ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!

ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!

Published : Aug 08, 2026, 07:31 PM IST

ಮೊನ್ನೆ ಹಾಸನದ ಒಂದು ಸ್ಟೋರಿ ಹೇಳಿದ್ವಿ. ಬೇಕರಿ ಇಟ್ಟುಕೊಂಡಿದ್ದ ಕೋಟ್ಯಾಧೀಶ ಸೂಸೈಡ್​ ಮಾಡಿಕೊಂಡ ಅಂತ. ಆವತ್ತು ಆತ ಒಂದು ಸೆಲ್ಫಿ ವಿಡಿಯೋ ಮಾಡಿಟ್ಟು ತನ್ನದೇ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದ.

ಮೊನ್ನೆ ಹಾಸನದ ಒಂದು ಸ್ಟೋರಿ ಹೇಳಿದ್ವಿ. ಬೇಕರಿ ಇಟ್ಟುಕೊಂಡಿದ್ದ ಕೋಟ್ಯಾಧೀಶ ಸೂಸೈಡ್​ ಮಾಡಿಕೊಂಡ ಅಂತ. ಆವತ್ತು ಆತ ಒಂದು ಸೆಲ್ಫಿ ವಿಡಿಯೋ ಮಾಡಿಟ್ಟು ತನ್ನದೇ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದ. ಆತ ಸತ್ತ ನಂತರ ಹೆಂಡತಿಯೂ ನಾಪತ್ತೆಯಾಗಿದ್ದಳು. ಇನ್ನೂ ಕೊನೆ ವಿಡಿಯೋದಲ್ಲಿ ಆತ ತನ್ನ ಹೆಂಡತಿಯನ್ನ ಹುಡುಕಬೇಡಿ ಅಂತಲೂ ಹೇಳಿದ್ದ. ಆದ್ರೆ ಇವತ್ತು ಆ ಕೇಸ್​ಗೆ ಮತ್ತೊಂದು ಟ್ವಿಸ್ಟ್​​ ಸಿಕ್ಕಿದೆ. ಆವತ್ತು ನಾಪತ್ತೆಯಾಗಿದ್ದ ಹೆಂಡತಿ ಇವತ್ತು ಸಿಕ್ಕಿದ್ದಾಳೆ. ಅದೂ ಕೂಡ ಹೆಣವಾಗಿ. ಅಷ್ಟಕ್ಕೂ ಆ ಗಂಡ ಹೆಂಡತಿ ಇಬ್ಬರಿಗೂ ಏನಾಗಿತ್ತು.? ಆ ರಾತ್ರಿ ಹಾಸನದಲ್ಲಿ ನಡೆದಿದ್ದೇನು.?

ಒಂದು ಮುದ್ದು ಸಂಸಾರದ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್​.ಐ.ಆರ್​​. ರಘು ಯಾರ ಬಳಿಯೂ ತನ್ನ ಫ್ಯಾಮಿಲಿ ಮ್ಯಾಟರ್​ ಅನ್ನ ಹೆಳಿಕೊಂಡಿರಲಿಲ್ಲ. ಆದ್ರೆ ತನ್ನ ಕೊನೆಯ ವಿಡಿಯೋದಲ್ಲಿ ತನ್ನ ಹೆಂಡತಿಯ ಇಂಚಿಂಚು ಮಾಹಿತಿಯನ್ನೂ ಕೊಟ್ಟಿದ್ದ. ಇನ್ನೂ ಪೊಲೀಸರು ಈತ ಸತ್ತ ಮೇಲೆ ಆಕೆಯನ್ನ ಹುಡುಕಾಡಿದ್ರು. ಬಟ್​​ ಆಕೆ ಎಲ್ಲೂ ಸಿಗೋದಿಲ್ಲ. ಆದ್ರೆ ಒಂದು ವಾರದ ನಂತರ ಇವತ್ತು ಆಕೆಯ ಮೃತದೇಹ ಸಿಕ್ಕಿದೆ. ಹಾಗಾದ್ರೆ ರಘುನೇ ಆಕೆಯನ್ನ ಕೊಂದುಬಿಟ್ಟನಾ.?

ಆವತ್ತು ಮಧ್ಯರಾತ್ರಿಯಲ್ಲಿ ನಡುರಸ್ತೆಯಲ್ಲಿ ನಡೆದಿದ್ದೇನು.? ಊರಿಗೆ ಹೋಗಿ ಬರೋಣ ಅಂತ ಕರೆದುಕೊಂಡು ಹೋದ ಗಂಡ ಮಾರ್ಗ ಮಧ್ಯೆಯೇ ಅವಳ ಕತ್ತು ಹಿಸುಕಿದ ನಂತರ ತನ್ನ ಊರಿಗೆ ತಗೆದುಕೊಂಡು ಬಂದು ಹೆಣವನ್ನ ಎಸೆದು ಅಪ್ಪನಿಗೆ ಕಾಲ್​ ಮಾಡಿದ. ಬಳಿಕ ವಿಡಿಯೋ ಮಾಡಿ ವರ್ಷಗಳಿಂದ ಬಚ್ಚಿಟ್ಟಿದ್ದ ಎಲ್ಲಾ ಕಹಿ ಸತ್ಯವನ್ನ ರೆಕಾರ್ಡ್​ ಮಾಡಿದ. ಬಳಿಕ ತನ್ನದೇ ಜಮೀನಿಗೆ ಹೋಗಿ ನೇಣಿಗೆ ಶರಣಾಗಿಬಿಟ್ಟ. ಹೆತ್ತವರು ಮಗಳು ಹಾಗಲ್ಲ ಅಂತಿದ್ದಾರೆ. ಗಂಡ ತನ್ನ ಹೆಂಡತಿ ಸರಿ ಇರಲಿಲ್ಲ ಅಂತ ನೇಣು ಹಾಕಿಕೊಂಡಿದ್ದಾನೆ. ಆದ್ರೆ ಒಂದು ಸಂಸಾರದಲ್ಲಿ ಮೂರನೇ ವ್ಯಕ್ತಿ ಎಂಟ್ರಿ ಆದ್ರೆ ಏನಾಗುತ್ತೆ.

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more