
ತುಮಕೂರು (ಏ.7): ಬೆಂಗಳೂರು ಗ್ರಾಮಾಂತರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆಗೆ ತೆರಳಿದ್ದ ಯುವಕನಿಗೆ ಚಾಕು ಇರಿದು ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನ ನಡೇಮಾವಿನಪುರದಲ್ಲಿ ನಡೆದಿದೆ.
ವೆಂಕಟಗೌಡನ ಪಾಳ್ಯದ ಕೀರ್ತಿ ಹಲ್ಲೆಗೊಳಗಾದ ಯುವಕ. ಚಂದ್ರ, ಜಗದೀಶ್, ಸುನೀಲ್ ಹಲ್ಲೆ ನಡೆಸಿರುವ ಯುವಕರು. ಹಲ್ಲೆ ನಡೆಸಿದ ಮೂವರು ಯುವಕರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆನ್ನಲಾಗಿದೆ. ಇನ್ನು ಹಲ್ಲೆಗೊಳಗಾದ ಯುವಕ ಕೀರ್ತಿ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಡಿಕೆ ಸುರೇಶ್ ನಾಮಪತ್ರ ಸಲ್ಲಿಸುವ ವೇಳೆ ಹೋಗಿದ್ದ ಕೀರ್ತಿ ಇದೇ ಸಿಟ್ಟಿಗೆ ಹಲ್ಲೆ ನಡೆಸಿರುವ ಯುವಕರು. ಡಿಕೆ ಸುರೇಶ್ ನಾಮಿನೇಷನ್‌ಗೆ ಯಾಕೆ ಹೋಗಿದ್ದೆ ಎಂದು ಗಲಾಟೆ ಮಾಡಿರುವ ಯುವಕರು. ರಾಜಕೀಯ ವೈಷಮ್ಯದಿಂದಲೇ ಹಲ್ಲೆ ನಡೆಸಿದ್ದಾರೆಂದು ಕೀರ್ತಿ ಆರೋಪಿಸಿದ್ದಾರೆ.
ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ರಾಯಚೂರು ಮೂಲದ ಯುವಕನ ಶವ ಪತ್ತೆ!
ಸದ್ಯ ಹಲ್ಲೆಯಿಂದ ಗಾಯಗೊಂಡಿರುವ ಯುವಕ ಕುಣಿಗಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ