
ಪೆನ್‌ಡ್ರೈವ್ ಹಗರಣ ಕೆಲ ತಿಂಗಳ ಹಿಂದೆ ಭಾರಿ ಸದ್ದು ಮಾಡಿದ್ದು ನೆನಪಿರಬಹುದು. ಆಗಾಗ್ಗೆ ಪೆನ್‌ಡ್ರೈವ್, ಸಿಡಿ ಇಂಥ ಶಬ್ದಗಳು ಕಿವಿಗೆ ಬೀಳುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ನೀಟ್ ಪರೀಕ್ಷೆಗೆ ರೆಡಿಯಾಗ್ತಿರೋ ವಿದ್ಯಾರ್ಥಿನಿಯ ಜೊತೆಗೆ ಜೀವಶಾಸ್ತ್ರವನ್ನು ಬೋಧಿಸುತ್ತಿದ್ದ ಸಾಹಿಲ್ ಸಿದ್ದಿಕಿ ಎಂಬ ಶಿಕ್ಷಕನ ಕರಾಮತ್ತು ಇದಾಗಿದೆ. ಅಲ್ಲಿರುವ ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯಾವಳಿ ಸೆರೆಯಾಗಿದೆ. ಬಾತ್‌ರೂಮ್‌ನಲ್ಲಿ ವಿದ್ಯಾರ್ಥಿನಿಯ ಜೊತೆ ಮಾಡಬಾರದ್ದು ಮಾಡುತ್ತಾ ಸಿಕ್ಕಿಬಿದ್ದಿರುವ ದೃಶ್ಯ ಇದರಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿಗಳನ್ನು ಪೆನ್ಡ್ರೈವ್ನಲ್ಲಿ ಪೊಲೀಸರಿಗೆ ಯಾರೋ ಕಳಿಸಿರುವ ಹಿನ್ನೆಲೆಯಲ್ಲಿ ಶಿಕ್ಷಕ ಸದ್ಯ ಅರೆಸ್ಟ್ ಆಗಿದ್ದಾನೆ.
ಉತ್ತರ ಪ್ರದೇಶದ ಕಾನ್ಪುರದ ಕಾನ್ಪುರದ ಕಾಕಡಿಯೊದಲ್ಲಿ ಐ ಆ್ಯಂಡ್ ಐ ಕೋಚಿಂಗ್‌ನಲ್ಲಿ ಜೀವಶಾಸ್ತ್ರವನ್ನು ಬೋಧಿಸುತ್ತಿರುವ ಸಾಹಿಲ್ ಸಿದ್ದಿಕಿ ಎಂಬ ಶಿಕ್ಷಕನನ್ನು ಭಾನುವಾರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನೀಟ್ ಆಕಾಂಕ್ಷಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ. ಕೋಚಿಂಗ್ ಸೆಂಟರ್‌ನ ನಿರ್ದೇಶಕ ಆಶಿಶ್ ಶ್ರೀವಾಸ್ತವ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸುದೀಪ್ - ನನ್ನದು ಫಸ್ಟ್ ಲವ್... ಆ ಆ್ಯಕ್ಸಿಡೆಂಟ್ ಲೈಫನ್ನೇ ಬದಲಿಸಿಬಿಟ್ಟಿತು: ಸೀತಾರಾಮ ಶ್ಯಾಮ್ ಓಪನ್ ಮಾತು
ಎರಡು ದಿನಗಳ ಹಿಂದೆ, ಕೋಚಿಂಗ್ ಸೆಂಟರ್‌ನಲ್ಲಿ ಸಾಹಿಲ್ ಅವರ ಹೆಸರಿದ್ದ ಒಂದು ಲಕೋಟೆ ಬಂದಿತ್ತು. ಆ ಮುಚ್ಚಿದ ಲಕೋಟೆಯನ್ನು ಆಶಿಶ್ ಶ್ರೀವಾಸ್ತವ ಅವರ ಕೈಸೇರಿತು. ಒಳಗೆ ಪೆನ್ ಡ್ರೈವ್ ಇದ್ದು, ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿದಾಗ , ಕೋಚಿಂಗ್ ಆವರಣದಲ್ಲಿ ಸಾಹಿಲ್ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆಯಲ್ಲಿ ತೊಡಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಬಹಿರಂಗಪಡಿಸಿತು. ಸುಮಾರು ಹತ್ತು ನಿಮಿಷಗಳ ಕಾಲ ಬಾತ್‌ರೂಮ್‌ನಲ್ಲಿ ವಿದ್ಯಾರ್ಥಿನಿಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವುದು ಅದರಲ್ಲಿ ದಾಖಲಾಗಿದೆ. ಇದರ ವಿಡಿಯೋ ಈಗ ವೈರಲ್ ಆಗಿದೆ.
ಈ ವಿಡಿಯೋದ ಬಗ್ಗೆ ವಿಭಿನ್ನ ರೀತಿಯ ಚರ್ಚೆಗಳು ಶುರುವಾಗಿದೆ. ಇದರಲ್ಲಿ ವಿದ್ಯಾರ್ಥಿನಿ ಶಿಕ್ಷಕನ ಜೊತೆ ಸಲೀಸಾಗಿ ಇರುವುದನ್ನು ನೋಡಿರುವ ಹಲವರು, ಇದರಲ್ಲಿ ವಿದ್ಯಾರ್ಥಿನಿಯ ತಪ್ಪು ಕೂಡ ಇದೆ ಎಂದಿದ್ದಾರೆ. ವಿದ್ಯಾರ್ಥಿನಿ ಆರಾಮವಾಗಿ ಶಿಕ್ಷಕನಿಗೆ ಸಪೋರ್ಟ್ ಮಾಡುವುದನ್ನು ನೋಡಬಹುದು ಎನ್ನುವುದು ಬಹುತೇಕರ ಅಭಿಮತ. ಆದರೆ ಇಂಥ ಪ್ರಕರಣಗಳಲ್ಲಿ ಶಿಕ್ಷಕರಿಗಷ್ಟೇ ಶಿಕ್ಷೆಯಾಗುವುದು ತಪ್ಪು ಎಂದು ಹಲವರು ಹೇಳುತ್ತಿದ್ದಾರೆ.
ಇವ್ರು ನನ್ನ ಒಳ್ಳೆಯ ಗಂಡ ಅಲ್ಲ... ಆದ್ರೆ... ನಟಿ ಮೇಘನಾ ರಾಜ್ ಹಳೆಯ ವಿಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ