ಸಿಗರೇಟ್ ಸೇದುವ ವೇಳೆ ಗುರಾಯಿಸಿದ ಎಂದು ವ್ಯಕ್ತಿಯ ಅಟ್ಟಾಡಿಸಿ ಕೊಂದ ಮಹಿಳೆ

By Suvarna NewsFirst Published Apr 8, 2024, 1:23 PM IST
Highlights

ಸಿಗರೇಟ್ ಸೇದುತ್ತಿದ್ದ ವೇಳೆ ಗುರಾಯಿಸಿದ ಎಂದು ಮಹಿಳೆಯೊಬ್ಬಳು ತನ್ನಿಬ್ಬರು ಸ್ನೇಹಿತರನ್ನು ಕರೆಸಿ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಕೊಂದ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗ್‌ಪುರದಲ್ಲಿ ನಡೆದಿದೆ. 

ನಾಗಪುರ: ಸಿಗರೇಟ್ ಸೇದುತ್ತಿದ್ದ ವೇಳೆ ಗುರಾಯಿಸಿದ ಎಂದು ಮಹಿಳೆಯೊಬ್ಬಳು ತನ್ನಿಬ್ಬರು ಸ್ನೇಹಿತರನ್ನು ಕರೆಸಿ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಕೊಂದ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗ್‌ಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 28 ವರ್ಷದ ರಂಜಿತ್ ರಾಥೋಡ್ ಎಂದು ಗುರುತಿಸಲಾಗಿದ್ದು, ಸಂತ್ರಸ್ತ ರಾಥೋಡ್ 4 ಹೆಣ್ಣು ಮಕ್ಕಳ ಅಪ್ಪನಾಗಿದ್ದಾರೆ. 

ನಾಗಪುರದ ಮನೇವಾಡ ಸಿಮೆಂಟ್ ರೋಡ್‌ನಲ್ಲಿದ್ದ ಪಾನ್ ಶಾಪೊಂದರಲ್ಲಿ 24 ವರ್ಷದ ಮಹಿಳೆಯೊಬ್ಬಳು ಸಿಗರೇಟ್ ಸೇದುತ್ತಿದ್ದು, ಈ ವೇಳೆ ತನ್ನನ್ನು ರಂಜಿತ್ ರಾಥೋಡ್ ಗುರಾಯಿಸಿದ ಎಂದು ಸಿಟ್ಟಿಗೆದ್ದ ಮಹಿಳೆ ತನ್ನಿಬ್ಬರು ಸ್ನೇಹಿತರನ್ನು ಕರೆಸಿ ಆತನನ್ನು ಹೊಡೆದು ಕೊಂದಿದ್ದಾಳೆ. ಈ ಭಯಾನಕ ದೃಶ್ಯ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಜಯಶ್ರೀ ಪಂಢಾರೆ ಕೃತ್ಯವೆಸಗಿದ್ದ ಮಹಿಳೆ.

ಸಿಗರೇಟ್ ಎಳಿಬೇಡಿ ಎಂದ ಅರಣ್ಯ ಸಿಬ್ಬಂದಿಯ ಕಿವಿ ಕಚ್ಚಿ ಗಾಯಗೊಳಿಸಿದ ಮಹಿಳೆ!

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ತಾನು ಸಿಗರೇಟ್ ಸೇದುತ್ತಿದ್ದಿದ್ದನ್ನು ನೋಡಿದ ರಾಥೋಡ್ ಬಗ್ಗೆ ಜಯಶ್ರೀ ಪಂಧಾರೆ ಅಸಮಾಧಾನಗೊಂಡಿದ್ದಳು, ಈ ರಾಥೋಡ್ ಕೂಡ ಅಲ್ಲಿಗೆ ಸಿಗರೇಟ್ ಖರೀದಿಸುವುದಕ್ಕೆ ಬಂದಿದ್ದ, ಹಾಗೂ ಸಿಗರೇಟ್ ಎಳೆದು ತನ್ನತ್ತ ಹೊಗೆ ಬಿಡುತ್ತ ತನ್ನನ್ನು ನಿಂದಿಸುತ್ತಿದ್ದ ಜಯಶ್ರೀಯನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಈ ವೀಡಿಯೋದಲ್ಲಿ ಇಬ್ಬರು ಪರಸ್ಪರ ಬೈದಾಡಿಕೊಳ್ಳುತ್ತಿರುವ ದೃಶ್ಯವೂ ಇದೆ. ಈ ವೇಳೆ ಜಯಶ್ರೀ ಜೊತೆ ಸ್ನೇಹಿತೆ ಸವಿತಾ ಸಯ್ಯಾರೆ ಕೂಡ ಇದ್ದಳು. 

ವೀಡಿಯೋ ರೆಕಾರ್ಡ್‌ನಿಂದ ಮತ್ತಷ್ಟು ಕುಪಿತಗೊಂಡ ಜಯಶ್ರೀ ತನ್ನ ಸ್ನೇಹಿತರಾದ ಆಕಾಶ್ ರಾವತ್ ಹಾಗೂ ಜೀತು ಜಾಧವ್ ಎಂಬಿಬ್ಬರನ್ನು ಸ್ಥಳಕ್ಕೆ ಕರೆಸಿದ್ದಾಳೆ.  ಆದರೆ ಈ ವೇಳೆ ರಾಥೋಡ್ ಆ ಸ್ಥಳದಿಂದ ಹೊರಟು ತನ್ನ ಮನೆ ಇರುವ ಧ್ಯಾನೇಶ್ವರ ನಗರಕ್ಕೆ ಹೊರಟಿದ್ದಾನೆ. ಆದರೆ ಮಾರ್ಗ ಮಧ್ಯೆ ಮಹಾಲಕ್ಷ್ಮಿ ನಗರದಲ್ಲಿ ಬೀರ್ ಕುಡಿಯುವುದಕ್ಕಾಗಿ ವಾಹನ ನಿಲ್ಲಿಸಿದ್ದು, ಈ ವೇಳೆ ಅಲ್ಲಿಗೆ ತಲುಪಿದ ಜಯಶ್ರೀ ಸ್ನೇಹಿತರು ಆತನ ಮೇಲೆ ಹಲ್ಲೆ ಮಾಡಿ ಇರಿದಿದ್ದಾರೆ. ಚೂರಿ ಇರಿತದಿಂದ ರಾಥೋಡ್ ಪರಿಸ್ಥಿತಿ ಕ್ಷಣದಲ್ಲಿ ಗಂಭೀರ ಸ್ವರೂಪ ಪಡೆದಿದ್ದು ಮೃತಪಟ್ಟಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಜಯಶ್ರೀ ರಾಥೋಡ್‌ಗೆ ಚೂರಿಯಿಂದ ಹಲವು ಬಾರಿ ಇರಿಯುತ್ತಿರುವ ದೃಶ್ಯ ಸೆರೆ ಆಗಿದೆ. 

ಬೆಂಗಳೂರು: ಹಾಡುಹಗಲೇ‌ ಸಿಗರೇಟ್ ಡಿಸ್ಟ್ರಿಬ್ಯೂಟರ್ ಮೇಲೆ ಮಚ್ಚು ಬೀಸಿ ₹15 ಲಕ್ಷ ದರೋಡೆ!

ರಾಥೋಡ್ ಹತ್ಯೆಯ ನಂತರ ಈ ನಾಲ್ವರು ದತ್ತಾವಡಿಗೆ ತೆರಳಿದ್ದಾರೆ. ಬಳಿಕ ಅಲ್ಲಿಂದ ಕಲ್ಮೆಶ್ವರದ ಮೊಹೊಪಾಗೆ ಹೋಗಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಜಯಶ್ರೀ,  ಸವಿತಾ, ಆಕಾಶ್ ಎಂಬುವರನ್ನು ಬಂಧಿಸಲಾಗಿದೆ.  ಮೃತ ರಾಥೋಡ್‌ ಮೊಬೈಲ್ ಫೋನ್‌ನಲ್ಲಿ ಸೆರೆಯಾದ ದೃಶ್ಯಾವಳಿಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳು ಆರೋಪಿಗಳ ಬಂಧನದಲ್ಲಿ ಪ್ರಮುಖ ಪಾತ್ರವಹಿಸಿವೆ. 

ದತ್ತಾವಡಿಯಲ್ಲಿ ಸ್ಥಳ ಮಹಜರು ವೇಳೆ ಸ್ಥಳದಲ್ಲಿ ಆಕ್ಷೇಪಕಾರಿ ವಸ್ತುಗಳು ಪೊಲೀಸರಿಗೆ ಸಿಕ್ಕಿವೆ. ಒಂದು ಆರೋಪಿಯ ಮೊಬೈಲ್ ಫೋನ್‌ನಲ್ಲಿ ಮಾದಕವಸ್ತಗಳ ಚಿತ್ರಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. 

click me!