ಪ್ಲಾಟ್‌ ನೀಡದ ಡೆವಲಪರ್‌: 6 ಲಕ್ಷ ಬಡ್ಡಿ ಸಮೇತ ಹಿಂದಿರುಗಿಸಲು ಕೋರ್ಟ್ ಆದೇಶ

By Kannadaprabha NewsFirst Published Oct 19, 2022, 12:10 PM IST
Highlights

ಲೇಔಟ್‌ ಪೂರ್ಣಗೊಳಿದೆ ಮುಂಗಡವಾಗಿ ಪ್ಲಾಟ್‌ಗಾಗಿ ಹಣ ಪಡೆದು ನಂತರ ಪ್ಲಾಟ್‌ ಹಾಗೂ ಹಣ ಕೊಡದೇ ಸೇವಾ ನ್ಯೂನತೆ ಎಸಗಿದ ಡೆವಲಪರ್‌ಗೆ ಧಾರವಾಡದ ಜಿಲ್ಲಾ ಗ್ರಾಹಕರ ನ್ಯಾಯಾಲಯ ಮುಂಗಡ ನೀಡಿದ ಹಣವನ್ನು ಬಡ್ಡಿ ಸಮೇತ ನೀಡಲು ಆದೇಶ ನೀಡಿದೆ.

ಧಾರವಾಡ (ಅ.19) : ಲೇಔಟ್‌ ಪೂರ್ಣಗೊಳಿದೆ ಮುಂಗಡವಾಗಿ ಪ್ಲಾಟ್‌ಗಾಗಿ ಹಣ ಪಡೆದು ನಂತರ ಪ್ಲಾಟ್‌ ಹಾಗೂ ಹಣ ಕೊಡದೇ ಸೇವಾ ನ್ಯೂನತೆ ಎಸಗಿದ ಡೆವಲಪರ್‌ಗೆ ಧಾರವಾಡದ ಜಿಲ್ಲಾ ಗ್ರಾಹಕರ ನ್ಯಾಯಾಲಯ ಮುಂಗಡ ನೀಡಿದ ಹಣವನ್ನು ಬಡ್ಡಿ ಸಮೇತ ನೀಡಲು ಆದೇಶ ನೀಡಿದೆ. ವಿಜಯಪುರ ಗಣೇಶನಗರ ನಿವಾಸಿ ಶಿವಾನಂದ ಹೊಕ್ಕುಂಡಿ 2012ರಲ್ಲಿ ಕೃಷಿ ವಿವಿ ಎದುರಿಗಿನ ಸಾಧುನವರ ಎಸ್ಟೇಟ್‌ನ ಸಾಮನ್‌ ಡೆವಲಪ​ರ್‍ಸ್ನ ವಿನಯ ಸಾಹುಕಾರ ಬಳಿ 1200 ಚದರ ಅಡಿ ವಿಸ್ತೀರ್ಣವುಳ್ಳ ಎರಡು ಪ್ಲಾಟ್‌ಗಳನ್ನು . 9 ಲಕ್ಷಕ್ಕೆ ಖರೀದಿ ಕರಾರು ಮಾಡಿಕೊಂಡು . 6 ಲಕ್ಷ ಮುಂಗಡ ಸಂದಾಯ ಮಾಡಿದ್ದರು.

Fraud Case: 3.56 ಲಕ್ಷಕ್ಕೆ ಸರ್ಕಾರಿ ಪ್ಲಾಟ್‌ ಪಡೆದು 20 ಲಕ್ಷಕ್ಕೆ ಮಾರಾಟ?

Latest Videos

ಲೇಔಟ್‌ ಡೆವಲಪ್‌ ಮಾಡದೇ ಪ್ಲಾಟ್‌ಗಳನ್ನು ಅವರು ದೂರುದಾರರಿಗೆ ಕೊಟ್ಟಿರಲಿಲ್ಲ. ಹಲವು ಬಾರಿ ಪ್ಲಾಟ್‌ ಕೊಡುವಂತೆ ಅಥವಾ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದರೂ ಡೆವಲಪರ್‌ ನೆಪ ಹೇಳುತ್ತಾ ಸತಾಯಿಸುತ್ತಿದ್ದರು. ಆ ಬಗ್ಗೆ ಅವರು ಕೊಟ್ಟಎರಡು ಚೆಕ್‌ ಅಮಾನ್ಯವಾಗಿದ್ದು ಡೆವಲಪರ್‌ ವಿರುದ್ಧ ಧಾರವಾಡ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಚೆಕ್‌ ಬೌನ್ಸ್‌ ಪ್ರಕರಣ ನಡೆಯುತ್ತಿದೆ. ಡೆವಲ್‌ಪರ್‌ ಇಂತಹ ನಡವಳಿಕೆಯಿಂದ ಅವರು ತನಗೆ ಸೇವಾ ನ್ಯೂನತೆ ಎಸಗಿ ಮೋಸ ಮಾಡಿದ್ದಾರೆಂದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಶಿವಾನಂದ ದೂರು ಸಲ್ಲಿಸಿದ್ದರು.

Vastu Tips : ಇಂಥ ಪ್ಲಾಟ್ ನಲ್ಲಿ ಅಪ್ಪಿತಪ್ಪಿಯೂ ವಾಸ ಮಾಡ್ಬೇಡಿ

ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಎ. ಬೋಳಶೆಟ್ಟಿಮತ್ತು ಪಿ.ಸಿ. ಹಿರೇಮಠ, ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್‌ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಪ್ಲಾಟ್‌ ಕೊಡದೇ ಇರುವುದು ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನತೆ ಆಗಲಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಆ ಬಗ್ಗೆ ಸಾಮನ್‌ ಡೆವಲಪ​ರ್‍ಸ್ನ ಮಾಲೀಕ ವಿನಯ ಸಾಹುಕಾರ ದೂರುದಾರರಿಂದ ಪಡೆದ . 6 ಲಕ್ಷಕ್ಕೆ 2012 ಅ. 20ರಿಂದ ಹಣ ಹಿಂದಿರುಗಿಸುವವರೆಗೆ ಶೇ. 8ರಂತೆ ಬಡ್ಡಿ ಹಾಕಿ ಸಂದಾಯ ಮಾಡುವಂತೆ ಆದೇಶಿಸಿದೆ. ಜತೆಗೆ ಸೇವಾ ನ್ಯೂನತೆಯಿಂದ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ . 1 ಲಕ್ಷ ಪರಿಹಾರ ಹಾಗೂ . 10 ಸಾವಿರ ಪ್ರಕರಣದ ಖರ್ಚು-ವೆಚ್ಚವನ್ನು ತೀರ್ಪು ನೀಡಿದ ತಿಂಗಳ ಒಳಗಾಗಿ ನೀಡುವಂತೆ ಆಯೋಗ ಆದೇಶಿಸಿದೆ.

click me!