ಮೈಮೇಲೆ ಉಗಿದಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವತಿಯ ಮುಖಕ್ಕೆ ಚಾಕುವಿನಿಂದ ಇರಿದ ಪಾಪಿ

Published : Jan 27, 2023, 03:54 PM IST
 ಮೈಮೇಲೆ ಉಗಿದಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವತಿಯ ಮುಖಕ್ಕೆ ಚಾಕುವಿನಿಂದ ಇರಿದ ಪಾಪಿ

ಸಾರಾಂಶ

ಮೈಮೇಲೆ ಉಗಿದಿದ್ದನ್ನು ಪ್ರಶ್ನಿಸಿದ್ದಕ್ಕೆ ದುರುಳನೋರ್ವ ಕಾಲೇಜು ವಿದ್ಯಾರ್ಥಿನಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.

ಬುಲಂದ್‌ಶಹರ್: ಮೈಮೇಲೆ ಉಗಿದಿದ್ದನ್ನು ಪ್ರಶ್ನಿಸಿದ್ದಕ್ಕೆ ದುರುಳನೋರ್ವ ಕಾಲೇಜು ವಿದ್ಯಾರ್ಥಿನಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.  ವಿದ್ಯಾರ್ಥಿನಿ ಕಾಲೇಜಿಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಈ ಘಟನೆ ನಡೆದಿದೆ. ಪಾನ್ ತಿಂದ ಯುವಕನೋರ್ವ ಆಕೆಯ ಮೇಲೆ ಉಗಿದಿದ್ದು, ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿ ಆತನ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಆದರೆ ಆರೋಪಿ ತಪ್ಪು ಮಾಡಿದ್ದಲ್ಲದೇ ಕೇಳಿದ್ದಕ್ಕೆ ಆಕೆಯ ಮೇಲೆಯೇ ಚಾಕುವಿನಿಂದ ದಾಳಿ ನಡೆಸಿ ದುರ್ವರ್ತನೆ ತೋರಿದ್ದಾನೆ.  ಬುಲಂದ್‌ಶಹರ್‌ನ  ಖುರ್ಜ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

ಸಾಕ್ಷಿ (Sakshi) ಎಂಬ ಹುಡುಗಿ ಎಂದಿನಂತೆ ತಾನು ಓದುವ ಪಾಲಿಟೆಕ್ನಿಕ್ ಕಾಲೇಜಿಗೆ (Polytechnic college) ಹೋಗುತ್ತಿದ್ದಾಗ ಆರೋಪಿ 25 ವರ್ಷದ ಸೋನು (Sonu) ಆಕೆಯ ಮೇಲೆ ಉಗಿದಿದ್ದಾನೆ. ಈ ವೇಳೆ ಆರೋಪಿ ತನ್ನ ಬಳಿ ಇದ್ದ ಚಾಕುವಿನಿಂದ ಆಕೆಯ ಮುಖದ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಬಳಿಕ ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ (Discharge) ಮಾಡಲಾಗಿದೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ (IPS) ಸೆಕ್ಷನ್ 307ರ ಅಡಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕುಡಿದ ಮತ್ತಲ್ಲಿ ಮೂವರ ಮೇಲೆ ಹಲ್ಲೆ; ಬುದ್ಧಿ ಹೇಳಿದ್ದಕ್ಕೆ ಚಾಕು ಇರಿತ..!

ಪ್ರೀತಿ ಒಪ್ಪದ ವಿದ್ಯಾರ್ಥಿನಿಯ ಕೊಲೆ

ಬೆಂಗಳೂರು ನಗರದ ರಾಜಾನುಕುಂಟೆ (Rajanukunte) ಬಳಿಯಿರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರೀತಿ ಒಪ್ಪದ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿ ಪ್ರೆಸಿಡೆನ್ಸಿ (Presidency) ಕಾಲೇಜಿನಲ್ಲಿ ಪ್ರೀತಿಯ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಈ ಘಟನೆ ನಡೆದಿತ್ತು.  ಹೊಸ ವರ್ಷದ ಆಚರಣೆ ಮುಗಿಸಿಕೊಂಡು  ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯ ಬಳಿ ಬಂದ ಯುವಕನೋರ್ವ ಆಕೆಗೆ ಚಾಕುವಿನಿಂದ ಹೊಟ್ಟೆ ಮತ್ತು ದೇಹದ ಇತರ ಭಾಗಕ್ಕೆ ಇರಿದಿದ್ದ.  ಚಾಕು ಇರಿತದಿಂದ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವಿದ್ಯಾರ್ಥಿನಿಯ ಹತ್ತಿರ ಬೇರೆ ವಿದ್ಯಾರ್ಥಿಗಳು ಕೂಡ ಬರದಂತೆ ಆತ ಚಾಕು ತೋರಿಸಿ ಬೆದರಿಸಿದ್ದ. ನಂತರ ಅದೇ ಚಾಕುವಿನಿಂದ ತನ್ನ ಹೊಟ್ಟೆಗೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ. ನಂತರ  ಗಂಭೀರ ಗಾಯಗೊಂಡು ಬಿದ್ದು ಒದ್ದಾಡುತ್ತಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಳು. 

ಹುಡುಗಿ ವಿಚಾರಕ್ಕೆ ಕಾಲೇಜು ಹುಡುಗರ ನಡುವೆ ಗಲಾಟೆ

ಹುಡುಗಿ ವಿಚಾರಕ್ಕೆ ಕಾಲೇಜು ಹುಡುಗರ ನಡುವೆ ಗಲಾಟೆಯಾಗಿದ್ದು, ನರ್ಸಿಂಗ್ ವಿದ್ಯಾರ್ಥಿಗೆ ಚಾಕುವಿನಿಂದ ಇರಿದ ಘಟನೆ ಕಳೆದ ಡಿಸಂಬರ್‌ನಲ್ಲಿ ನಗರದ ನೂರ್‌ಬಾಗ್ ಕಾಲೋನಿಯಲ್ಲಿ ನಡೆದಿತ್ತು. ಮಹ್ಮದ್ ಅತ್ತೆಶಾಮ್ (19) ಚಾಕು ಇರಿತಕ್ಕೊಳಗಾದ ನರ್ಸಿಂಗ್ ಕಾಲೇಜು ವಿದ್ಯಾರ್ಥಿ. ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಜೊತೆ ಮಹ್ಮದ್ ಅತ್ತೇಶಾಮ ಸ್ನೇಹದಿಂದ ಇದ್ದು ವಾಟ್ಸಪ್ ಚಾಟಿಂಗ್ ಮಾಡಿದ್ದ, ಇವರ ಸ್ನೇಹ ಸಹಿಸದ ಅದೇ ಕಾಲೇಜಿನ ಇನ್ನೊಬ್ಬ ವಿದ್ಯಾರ್ಥಿ ಮುಝಾಮಿಲ್‌, ಅತ್ತೇಶಾಮ್‌ಗೆ ಚಾಕುವಿನಿಂದ ಇರಿದಿದ್ದ. 

Tumakuru Crime: ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೇ ಚಾಲಕನಿಗೆ ಚಾಕು ಇರಿದ ಪುಂಡರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ