ಹಾಸನದದಲ್ಲಿ ಮಹಿಳೆಯ ಕೊಲೆ ಮಾಡಿ ಲೀವಿಂಗ್‌ ಪಾರ್ಟನರ್‌ ಪರಾರಿ

By Anusha Kb  |  First Published Jan 27, 2023, 8:24 PM IST

ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ ತನ್ನೊಂದಿಗೆ ಜೀವನ ಮಾಡುತ್ತಿದ್ದ ಯುವತಿಯೊಬ್ಬಳನ್ನು ತಂತಿಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.  ಹಾಸನ ತಾಲೂಕಿನ ಗುಡ್ಡೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ.


ಹಾಸನ:  ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ ತನ್ನೊಂದಿಗೆ ಜೀವನ ಮಾಡುತ್ತಿದ್ದ ಯುವತಿಯೊಬ್ಬಳನ್ನು ತಂತಿಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.  ಹಾಸನ ತಾಲೂಕಿನ ಗುಡ್ಡೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 23 ವರ್ಷ ಪ್ರಾಯದ ಸಿರಿ ಕೊಲೆಯಾದ ಯುವತಿ. 26 ವರ್ಷದ ಆದಿ ಕೊಲೆ ಮಾಡಿದ ಆರೋಪಿ. 

ಇಬ್ಬರೂ 8 ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ (Facebook) ಪರಸ್ಪರ ಪರಿಚಯವಾಗಿದ್ದರು. ಇವರ ಫೇಸ್‌ಬುಕ್‌ ಸ್ನೇಹ ಪ್ರೀತಿಗೆ ತಿರುಗಿದ್ದು, ಇಬ್ಬರು ಜೊತೆಯಾಗಿಯೇ ಜೀವನ ಮಾಡಲು ಶುರು ಮಾಡಿದ್ದರು.  ಆದರೆ ಈಗ ಯುವತಿಯ ಕೊಲೆ ಆಗಿದ್ದು, ಲೀವಿಂಗ್  ಟುಗೆದರ್ (Living Together) ದುರಂತ ಅಂತ್ಯವಾಗಿದೆ.  ನಿನ್ನೆ ರಾತ್ರಿ ಸಿರಿಯನ್ನು ಕೊಲೆ ಮಾಡಿ ಆದಿ ಪರಾರಿಯಾಗಿದ್ದಾನೆ. ಒಂದು ತಿಂಗಳ ಹಿಂದಷ್ಟೇ ಗುಡ್ಡೇನಹಳ್ಳಿ (Guddenahalli) ಗ್ರಾಮಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದ ಸಿರಿ ಹಾಗೂ ಆದಿ ನಗರದ ಪೆಟ್ರೋಲ್ ಬಂಕೊಂದರಲ್ಲಿ ಕೆಲಸ ಮಾಡುತ್ತಿದ್ದರು. 

Tap to resize

Latest Videos

ಮದ್ವೆ ಆಗು ಎಂದಿದ್ದೇ ತಪ್ಪಾಯ್ತು: ಗೆಳತಿಯ ಕೊಂದು 35 ಪೀಸ್ ಮಾಡಿದ ಪಾಪಿ

ಕೊಲೆಯಾದ ಯುವತಿ ಸಿರಿ (Siri) ಬೆಂಗಳೂರಿನ ವಿಜಯನಗರ (Vijayanagar) ಮೂಲದವನಾಗಿದ್ದು,  ಆದಿ (Adi) ಹಾಸನದ ಮಾರನಾಯಕನಹಳ್ಳಿ ಗ್ರಾಮದವನು.  ಆದರೆ ಕೊಲೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಶ್ವಾನ ದಳದೊಂದಿಗೆ ಎ‌ಎಸ್‌ಪಿ ತಮ್ಮಯ್ಯ, ಡಿವೈಎಸ್‌ಪಿ ಉದಯ್‌ ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. 

ನಾನು, ಸೌಜನ್ಯ ಫ್ರೆಂಡ್ಸ್, ಲೀವಿಂಗ್ ಟುಗೆದರ್ ಇರ್ಲಿಲ್ಲ: ನಟ ವಿವೇಕ್

click me!