ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!

ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!

Published : Jul 16, 2026, 10:54 PM IST

ಅವರೆಲ್ಲಾ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು ಜೈಲಿಗೆ ಬಂದಿದ್ರು. ಇನ್ನೂ ಚಿಕ್ಕ ವಯಸ್ಸು. ಆದ್ರೆ ಶಿಕ್ಷೆ ಪ್ರಮಾಣ ಇದ್ದಿದ್ದೆಲ್ಲಾ ದಶಕದ ಲೆಕ್ಕದಲ್ಲಿ. ಸೋ ಎಷ್ಟು ವರ್ಷ ಅಂತ ಜೈಲಲ್ಲೇ ಇರೋದು ಅಂತ ಒಂದು ದಿನ ಎಸ್ಕೇಪ್.

ಅವರೆಲ್ಲಾ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು ಜೈಲಿಗೆ ಬಂದಿದ್ರು. ಇನ್ನೂ ಚಿಕ್ಕ ವಯಸ್ಸು. ಆದ್ರೆ ಶಿಕ್ಷೆ ಪ್ರಮಾಣ ಇದ್ದಿದ್ದೆಲ್ಲಾ ದಶಕದ ಲೆಕ್ಕದಲ್ಲಿ. ಸೋ ಎಷ್ಟು ವರ್ಷ ಅಂತ ಜೈಲಲ್ಲೇ ಇರೋದು ಅಂತ ಒಂದು ದಿನ ಎಸ್ಕೇಪ್​ ಪ್ಲಾನ್​ ಮಾಡಿಯೇ ಬಿಟ್ಟರು. ಥೇಟ್​​ ಮಿಂಚಿನ ಓಟ ಸಿನಿಮಾ ಶೈಲಿಯ ಸ್ಕೆಚ್​​ ಅದು. ಅಂದುಕೊಂಡಂತೆ ಕಂಬಿಯನ್ನ ಕೊಯ್ದರು. ಕಾಂಪೌಂಡ್​​ ಕೂಡ ಹಾರಿದ್ರು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಎಸ್ಕೇಪ್​ ಆದ್ರು. ಆದ್ರೆ ಅವರೆಲ್ಲಾ ಹೋಗಿದ್ದೆಲ್ಲಿಗೆ.? ಪೊಲೀಸರಿಗೆ ಅವರು ಸಿಕ್ಕಿದ್ರಾ.? ಇಡೀ ರಾಜ್ಯವನ್ನೇ ಬೆರಗು ಗಣ್ಣಿನಲ್ಲಿ ನೋಡುವಂತೆ ಮಾಡಿದ ಸಿನಿಮಾ ಶೈಲಿಯ ಪ್ರಿಸನ್​​ ಬ್ರೇಕ್​​ ಕಥೆಯೇ ಇವತ್ತಿನ ಎಫ್​.ಐ.ಆರ್​​.

ಸೇಮ್​ ಮಿಂಚಿನ ಓಟ ಸಿನಿಮಾ ಶೈಲಿಯಲ್ಲಿ ಎಸ್ಕೇಪ್​ ಆದ್ರು.. ಆದ್ರೆ ಇಲ್ಲಿ ಅನುಮಾನ ಮೂಡೋದು ಕಾಂಪೌಂಡ್​ ಮೇಲಿನ ಕರೆಂಟ್​​ ವೈರ್​​ ಯಾಕೆ ಅವರು ಎಸ್ಕೇಪ್​ ಆಗೋ ಟೈಂನಲ್ಲಿ ವರ್ಕ್​ ಆಗಿಲ್ಲ ಅಂತ. ಬಟ್​ ಹೇಗೋ ಮೂವರು ಎಸ್ಕೇಪ್​ ಆದ್ರು. ನಂತರ ಏನೇನಾಯ್ತು.? ಪೊಲೀಸರ ಕೈಗೆ ಅವರು ಸಿಕ್ಕಿಬಿದ್ರಾ.? ಒಬ್ಬ ಮರ್ಡರ್​​ ಕೇಸ್​ನಲ್ಲಿ ಜೈಲು ಸೇರಿದ್ರೆ ಇನ್ನಿಬ್ಬರು ಪೋಕ್ಸೋ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಪಕ್ಕಾ ಪ್ಲಾನ್​ ಮಾಡಿ ಜೈಲಿನಿಂದ ಎಸ್ಕೇಪ್​ ಆದ್ರು. ಸಂತೋಷ್​ ಮತ್ತು ಸಾಗರ್​​ ಒಂದೇ ಬಸ್​ನಲ್ಲಿ ಬೀದರ್​ ಕಡೆಗೆ ಹೋದ್ರೆ ಮಸ್ತಾನ್​ ಮುಂಬೈ ಕಡೆ ಹೊರಟ.

ಆದ್ರೆ ಇತ್ತ ತನಿಖೆ ಆರಂಭಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಸಂತೋಷ್​ನನ್ನ ಬಂಧಿಸಿದ್ರು. ಆದ್ರೆ ಸಾಗರ್​​ ಜಸ್ಟ್​​ ಮಿಸ್​​ ಆಗಿಬಿಟ್ಟಿದ್ದ. ಕೆಲವೇ ನಿಮಿಷಗಳ ಹಿಂದೆ ಸಾಗರ್​​ ಬಸ್​ನಿಂದ ಇಳಿದು ಹೋಗಿದ್ದ. ಆದ್ರೆ ಸೋತೋಷನನ್ನ ಅರೆಸ್ಟ್​​ ಮಾಡುವ ವೇಳೆ ಆತ ತಪ್ಪಿಸಿಕೊಳ್ಳೋಕೆ ಯತ್ನಿಸಿದ. ಪರಿಣಾಮ ಮಿಂಚಿನ ಓಟದ ಕ್ಲೈಮ್ಯಾಕ್ಸ್​​ನಂತೆ ಆತನಿಗೆ ಪೊಲೀಸರು ಗುಂಡು ಹೊಡೆದರು. ರಾಜಕೀಯ ಏನೇ ಇರಲಿ. ಇವತ್ತು ಮೂವರು ಖೈದಿಗಳು ಎಸ್ಕೇಪ್​ ಆಗಿರೋದು ಜೈಲಿನ ಸಿಬ್ಬಂದಿಗಳ ಮೇಲೆಯೇ ಅನುಮಾನ ಬರೋದಕ್ಕೆ ಕಾರಣವಾಗಿದೆ. ಸದ್ಯ ಸಂತೋಷ ಲಾಕ್​ ಆಗಿದ್ದಾನೆ. ಇನ್ನಿಬ್ಬರ ಬೇಟೆ ಮುಂದುವರೆದಿದೆ. ನೋಡೋಣ ಅವರು ಇನ್ನೂ ಎಷ್ಟು ದಿನ ತಪ್ಪಿಸಿಕೊಂಡಿರುತ್ತಾರೆ.

25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more