Punjab Crime: ಮನೆಗೆ ಬರಲಿಲ್ಲ ಎಂದು ಪತ್ನಿ, ಮಕ್ಕಳು ಸೇರಿ ಐವರನ್ನು ಕೊಂದ ಪತಿ

By Kannadaprabha News  |  First Published Oct 19, 2022, 12:19 PM IST

ಮನೆಗೆ ಬರಲು ಒಪ್ಪದ್ದಕ್ಕೆ ಪತ್ನಿ, ಮಕ್ಕಳು ಸೇರಿದಂತೆ 5 ಜನರನ್ನು ಪತಿ ಹತ್ಯೆಗೈದ ಘಟನೆ ನಡೆದಿದೆ. ತವರು ಮನೆ​ಯಲ್ಲಿ ಪತ್ನಿ, ತನ್ನ ಇಬ್ಬರು ಮಕ್ಕ​ಳೊಂದಿಗೆ ಕಳೆದ ಐದಾರು ತಿಂಗ​ಳು​ಗ​ಳಿಂದ ವಾಸಿ​ಸು​ತ್ತಿ​ದ್ದಳು. ಈ ಹಿನ್ನೆಲೆ ಗಂಡನ ಮನೆಗೆ ಕರೆದಿದ್ದು, ಅವರು ಬರಲು ಒಪ್ಪದಿದ್ದಕ್ಕೆ ಐವರನ್ನು ಕೊಲೆ ಮಾಡಲಾಗಿದೆ. 


ಚಂಡೀ​ಗ​ಢ: ತವರು ಬಿಟ್ಟು ಬರಲು ಒಪ್ಪದ ಕಾರಣಕ್ಕೆ ಸಿಟ್ಟಿಗೆದ್ದ ಪತಿ (Husband), ತನ್ನ ಪತ್ನಿ (Wife), ಇಬ್ಬರು ಪುಟ್ಟಮಕ್ಕಳು, ಅತ್ತೆ(Mother in Law) , ಮಾವನನ್ನು (Father in Law) ಬೆಂಕಿ ಹಚ್ಚಿ ಹತ್ಯೆ ಮಾಡಿದ ಭೀಕರ ಘಟನೆ ಮಂಗ​ಳ​ವಾರ ನಡೆ​ದಿ​ದೆ. ಪಂಜಾ​ಬ್‌​ನ (Punjab) ಜಲಂಧರದ (Jalandhar) ತವರು ಮನೆ​ಯಲ್ಲಿ ಪತ್ನಿ ಪರ​ಮ್ಜಿತ್‌ ಕೌರ್‌ ತನ್ನ ಇಬ್ಬರು ಮಕ್ಕ​ಳೊಂದಿಗೆ ಕಳೆದ ಐದಾರು ತಿಂಗ​ಳು​ಗ​ಳಿಂದ ವಾಸಿ​ಸು​ತ್ತಿ​ದ್ದಳು. ಪತಿ ಕುಲ್‌​ದೀಪ್‌ ಸಿಂಗ್‌​ ಲುಧಿ​ಯಾ​ನಾದ ಖುರ್ಶೇ​ದ್‌​ಪು​ರ​ದ​ಲ್ಲಿದ್ದ ತನ್ನ ಮನೆಗೆ ಬರು​ವಂತೆ ಪತ್ನಿ​ಯನ್ನು ಒತ್ತಾ​ಯಿ​ಸು​ತ್ತಿ​ದ್ದ. ಆದ​ರೆ ತನ್ನನ್ನು ಹಾಗೂ ಮಕ್ಕ​ಳನ್ನು ಹೊಡೆ​ಯು​ತ್ತಾ​ನೆಂದು ಆಕೆ ಹೋಗಲು ನಿರಾ​ಕ​ರಿ​ಸಿ​ದ್ದಾಳೆ. ಈ ಹಿನ್ನೆಲೆಯಲ್ಲಿ ಕುಲದೀಪ್‌ ಮಂಗಳವಾರ ಇಬ್ಬರು ಸ್ನೇಹಿ​ತ​ರೊಂದಿಗೆ ಬಂದು ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಐವ​ರನ್ನು ಸಜೀ​ವ​ ದ​ಹನ ಮಾಡಿ​ದ್ದಾನೆ ಎಂದು ತಿಳಿದುಬಂದಿದೆ.
 
ಮಂಗಳವಾರ ಬೆಳ್ಳಂಬೆಳಗ್ಗೆ ಪತಿಯೊಬ್ಬ ತನ್ನ ಪತ್ನಿ, ಇಬ್ಬರು ಮಕ್ಕಳು, ಅತ್ತೆ-ಮಾವ ಸೇರಿ ಎಲ್ಲರೂ ಮಲಗಿದ್ದಾಗ ಪಂಪ್‌ನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿದ್ದಾನೆ. ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಕೋಣೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಈ ದುಷ್ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: Tumakuru: ಗಂಡನಿಂದಲೇ ಹೆಂಡತಿ ಮಗು ಕೊಲೆ: ದೇವಸ್ಥಾನದ ಹಣ ಕದ್ದಿದ್ದಕ್ಕೆ ಕುಟುಂಬಕ್ಕೆ ತಟ್ಟಿತ್ತೆ ಶಾಪ
 
ಪಂಜಾಬ್‌ನ ಜಲಂಧರ್‌ ಬಳಿಯ ಮೆಹತ್‌ಪುರದ ಬಿಟ್ಲಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮವು ಜಲಂಧರ್ ಭಾಗದಲ್ಲಿ ಸಟ್ಲೆಜ್ ನದಿಯ ದಂಡೆಯ ಮೇಲೆ ಬರುತ್ತದೆ. ಇನ್ನು, ಜಾಗ್ರಾವ್‌ನ ಖುರ್ಷೈದ್‌ಪುರ ಗ್ರಾಮದವರಾದ ಆರೋಪಿ ಕುಲದೀಪ್‌ ಸಿಂಗ್ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
 
ಬಲಿಯಾದವರಲ್ಲಿ  ಪತ್ನಿ ಪರ​ಮ್ಜಿತ್‌ ಕೌರ್ (28), ಅವರ ಮಗ ಗುರ್‌ಮೋಹನ್ ಸಿಂಗ್ (5), ಮಗಳು ಅರ್ಷ್‌ದೀಪ್ ಕೌರ್ (7), ತಂದೆ ಸುರ್ಜನ್ ಸಿಂಗ್ (58) ಮತ್ತು ತಾಯಿ ಜೋಗಿಂದರ್ ಬಾಯಿ (54) ಸೇರಿದ್ದಾರೆ. ಪರಮ್‌ಜಿತ್‌ ಕೌರ್‌ಗೆ ಇದು ಎರಡನೇ ಮದುವೆಯಾಗಿದೆ ಎಂದು ಮೃತ ಸುರ್ಜನ್ ಸಿಂಗ್ ಅವರ ಸಹೋದರ ಲಖ್ವಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ. 

Tap to resize

Latest Videos

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ: ಅಪ್ರಾಪ್ತೆ ಮತ್ತು ಬಾಯ್‌ಫ್ರೆಂಡ್‌ ಕೊಲೆ ಮಾಡಿದ ಕುಟುಂಬ
 
ಆರೋಪಿ ತನ್ನ ಪತ್ನಿ ಹಾಗೂ ಮಲ ಮಕ್ಕಳಿಗೆ ಆಗಾಗ್ಗೆ ಥಳಿಸುತ್ತಿದ್ದ. ತನ್ನ ಮಕ್ಕಳನ್ನು ಹೆತ್ತವರ ಬಳಿ ಬಿಟ್ಟು ತನ್ನೊಂದಿಗೆ ಬರಬೇಕು ಎಂದು ಆತ ಒತ್ತಾಯಿಸುತ್ತಿದ್ದ. ತನ್ನ ಸಹೋದರನ ಮನೆಯಿಂದ ಕಿರುಚಾಟ ಕೇಳಿದೆ ಎಂದೂ ಲಖ್ವಿಂದರ್ ಸಿಂಗ್ ಹೇಳಿದ್ದಾರೆ.
 
ನಂತರ, “ಏನಾಯಿತು ಎಂದು ನೋಡಲು ನಾನು ಧಾವಿಸಿ ಹೊರಬಂದಾಗ, ಕುಲದೀಪ್‌ ತನ್ನ ಸಹೋದರನ ಮನೆಯಿಂದ ಕೆಲವು ಅಪರಿಚಿತ, ಶಸ್ತ್ರಸಜ್ಜಿತ ವ್ಯಕ್ತಿಗಳೊಂದಿಗೆ ಹೋಗುವುದನ್ನು ನಾನು ನೋಡಿದೆ. ನಾನು ಕೋಣೆಯ ಬಳಿ ಹೋಗಿ, ಕಿಟಕಿಯಿಂದ ಇಣುಕಿ ನೋಡಿದೆ ಮತ್ತು ನನಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಕಾಣಿಸಿತು. ಎಲ್ಲರೂ ಮಲಗಿದ್ದ ಸ್ಥಳದಿಂದ ಕಿರುಚುತ್ತಿದ್ದರು,” ಎಂದೂ ಅವರು ಹೇಳಿದರು.
 

ಇದನ್ನೂ ಓದಿ: ಪತ್ನಿಗೆ 15 ಬಾರಿ ಇರಿದು ಕೊಲೆಗೆ ಯತ್ನಿಸಿದ ಪತಿ, ಕೃತ್ಯ ತಡೆಯುವ ಬದಲು ವಿಡಿಯೋ ಚಿತ್ರೀಕರಿಸಿದ ಸ್ಥಳೀಯರು!

ಇನ್ನು, ಈ ಘಟನೆ ಸಂಬಂಧ ಸ್ಥಳೀಯ ಎಸ್‌ಪಿ (SP) (ಡಿ) ಸರಬ್ಜಿತ್ ಎಸ್. ಬಹಿಯಾ ಅವರು, ಜೋಗಿಂದರ್ ಮತ್ತು ಗುರ್ಮೊಹಲ್ ಸ್ಥಳದಲ್ಲೇ ಮೃತಪಟ್ಟರು ಮತ್ತು ಇತರ ಮೂವರನ್ನು ಚಿಕಿತ್ಸೆಗಾಗಿ ನಾಕೋಡರ್ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು. ಜೋಗಿಂದರ್ ಮತ್ತು ಗುರ್ಮೊಹಲ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದರು ಎಂದೂ ಹೇಳಿದ್ದಾರೆ.
 
“ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ನಾವು ಪ್ರಮುಖ ಆರೋಪಿಯ ಕೆಲವು ಸಹಚರರನ್ನು ಬಂಧಿಸಿದ್ದೇವೆ.  ಕುಲದೀಪ್‌ ಅವರನ್ನು ಕೂಡ ಶೀಘ್ರದಲ್ಲೇ ಸೆರೆ ಹಿಡಿಯಲಾಗುತ್ತದೆ. ಪುರುಷರು ಬೈಕ್‌ಗಳಲ್ಲಿ ಬರುವುದು, ತಮಗೆ ಬೇಕಾದ ವಸ್ತುಗಳನ್ನು ಇಳಿಸುವುದು, ಹಿಂತಿರುಗುವುದು ಹಾಗೂ ಮತ್ತೆ ಕಾಲ್ನಡಿಗೆಯಲ್ಲಿ ಬರುವುದನ್ನು ನಾವು ದೃಶ್ಯಗಳಲ್ಲಿ ನೋಡಿದ್ದೇವೆ’’ ಎಂದೂ ಅವರು ಹೇಳಿದರು. ಇನ್ನು, ಈ ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ ಎಂದೂ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ (Superintendent of Police) ಮಾಹಿತಿ ನೀಡಿದ್ದಾರೆ. 

click me!