ಹೆಂಡತಿ ನೋಡಲು ಸರಿ ಇಲ್ಲವೆಂದು ಕೊಂದ ಪಾಪಿಗೆ, 8 ವರ್ಷದ ಬಳಿಕ ದಂಡ ಸಹಿತ ಜೀವಾವಧಿ ಶಿಕ್ಷೆ!

By Suvarna News  |  First Published Jan 27, 2023, 6:13 PM IST

ಪತ್ನಿ ನೋಡಲು ಚೆನ್ನಾಗಿ ಇಲ್ಲವೆಂದು ಆಕೆಯ ಕೊಲೆ ಮಾಡಿದ ಪತಿಗೆ ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ.


ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜ.27): ಪತ್ನಿ ನೋಡಲು ಚೆನ್ನಾಗಿ ಇಲ್ಲವೆಂದು ಆಕೆಯ ಕೊಲೆ ಮಾಡಿದ ಪತಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ. ವಿಜಯಪುರ ಜಿಲ್ಲೆಯ‌ ಕಾತ್ರಾಳ ಗ್ರಾಮದ ನಿವಾಸಿ ಮಾಳಪ್ಪ ಶಿವಪ್ಪ ಚಿನಗಂಡಿ ಶಿಕ್ಷೆಗೆ ಒಳಗಾದ ಆರೋಪಿ ಯಾಗಿದ್ದಾನೆ. ಇತನ ಪತ್ನಿ ಸಾವಿತ್ರಿ ಚಿನಗಂಡಿ ಪತಿಯಿಂದ ಕೊಲೆ ಯಾದ ದುರ್ದೈವಿ ಯಾಗಿದ್ದಾಳೆ. 

Latest Videos

undefined

ಪತ್ನಿಯ ಮೇಲೆ ಇಲ್ಲದ ಸಂಶಯ:
ಮೃತ ಸಾವಿತ್ರ ಪದೇ ಪದೇ ಪತಿ ಮಾಳಪ್ಪನ ಮೇಲೆ ಸಂಶಯಗೊಂಡು ಜಗಳವಾಡುತ್ತಿದ್ದಳು. ಇದರಿಂದ ರೋಷಿ ಹೋಗಿದ್ದ ಮಾಳಪ್ಪ ಸಹ  ನೀನು ಸರಿಯಿಲ್ಲ,  ಸರಿಯಾಗಿ ಕೆಲಸ ಮಾಡುವದಿಲ್ಲ, ನೀನು ನೋಡಲು ಚಂದವಿಲ್ಲವೆಂದು ಆರೋಪಿಸಿ ಆಕೆಯ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದನು. ಇದರಿಂದ ಮನೆಯಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿತ್ತು. 

ಮೈಮೇಲೆ ಉಗಿದಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವತಿಯ ಮುಖಕ್ಕೆ ಚಾಕುವಿನಿಂದ ಇರಿದ ಪಾಪಿ

ಆಸ್ಪತ್ರೆಗೆ ಕರೆದೊಯ್ತಿನಿ ಎಂದು ಕೊಂದ:
2015ರ ಮಾರ್ಚ್ 9ರಂದು ಮಾಳಪ್ಪ ಪತ್ನಿ ಸಾವಿತ್ರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಕಾತ್ರಾಳ ಕೆರೆಯ ಒಡ್ಡಿನ ಮೇಲೆ ಬೈಕ್ ನಿಲ್ಲಿಸಿ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಇದೇ ವೇಳೆ ಅಲ್ಲಿಯೇ ಹೋಗುತ್ತಿದ್ದ ಸವನಳ್ಳಿಯ ಕಲ್ಲಪ್ಪ ಭಾವಿಕಟ್ಟಿ ಹಾಗೂ ಆತನ ಮಗ ಬಿಡಿಸಲು ಮುಂದಾಗಿದ್ದಾಗ ಅವರಿಗೂ ಆರೋಪಿ ಮಾಳಪ್ಪ ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಸಾವಿತ್ರಿಯನ್ನು ಕೊಲೆ ಮಾಡಿ, ಬೈಕ್ ನಲ್ಲಿ ಹೋಗುತ್ತಿದ್ದಾಗ ಬಿದ್ದು ಗಾಯಗೊಂಡು ಪೊಲೀಸರ ಅತಿಥಿಯಾಗಿದ್ದನು. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡ ಅಂದಿನ ಸಿಪಿಐ ಆರ್. ಎಸ್.ಚೌಧರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ್ದರು.

'ಲಾಯರ್‌ ಕರೀತಿದ್ದಾರೆ 1 ಅವರ್‌ ಕೆಲಸ..' ಎಂದ್ಹೇಳಿ ಹೊರಟವನು ಸಲಿಂಗಕಾಮಕ್ಕೆ ಬಲಿಯಾದ!

ಆರೋಪಿಗೆ ದಂಡ ಸಹಿತ ಜೀವಾವಧಿ ಶಿಕ್ಷೆ:
ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡೆ, ಆರೋಪಿ ಮಾಳಪ್ಪ ಚನಗಂಡಿಗೆ ಜೀವಾವಧಿ ಶಿಕ್ಷೆ ಹಾಗೂ 1ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅದರಲ್ಲಿ 75ಸಾವಿರ ರೂ. ಮೃತಳ ವಾರಸುದಾರರಿಗೆ ಹಾಗೂ 25ಸಾವಿರ ರೂ.‌ ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ತುಂಬುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಮ್ ವಾದ ಮಂಡಿಸಿದ್ದರು.

click me!