ಅಪಘಾತ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ ಎರಡು ಗುಂಪುಗಳ ಮಧ್ಯೆ ಜಗಳ ಬಿಡಿಸಲು ಮುಂದಾಗಿದ್ದಕ್ಕೆ ಪುಂಡರು ಪೊಲೀಸ್ ಕಾನ್ಸ್‌ಟೇಬಲ್ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಹೊರವಲಯದಲ್ಲಿ ನಡೆದಿದೆ.
ಕಲಬುರಗಿ (ಏ.8): ಅಪಘಾತ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ ಎರಡು ಗುಂಪುಗಳ ಮಧ್ಯೆ ಜಗಳ ಬಿಡಿಸಲು ಮುಂದಾಗಿದ್ದಕ್ಕೆ ಪುಂಡರು ಪೊಲೀಸ್ ಕಾನ್ಸ್‌ಟೇಬಲ್ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಹೊರವಲಯದಲ್ಲಿ ನಡೆದಿದೆ.
ಕಾನ್ಸ್‌ಟೇಬಲ್ ಗಣಪತಿರಾವ್ ಘಂಟೆ ಹಲ್ಲೆಗೊಳಗಾಗಿರುವ ಪೇದೆ. ಆಳಂದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆ.
undefined
ಕ್ರೈಂ ಸಿಟಿ ಆಗ್ತಿದೆಯಾ ಕಲಬುರಗಿ? ಹಾಡಹಗಲೇ ಇಬ್ಬರ ಮಹಿಳೆಯ ಬರ್ಬರ ಹತ್ಯೆ!
ಆಳಂದ ಪಟ್ಟಣದ ಚಿಲ್ಲಾಳ ಪೆಟ್ರೋಲ್ ಬಂಕ್ ಬಳಿ ಬುಲೇರೋ ಟಂಟಂ ಆಟೋ ಮಧ್ಯೆ ಅಪಘಾತವಾಗಿದೆ. ಅಪಘಾತವಾಗಿದ್ದಕ್ಕೆ ಸ್ಥಳಕ್ಕೆ ಹೋಗಿದ್ದ ಪೊಲೀಸರು. ಆಕ್ಸಿಡೆಂಟ್ ವಿಚಾರಕ್ಕೆ ಎರಡು ಕಡೆಯ ಯುವಕರಿಂದ ಗಲಾಟೆಯಾಗಿದೆ. ಪೊಲೀಸರು ಆಕ್ಸಿಡೆಂಟ್ ಕೇಸ್ ಬಗೆಹರಿಸಿ ಕಳುಹಿಸುವ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಮತ್ತೊಂದು ಗ್ಯಾಂಗ್. ಆಳಂದ ತಾಲೂಕಿನ ನಿಪ್ಪಾಣಿ ತಾಂಡಾದ ಹುಡುಗರು ಬಂದು ಟಂಟಂ ಆಟೋದವರ ಜೊತೆ ಗಲಾಟೆ ನಡೆಸಿದ್ದಾರೆ.
ಪರೀಕ್ಷೆ ಬರೆಯಲು ತಂಗಿಗೆ ಚೀಟಿ ತಂದ ಅಣ್ಣ, ಬಿಡದ್ದಕ್ಕೆ ಪೊಲೀಸ್ ವಿರುದ್ಧ ಹಿಗ್ಗಾಮುಗ್ಗಾ ಥಳಿತ!
ಈ ವೇಳೆ ಗಲಾಟೆ ಬಿಡಿಸಲು ಮುಂದಾಗಿದ್ದ ಕಾನ್ಸ್‌ಟೇಬಲ್ ಮೇಲೆಯೂ ಹಲ್ಲೆ ನಡೆಸಿರುವ ಪುಂಡರು. ನಿಖಿಲ್, ಕರ್ಣ ಸೇರಿ ಸುಮಾರು ಎಂಟು ಜನರಿಂದ ಕಾನ್ಸ್‌ಟೇಬಲ್ ಮೇಲೆ ಮಾಡಿದ್ದಾರೆ. ಈ ವೇಳೆ ಇಬ್ಬರು ಪೊಲೀಸರ ಕೈಗೆ ಸಿಕ್ಕಿದ್ದು, ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಹಲ್ಲೆ ಘಟನೆ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು