭಿನ್ನವಾಗಿ ಮಾವು ಮಾರುವ ಶಕೀರಾ ಫ್ಯಾನ್‌ ಫುಲ್ ವೈರಲ್‌

ಘಟನೆಗೆ ಸಂಬಂಧಿಸಿದಂತೆ ಹಣ್ಣು ವ್ಯಾಪಾರಿ ಸೋನು ಗುಪ್ತಾ (Sonu Gupta) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನು ಒಂದು ಮಾವಿನ ಹಣ್ಣಿನ ಕಾರಣಕ್ಕಾಗಿ ಕೊಲೆಯಾದ  ವ್ಯಕ್ತಿಯನ್ನು ಕಂಡಿವಿಲಿ ವೆಸ್ಟ್‌ನ ಛಕ್ರಕೊಪ್ ನಿವಾಸಿ ಮಾರುತಿ ಮೆಧೆ ಎಂದು ಗುರುತಿಸಲಾಗಿದೆ. ಸೋನುಗುಪ್ತಾ, ಛಕ್ರಪೊಲಿ ಬಳಿಯ ಶಿವರತ್ನ ಸೊಸೈಟಿಯ ಸೆಕ್ಟರ್ ನಂಬರ್ 3 ರಲ್ಲಿ ರಸ್ತೆಬದಿ ಹಣ್ಣಿನ ಸ್ಟಾಲ್ ಇರಿಸಿ ವ್ಯಾಪಾರ ಮಾಡುತ್ತಿದ್ದ. ಸಿಸಿಟಿವಿಯಲ್ಲಿ ಈ ಘಟನೆ ಸೆರೆ ಆಗಿದ್ದು, ಅದನ್ನು ಪರಿಶೀಲಿಸಿದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಮರಣೋತ್ತರ ಪರೀಕ್ಷೆ ವೇಳೆ ನಮಗೆ ಕೊಲೆಯಾದ ಮಾರುತಿ ಮೆಧೆ (Maruti medhe), ನ್ಯೂಮೋನಿಯಾ,  ದಪ್ಪಗಾದ ಲಿವರ್ ಸಮಸ್ಯೆ ಹಾಗೂ   ಟಿಬಿ ಕಾಯಿಲೆಯಿಂದ ಬಳಲುತ್ತಿರುವುದು ತಿಳಿದು ಬಂತು. ಈಗಾಗಲೇ ಈತನಿಗಿದ್ದ ಈ ರೋಗಗಳ ಜೊತೆಗೆ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಆತ ಸಾವನ್ನಪ್ಪಿದ್ದಾನೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304(2) ಅಡಿ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.  

ಕೊಪ್ಪಳದ ಮಿಯಾಜಾಕಿ ಮಾವಿನ ಹಣ್ಣಿಗೆ 2.50 ಲಕ್ಷ ರೂ: ವಿಶ್ವದ ದುಬಾರಿ ಮಾವು

ಒಟ್ಟಿನಲ್ಲಿ ಹಣ್ಣು ತಿನ್ನುವ ಆಸೆಯೊಂದು 52 ವರ್ಷದ ವ್ಯಕ್ತಿಯನ್ನು ಸಾವಿನ ದವಡೆಗೆ ದೂಡಿದ್ದು, ವಿಧಿ ವಿಪರ್ಯಾಸವೇ ಸರಿ. 

click me!