ರಾಮಾಪುರ ಪೊಲೀಸರು ಆರೋಪಿ ಅಮಲ್ರಾಜ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕ್ರಿಸ್ಮಸ್ ಆಚರಣೆಗೆ ಚರ್ಚ್ ಗೆ ಹೋಗಬೇಕಿದ್ದ ಅಮಲ್ರಾಜ್ ಕಂಬಿ ಹಿಂದೆ ಹೋಗಿದ್ದಾನೆ. ಕೊಲೆಯಾದ ಶೋಭಾಳ ಸಂಬಂಧಿಕರನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಆದರೆ ಅಮಲ್ರಾಜ್ನನ್ನು ನಂಬಿ ಬಂದ ಶೋಭಾಳ ಇಬ್ಬರು ಮಕ್ಕಳೀಗ ಅನಾಥವಾಗಿದ್ದಾರೆ.
ವರದಿ- ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಡಿ.25): ನಿನ್ನೆಯಿಂದ ಎಲ್ಲೆಡೆ ಕ್ರಿಸ್ಮಸ್ ಸಡಗರ ಸಂಭ್ರಮ ಮನೆ ಮಾಡಿದೆ. ಆದರೆ ಆ ಕ್ರಿಸ್ಮಸ್ ಸೆಲೆಬ್ರೇಷನ್‌ನಲ್ಲಿರಬೇಕಾದ ಆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಚರ್ಚ್ ಗೆ ಪ್ರಾರ್ಥನೆಗೆ ಹೋಗಬೇಕಿದ್ದ ಪತಿ ಎಣ್ಣೆ ಏಟಲ್ಲಿ ತನ್ನ ಪತ್ನಿಯನ್ನೇ ಕೊಂದು ಜೈಲಿಗೆ ಹೋಗಿದ್ದಾನೆ ಅಷ್ಟಕ್ಕೂ ಅಲ್ಲಿ ಆಗಿದ್ದೇನು ಈ ಸ್ಟೋರಿ ನೋಡಿ.
undefined
ಕಣ್ಣಾಡಿಸಿದ ಕಡೆಯೆಲ್ಲ ಬೆಟ್ಟ ಗುಡ್ಡಗಳು. ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿರೊ ಪುಟ್ಟ ಗ್ರಾಮ. ಊರಿನ ಹೊರ ವಲಯದ ಜಮೀನಿನ ಬಳಿ ಗುಂಪು ಕಟ್ಟಿ ನಿಂತಿರೊ ಖಾಕಿ ಪಡೆ. ಪೊಲೀಸರ ಬಳಿ ಅದೇನನ್ನೊ ಹೇಳುತ್ತರೋ ಗ್ರಾಮಸ್ಥರು. ಆಂಬ್ಯುಲೆನ್ಸ್‌ನಲ್ಲಿರೊ ಶವ. ಜಮೀನಿನ ಮದ್ಯೆ ಬಿದ್ದಿರೊ ರಕ್ತದ ಕಲೆ. ಅದೆ ಜಮೀನಿನ ಸುತ್ತ ಅದೇನನ್ನ ಹುಡುಕಾಡುತ್ತಿರೊ ಎಫ್‌ಎಸ್‌ಎಲ್ ತಂಡ. ಎಲ್ಲ ದೃಶ್ಯ ಕಂಡು ಬಂದಿದ್ದು ಗಡಿ ನಾಡು ಚಾಮರಾಜನಗರ ಜಿಲ್ಲೆಯ ಹನೂರು ತಾಲೋಕಿನ ಬಿದರಹಳ್ಳಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಕ್ರೈಸ್ತ ಧರ್ಮದವರು ಇದ್ದಾರೆ. ವರ್ಷಕ್ಕೊಮ್ಮೆ ಇಡೀ ಊರಲ್ಲಿ ಕ್ರಿಸ್ಮಸ್ ಸಂಭ್ರಮ ಸಡಗರ ಮನೆ ಮಾಡುತ್ತದೆ. ಇಲ್ಲಿನ ಜನರು ಚರ್ಚಗಳಲ್ಲಿ ಪ್ರಾರ್ಥನೆ ಮಾಡಿ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ಮುಳುಗಿ ಹೋಗುತ್ತಾರೆ. ಆದರೆ ಗ್ರಾಮದ ಅಮಲ್ರಾಜ್ ಎಂಬಾತ ಮಾತ್ರ ಕುಡಿದ ಅಮಲ್ನಲ್ಲಿ ತನ್ನ ಪತ್ನಿ ಶೋಭಾಳನ್ನು ಕಲ್ಲಿನಿಂದ ಹೊಡೆದು ಹತ್ಯೆಗೈದಿದ್ದಾನೆ.
ಏನಿದು ಡಿಜಿಟಲ್ ಅರೆಸ್ಟ್?: ಡಿಜಿಟಲ್ ಅರೆಸ್ಟ್, ಫೋನ್ ಕರೆ ನಿಮಗೂ ಬರಬಹುದು
ಬಿದರಹಳ್ಳಿ ಗ್ರಾಮದ ಅಮಲ್ ರಾಜ್ ಎಂಟು ವರ್ಷಗಳ ಹಿಂದೆ ಕೆಲಸಕ್ಕೆಂದು ಬೆಂಗಳೂರು ಸಮೀಪದ ಬಿಡದಿಗೆ ಹೋಗಿದ್ದಾಗ ಅಲ್ಲಿ ಶೋಭಾ ಎಂಬ ಇಬ್ಬರು ಮಕ್ಕಳಿದ್ದ ವಿವಾಹಿತೆಯ ಪರಿಚಯವಾಗಿದೆ. ಅಮಲ್ರಾಜ್ ಹಾಗು ಶೋಭಾ ನಡುವೆ ಪ್ರೇಮಾಂಕುರವಾಗಿದೆ.
ಪ್ರೀತಿಗೆ ಕಣ್ಣಿಲ್ಲ ಅಂತಾರಲ್ಲ ಹಾಗೆಯೇ ಶೋಭಾ ತನ್ನ ಗಂಡನನ್ನು ಬಿಟ್ಟು ತನ್ನ ಇಬ್ಬರು ಮಕ್ಕಳೊಂದಿಗೆ ಅಮಲ್ರಾಜ್ ಜೊತೆ ಓಡಿ ಬಂದಿದ್ದಾಳೆ. ಬಳಿಕ ಇಬ್ಬರೂ ಮದುವೆಯಾಗಿದ್ದಾರೆ. ಅಮಲ್ರಾಜ್ ಹಾಗು ಶೋಭಾ ಇಬ್ಬರಿಗು ನಿತ್ಯ ಕುಡಿಯುತ್ತಿದ್ದರು. ಮದ್ಯದ ನಶೆಯಲ್ಲಿರುತ್ತಿದ್ದ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ಗದ್ದಲ ಸಾಮಾನ್ಯವಾಗಿತ್ತು. ಕ್ರಿಸ್ಮಸ್ ಹಿಂದಿನ ದಿನವೂ ಕಂಠಪೂರ್ತಿ ಕುಡಿದು ಇಬ್ಬರೂ ಜಗಳವಾಡಿಕೊಂಡಿದ್ದಾರೆ. ಮದ್ಯದ ನಶೆಯಲ್ಲಿದ್ದ ಅಮಲ್ರಾಜ್ ಕಲ್ಲಿನಿಂದ ಹೊಡೆದು ತನ್ನ ಪತ್ನಿ ಶೋಭಾಳನ್ನು ಕೊಲೆ ಮಾಡಿದ್ದಾನೆ.
ಅಕ್ರಮ ಸಂಬಂಧ ಬಯಲಿಗೆಳೆದ ಮಹಿಳೆಗೆ ಎಂಜಲು ನೆಕ್ಕಿಸಿದ ಗ್ರಾಮಸ್ಥರು; ಮುಂದಾಗಿದ್ದು ರಣರೋಚಕ
ಈ ಹಿಂದೆಯು ಸಹ ಅಮಲ್ರಾಜದ ಕುಡಿದು ಗ್ರಾಮದ ಕೆಲವರೊಂದಿಗೆ ಗಲಾಟೆ ಮಾಡಿಕೊಂಡು ಜೈಲು ಸೇರಿದ್ದ. ಜೈಲಿನಿಂದ ಬಂದ ಬಳಿಕ ಮತ್ತೆ ತನ್ನ ಹಳೆಚಾಳಿ ಮುಂದುವರಿಸಿದ್ದ. ನಿತ್ಯ ಎಣ್ಣೆ ಏರಿಸೋದು, ಸಿಕ್ಕಸಿಕ್ಕವರ ಮೇಲೆ ಕಿರಿಕ್ ತೆಗೆದು ಗಲಾಟೆ ಮಾಡುತ್ತಿದ್ದ. ಹೀಗೆ ತನ್ನ ಪತ್ನಿ ಶೋಭಾಳ ಜೊತೆಯೂ ಕಿರಿಕ್ ತೆಗೆದು ಕಲ್ಲಿನಿಂದ ಹೊಡೆದು ಮರ್ಡರ್ ಮಾಡಿಯೇ ಬಿಟ್ಟಿದ್ದಾನೆ.
ಸದ್ಯ ರಾಮಾಪುರ ಪೊಲೀಸರು ಆರೋಪಿ ಅಮಲ್ರಾಜ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕ್ರಿಸ್ಮಸ್ ಆಚರಣೆಗೆ ಚರ್ಚ್ ಗೆ ಹೋಗಬೇಕಿದ್ದ ಅಮಲ್ರಾಜ್ ಕಂಬಿ ಹಿಂದೆ ಹೋಗಿದ್ದಾನೆ. ಕೊಲೆಯಾದ ಶೋಭಾಳ ಸಂಬಂಧಿಕರನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಆದರೆ ಅಮಲ್ರಾಜ್ನನ್ನು ನಂಬಿ ಬಂದ ಶೋಭಾಳ ಇಬ್ಬರು ಮಕ್ಕಳೀಗ ಅನಾಥವಾಗಿದ್ದಾರೆ.