ನಾಯಿಮರಿಯನ್ನೂ ಬಿಡದ ಕಾಮುಕ ಸಿಕ್ಕಾಬಿದ್ದಾಗ ಆಗಿದ್ದೇನು? ಶಾಕಿಂಗ್​ ಘಟನೆ ವಿವರಿಸಿದ ನಟಿ ಜಯಾ

Published : Dec 25, 2024, 08:15 PM ISTUpdated : Dec 27, 2024, 05:50 PM IST
ನಾಯಿಮರಿಯನ್ನೂ ಬಿಡದ ಕಾಮುಕ ಸಿಕ್ಕಾಬಿದ್ದಾಗ ಆಗಿದ್ದೇನು? ಶಾಕಿಂಗ್​ ಘಟನೆ ವಿವರಿಸಿದ ನಟಿ ಜಯಾ

ಸಾರಾಂಶ

ನಾಯಿಮರಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬಾಲಿವುಡ್ ನಟಿ ಜಯಾ ಭಟ್ಟಾಚಾರ್ಯ ಖಂಡಿಸಿದ್ದಾರೆ. ಆರೋಪಿಗೆ ಸುಲಭವಾಗಿ ಜಾಮೀನು ಸಿಕ್ಕಿರುವುದನ್ನು ಪ್ರಶ್ನಿಸಿ, ಕಾನೂನಿನ ದುರ್ಬಲತೆ ಮತ್ತು ಪ್ರಾಣಿ ಹಕ್ಕುಗಳ ರಕ್ಷಣೆಯ ಕೊರತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಯ ಮುಖ ಬಹಿರಂಗಪಡಿಸುವಂತೆ ಜನರ ಒತ್ತಾಯವೂ ಕೇಳಿಬಂದಿದೆ. ನ್ಯಾಯ ವಿಳಂಬ ಮತ್ತು ಅಪರಾಧಿಗಳಿಗೆ ಸುಲಭ ಜಾಮೀನಿನ ಬಗ್ಗೆಯೂ ಚರ್ಚೆ ಹುಟ್ಟಿಕೊಂಡಿದೆ.

ಕಾಮುಕರ ಅಟ್ಟಹಾಸ ಮಿತಿ ಮೀರುತ್ತಲೇ ಸಾಗುತ್ತಿದೆ. ಕಲಿಯುಗದ ಅಂತ್ಯದ ಬಗ್ಗೆ ಇದಾಗಲೇ ಹಲವರು ಘನಘೋರ ಭವಿಷ್ಯ ನುಡಿಯುತ್ತಿರುವ ನಡುವೆಯೇ, ಅವರ ವಾಣಿಯಂತೆ ಲೈಂಗಿಕ ಕ್ರಿಯೆಗೆ ಮನುಷ್ಯರು ಹೇಗೆ ಪ್ರಾಣಿಗಳನ್ನೂ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಕುರಿ, ಮೇಕೆ, ನಾಯಿ... ಹೀಗೆ ಮೂಕ ಪ್ರಾಣಿಗಳ ರೋಧನೆ ಅರಣ್ಯರೋಧನವಾಗಿದೆಯಷ್ಟೇ. ಪುಟ್ಟ ಕಂದಮ್ಮಗಳ ಮೇಲೆ ಅತ್ಯಾಚಾರ ನಡೆದಾಗಲೂ ಅದೆಷ್ಟೋ ಪಾಪಿಗಳು ಸುಲಭದಲ್ಲಿ ತಪ್ಪಿಸಿಕೊಳ್ಳುತ್ತಿರುವ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇರುವಾಗ ಈಗ ಈ ಮೂಕ ಪ್ರಾಣಿಗಳ ನೋವನ್ನು ಕೇಳುವವರಾರು ಎನ್ನುತ್ತಲೇ ಬಾಲಿವುಡ್​ ನಟಿ ಜಯಾ ಭಟ್ಟಾಚಾರ್ಯ ಅವರು ಪುಟಾಣಿ ನಾಯಿಮರಿಯೊಂದರ ಮೇಲೆ ನಡೆದಿರುವ ಅತ್ಯಾಚಾರದ ಪ್ರಕರಣವನ್ನು ವಿವರಿಸಿದ್ದಾರೆ.

ಈ ನಾಯಿಮರಿಯ ಮೇಲೆ ಕಾಮುಕನೊಬ್ಬ ಲೈಂಗಿಕ ಕ್ರಿಯೆ ನಡೆಸಿದ್ದ. ಆತ ಸಿಕ್ಕಿಯೂ ಬಿದ್ದಿದ್ದ. ಆದರೆ ಆತನಿಗೆ ಸುಲಭದಲ್ಲಿ ಜಾಮೀನು ಸಿಕ್ಕಿದೆ ಎಂದು ನೋವಿನಿಂದ ನುಡಿದಿರುವ ನಟಿ, ಇದಕ್ಕೆಲ್ಲಾ ಕೊನೆ ಎಂದು ಎಂದು ಪ್ರಶ್ನಿಸಿದ್ದಾರೆ. ನಮ್ಮ ಕಾನೂನು ವ್ಯವಸ್ಥೆ, ಘನಘೋರ ಅಪರಾಧ ಮಾಡಿದರೂ ಸುಲಭದಲ್ಲಿ ಸಿಗುವ ಜಾಮೀನು, ಜಾಮೀನು ಪಡೆದು ಮತ್ತದೇ ಹೀನಕೃತ್ಯಕ್ಕೆ ತೊಡಗುವ ರಾಕ್ಷಸರು... ಇದಕ್ಕೆ ಕೊನೆಯೇ ಇಲ್ಲವಾಗಿದೆ. ಕಾನೂನು ಕಠಿಣವಾದ ಹೊರತೂ ಮನುಷ್ಯರಷ್ಟೇ ಅಲ್ಲದೇ ಪ್ರಾಣಿಗಳಿಗೂ ರಕ್ಷಣೆ ಇಲ್ಲದಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ.

ಪೆನ್​ಡ್ರೈವ್​ನಲ್ಲಿ 'ನೀಟ್'​ ಟೀಚರ್ ರಾಸಲೀಲೆ! ವಿದ್ಯಾರ್ಥಿನಿ ಜೊತೆಗಿನ 10 ನಿಮಿಷದ ವಿಡಿಯೋ ಲೀಕ್​- ಅರೆಸ್ಟ್​

ಆ ಪಾಪಿಯ ಮುಖವನ್ನಾದರೂ ಸೋಷಿಯಲ್​ ಮೀಡಿಯಾದಲ್ಲಿ ಹಾಕಿ, ಹೀಗಾದರೂ ಅವನ ಮಾನ ಹರಾಜು ಆಗಲಿ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ. ಕೆಲವು ಬಾರಿ ನ್ಯಾಯಾಲಯಗಳಲ್ಲಿ  ಈ ರೀತಿಯ ಆದೇಶಗಳು ಬರುವ ಕಾರಣವೇ ಜನರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವಂತಾಗಿದೆ, ಅಮಾಯಕರಿಗೆ ಬೆಲೆಯೇ ಇಲ್ಲವಾಗಿದೆ. ಇಂಥ ಹಂತಕರು, ಅತ್ಯಾಚಾರಿಗಳಿಗೇ ಗೆಲುವು ಆಗುತ್ತಿದೆ. ಒಂದು ಕಡೆ ವಿಳಂಬ ನ್ಯಾಯ, ಇನ್ನೊಂದು ಕಡೆ ಕೊಲೆಗೆಡುಗರು, ಅತ್ಯಾಚಾರಿಗಳಿಗೆ ಸುಲಭದಲ್ಲಿ ಸಿಗುವ ಜಾಮೀನು, ಅವರಿಗೆ ಜಾಮೀನು ಸಿಕ್ಕ ನಂತರ ಸಂತ್ರಸ್ತರ ಕುಟುಂಬಗಳಿಗೆ ಆಗುವ ಜೀವಭಯ... ಇವೆಲ್ಲವುಗಳ ಚರ್ಚೆಯನ್ನು ಈ ಘಟನೆ ಹುಟ್ಟುಹಾಕಿದೆ.

ಇನ್ನು ನಟಿ ಜಯ ಭಟ್ಟಾಚಾರ್ಯ ಅವರ ಕುರಿತು ಹೇಳುವುದಾದರೆ, ಇವರು ಬಾಲಿವುಡ್​ನ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ಹೆಸರು ತಂದು ಕೊಟ್ಟಿರುವುದು ಕಿರುತೆರೆ.  ಏಕ್ತಾ ಕಪೂರ್ ಅವರ ಸೋಪ್ ಒಪೆರಾ, ಕ್ಯುಂಕಿ ಸಾಸ್ ಭೀ ಕಭಿ ಬಹು ಥಿಯಲ್ಲಿ ಪಾಯಲ್ ಪಾತ್ರದಲ್ಲಿ ವ್ಯಾಪಕವಾಗಿ ಹೆಸರುವಾಸಿಯಾದವರು. ಕಸಮ್ ಸೇ ಚಿತ್ರದಲ್ಲಿ ಜಿಜ್ಞಾಸಾ ಬಾಲಿ, ಝಾನ್ಸಿ ಕಿ ರಾಣಿಯಲ್ಲಿ ಸಕ್ಕು ಬಾಯಿ ಮತ್ತು ಗಂಗಾದಲ್ಲಿ ಸುಧಾ ಬುವಾ ಪಾತ್ರಗಳನ್ನು ನಿರ್ವಹಿಸಿದ್ದಾರೆ . ಥಾಪ್ಕಿ ಪ್ಯಾರ್ ಕಿ, ಸಿಲ್ಸಿಲಾ ಬದಲ್ತೆ ರಿಶ್ತಾದಿಂದಲು ಸಾಕಷ್ಟು ಫೇಮಸ್​ ಆದವರು.  ಅವರು ಬಾಲಿವುಡ್ ಚಿತ್ರಗಳಾದ ದೇವದಾಸ್ ಮತ್ತು ಲಜ್ಜಾದಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದಾರೆ . 2000 ರಲ್ಲಿ ಸ್ಟಾರ್‌ಪ್ಲಸ್‌ನಲ್ಲಿ ಏಕ್ತಾ ಕಪೂರ್‌ರ ಬ್ಲಾಕ್‌ಬಸ್ಟರ್ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿಯಲ್ಲಿ ಮುಖ್ಯ ಪ್ರತಿಸ್ಪರ್ಧಿ ಪಾಯಲ್ ಮೆಹ್ರಾಳ ಪಾತ್ರವನ್ನು ನಿರ್ವಹಿಸಿದ್ದು ಅವರಿಗೆ ಬ್ರೇಕ್​ ಸಿಕ್ಕಿತು.  ಆ ಸಮಯದಲ್ಲಿ ಭಾರತದಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಸೀರಿಯಲ್​ ಇದು.  ಝೀ ಟಿವಿಯಲ್ಲಿ ಐತಿಹಾಸಿಕ ಸರಣಿ ಝಾನ್ಸಿ ಕಿ ರಾಣಿಯಲ್ಲಿ ಸಕ್ಕು ಬಾಯಿಯ ಅವತಾರದಲ್ಲಿ ಇವರು ಕಾಣಿಸಿಕೊಂಡಿದ್ದಾರೆ .  

ಪತ್ನಿ- ಮಗ ದೂರದಲ್ಲಿ ವಾಸಿಸ್ತಿರೋದಕ್ಕೆ ಕಾರಣ... ಮೊದಲ ಬಾರಿ ಮೌನ ಮುರಿದ ನಟ ವಿನೋದ್ ರಾಜ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!