20ರ ಹರೆಯದ ಮಹಿಳೆ ಶುಕ್ರವಾರ ರಾತ್ರಿ ಮಲಗಿದ್ದಾಗ 27ರ ಹರೆಯದ ಆರೋಪಿ ಮನೆಯ ಮಾಳಿಗೆಯಿಂದ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾಟ್ನಾ (ಜುಲೈ 3, 2023): ಅತ್ಯಾಚಾರ ಮಾಡಿದ ಪುರುಷನಿಗೆ ಸಂತ್ರಸ್ತೆಯೊಬ್ಬರು ತಕ್ಕ ಶಿಕ್ಷೆಯನ್ನೇ ನೀಡಿದ್ದಾರೆ. ಪತಿ ಇಲ್ಲದಿದ್ದಾಗ ತನ್ನ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ ನಂತರ ಮಹಿಳೆಯೊಬ್ಬರು ಪುರುಷನ ಮರ್ಮಾಂಗವನ್ನು ಭಾಗಶಃ ಸೀಳಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
20ರ ಹರೆಯದ ಮಹಿಳೆ ಶುಕ್ರವಾರ ರಾತ್ರಿ ಮಲಗಿದ್ದಾಗ 27ರ ಹರೆಯದ ಆರೋಪಿ ಮನೆಯ ಮಾಳಿಗೆಯಿಂದ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಅತ್ಯಾಚಾರಕ್ಕೆ ಆಕೆ ವಿರೋಧಿಸಿದರೂ ಅವನನ್ನು ತಡೆಯಲು ಸಾಧ್ಯವಾಗಲಿಲ್ಲ. ಬಳಿಕ, ಆಕೆ ಹತ್ತಿರದಲ್ಲಿದ್ದ ಶೇವಿಂಗ್ ಬ್ಲೇಡ್ ಅನ್ನು ಎತ್ತಿಕೊಂಡು ಅವನ ಜನನಾಂಗಗಳ ಮೇಲೆ ದಾಳಿ ಮಾಡಿ, ಭಾಗಶಃ ಸೀಳಿದಳು ಎಂದು ತಿಳಿದುಬಂದಿದೆ.
ಇದನ್ನು ಓದಿ: ಪತ್ನಿಯನ್ನೇ ವ್ಯಭಿಚಾರಿ ಮಾಡಿದ ಪತಿ: ಮಾದಕ ದ್ರವ್ಯ ನೀಡಿ 90ಕ್ಕೂ ಹೆಚ್ಚು ಜನರಿಂದ ರೇಪ್‌ಗೊಳಗಾದ ಮಹಿಳೆ!
ಬಳಿಕ, ಆಕೆ ನೋವಿನಿಂದ ಮಲಗಿದ್ದಾಗ, ಮಹಿಳೆ ಅವನ ಹಿಡಿತದಿಂದ ಹೊರಬಂದು ಇತರರಿಗೆ ವಿಚಾರ ತಿಳಿಸಿದ್ದಾಳೆ. ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರೂ ಆರೋಪಿ ಆ ವೇಳೆಗೆ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ. ಬಳಿಕ, ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಮಲಗುವ ವೇಳೆ ಒಳಗಿನಿಂದ ಛಾವಣಿಯ ಬಾಗಿಲಿಗೆ ಚಿಲಕ ಹಾಕುವುದನ್ನು ಮರೆತಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನು, ಈ ಬಗ್ಗೆ ಮಾಹಿತಿ ನೀಡಿದ ಬಂಕಾ ಟೌನ್ ಎಸ್‌ಎಚ್‌ಒ ಶಂಭು ಯಾದವ್ "ಆತ್ಮ ರಕ್ಷಣೆಗಾಗಿ ವ್ಯಕ್ತಿಯ ಜನನಾಂಗಗಳನ್ನು ಭಾಗಶಃ ಸೀಳಲಾಗಿದೆ. ಅತ್ಯಾಚಾರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸುತ್ತಿರುವಾಗ ನಾವು ಆರೋಪಿಯನ್ನು ಬಂಧಿಸಿದ್ದೇವೆ" ಎಂದು ಶನಿವಾರ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಇದಪ್ಪಾ ಶಿಕ್ಷೆ ಅಂದ್ರೆ! ಅಪ್ರಾಪ್ತ ಸೋದರ ಸಂಬಂಧಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಪಾಪಿಗೆ 135 ವರ್ಷ ಸೆರೆವಾಸ
ಕಳೆದ ತಿಂಗಳು ಇದೇ ರೀತಿಯ ಘಟನೆಯಲ್ಲಿ, ಛತ್ತೀಸ್‌ಗಢದಲ್ಲಿ ನಿಯೋಜಿಸಲಾದ ಸಿಆರ್‌ಪಿಎಫ್ ಜವಾನ ತನ್ನ ಪ್ರಿಯಕರನ ಮದುವೆಯನ್ನು ಬೇರೆ ಹುಡುಗಿಯೊಂದಿಗೆ ನಿಶ್ಚಯಿಸಲಾಗಿದೆ ಎಂದು ತಿಳಿದುಬಂದ ನಂತರ ಬಿಹಾರದ ಪಾಟ್ನಾದ ಹೋಟೆಲ್‌ನಲ್ಲಿ ಗರ್ಲ್‌ಫ್ರೆಂಡ್ ಅವನ ಜನನಾಂಗವನ್ನು ಕತ್ತರಿಸಿ ಹಾಕಿದ್ದಳು. ಹುಡುಗಿ ತನ್ನ ಪ್ರಿಯಕರನನ್ನು ನಗರದ ಹೋಟೆಲ್‌ಗೆ ಯಾವುದೋ ನೆಪದಲ್ಲಿ ಕರೆದಿದ್ದಾಳೆ ಮತ್ತು ಕುಟುಂಬದ ನಿರ್ಧಾರಕ್ಕೆ ಬದ್ಧನಾಗಿರಬೇಕು ಎಂದು ತನ್ನ ಮದುವೆಯನ್ನು ರದ್ದುಗೊಳಿಸಲು ನಿರಾಕರಿಸಿದಾಗ ಅವನ ಜನನಾಂಗವನ್ನು ಕತ್ತರಿಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಆತನ ಜನನಾಂಗಗಳು ಸುಮಾರು 60 ಪ್ರತಿಶತದಷ್ಟು ಕತ್ತರಿಸಲ್ಪಟ್ಟಿದ್ದರಿಂದ ಆ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕುಡಿದು ಟೈಟಾಗಿದ್ದ ಮಹಿಳೆಯನ್ನು ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರವೆಸಗಿದ ಭಾರತೀಯ ಮೂಲದ ವಿದ್ಯಾರ್ಥಿ