
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಯುವತಿ ಶ್ರದ್ಧಾ ಕೊಲೆ ಪ್ರಕರಣ ತನಿಖೆ ಮುಂದುವರೆಯುತ್ತಿದ್ದಂತೆ ಒಂದೊಂದೇ ಸ್ಫೋಟಕ ಮಾಹಿತಿಗಳು ಹೊರ ಬರುತ್ತಿವೆ. ತನ್ನ ಜೊತೆ ಸಹ ಜೀವನ ನಡೆಸುತ್ತಿದ್ದ ಗೆಳತಿ ಶ್ರದ್ಧಾಳನ್ನು ಆಕೆಯ ಗೆಳೆಯ ಅಫ್ತಾಬ್ ಅಮೀನ್ ಪೂನಾವಾಲಾ ಬರ್ಬರವಾಗಿ ಹತ್ಯೆಗೈದಿದ್ದ ಗೆಳತಿಯ ಹತ್ಯೆ ಬಳಿಕ ಆಕೆಯ ಮೃತದೇಹವನ್ನು 35 ಪೀಸುಗಳಾಗಿ ಮಾಡಿ ಕತ್ತಿರಿಸಿ ಪ್ರಿಡ್ಜ್‌ನಲ್ಲಿ ಇರಿಸಿದ್ದ ಇದಕ್ಕಾಗಿ ಹೊಸದೊಂದು ಫ್ರಿಡ್ಜ್‌ನ್ನು ಆತ ಖರೀದಿಸಿದ್ದ, ನಂತರ ಸುಮಾರು 18 ದಿನಗಳ ಕಾಲ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮೃತದೇಹದ ಸ್ವಲ್ಪ ಸ್ವಲ್ಪ ಭಾಗವನ್ನೇ ಸಮೀಪದ ಮೆಹ್ರುಲಿಯ ಕಾಡಿನಲ್ಲಿ ತೆಗೆದುಕೊಂಡು ಹೋಗಿ ಎಸೆದಿದ್ದ. ಈ ಭೀಕರ ಕೊಲೆ ಪ್ರಕರಣ ನಡೆದು ಆರು ತಿಂಗಳ ಬಳಿಕ ಪೊಲೀಸರು ನಿನ್ನೆ ಅಫ್ತಾಬ್‌ನನ್ನು ಬಂಧಿಸಿದ್ದರು.
ಈತನ ಬಂಧನದ (Arrest) ಬಳಿಕ ಈ ಭೀಕರ ಕೊಲೆ (Brutual Murder) ಪ್ರಕರಣ ಬಯಲಾಗಿತ್ತು. ಈಗ ಈ ಹೀನ ಕೃತ್ಯದ ಮತ್ತಷ್ಟು ಅಂಶಗಳು ಬಯಲಾಗುತ್ತಿದೆ. ಶ್ರದ್ಧಾಳನ್ನು ಇಷ್ಟೊಂದು ಭೀಕರವಾಗಿ ಹತ್ಯೆ ಮಾಡಿದ 15 ರಿಂದ 20 ದಿನಗಳ ನಂತರ ಅಫ್ತಾಬ್ ಪೂನಾವಾಲಾ ಡೇಟಿಂಗ್ ಆಪ್ (Dating App) ಮೂಲಕ ಮತ್ತೊಬ್ಬ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ. ಅಲ್ಲದೇ ಆಕೆಯೊಂದಿಗೆ ಡೇಟಿಂಗ್ ಶುರು ಮಾಡಿದ್ದ ಎಂದು ತನಿಖೆ ನಡೆಸಿದ ಪೊಲೀಸರು ಹೇಳಿದ್ದಾರೆ. ಅಲ್ಲದೇ ಶ್ರದ್ಧಾ ಮೃತದೇಹ ಮನೆಯಲ್ಲಿರುವ ವೇಳೆಯೇ ಆತ ಆ ಹೊಸ ಹುಡುಗಿಯನ್ನು ದೆಹಲಿಯಲ್ಲಿ (Delhi) ತಾನು ವಾಸವಿದ್ದ ಬಾಡಿಗೆ ಮನೆಗೆ ಆಗಾಗ ಕರೆದುಕೊಂಡು ಬರುತ್ತಿದ್ದ ಎಂಬ ಬೆಚ್ಚಿ ಬೀಳಿಸುವ ಅಂಶವನ್ನು ವಿಚಾರಣೆ ನಡೆಸಿದ ಪೊಲೀಸರು ತಿಳಿಸಿದ್ದಾರೆ. ಹೊಸ ಗೆಳತಿಯ ಆಗಮನದ ವೇಳೆಯೂ ಶ್ರದ್ಧಾ ದೇಹದ ತುಣುಕುಗಳು ಅಫ್ತಾಬ್ ಕೊಂಡ 300 ಲೀಟರ್‌ನ ಹೊಸ ಪ್ರಿಡ್ಜ್ ಒಳಗೆ ಇತ್ತು ಎಂಬುದನ್ನು ವಿಚಾರಣೆ ವೇಳೆ ಆರೋಪಿ ಅಫ್ತಾಬ್ ಬಾಯ್ಬಿಟ್ಟಿದ್ದಾನೆ.
Delhi Shraddha Murder Case: ಮಹಿಳಾ ಹಕ್ಕು ಹೋರಾಟದ ಸೋಗು, ಗರ್ಲ್‌ಫ್ರೆಂಡನ್ನು 35 ಪೀಸ್ ಮಾಡಿದ ಪಾತಕಿ ಅಫ್ತಾಬ್
ಶ್ರದ್ಧಾ(Shraddha) ಹಾಗೂ ಅಫ್ತಾಬ್ ಪೂನಾವಾಲ (Aftab Poonawala) ಡೇಟಿಂಗ್ ಆಪ್ ಬಂಬಲ್ (Bumble) ನಲ್ಲಿ ಪರಸ್ಪರ ಮೊದಲ ಬಾರಿಗೆ ಭೇಟಿಯಾಗಿದ್ದರು. ಮುಂಬೈನಲ್ಲಿ ಆರಂಭವಾದ ಈ ಪ್ರೇಮಕಥನ ದೆಹಲಿಯಲ್ಲಿ ಭಯಾನಕ ಕೊಲೆಯೊಂದಿಗೆ ಅಂತ್ಯವಾಗುವ ಮೊದಲು ಮೂರು ವರ್ಷ ಇವರು ಜೊತೆಯಾಗಿಯೇ ಇದ್ದರು. ಅಫ್ತಾಬ್ ಜೊತೆಗಿನ ಪ್ರೇಮದ ಕಾರಣಕ್ಕೆ ಶ್ರದ್ಧಾ ಪೋಷಕರು ಮಗಳೊಂದಿಗೆ ಮುನಿಸಿಕೊಂಡಿದ್ದರು. ಪೋಷಕರ ವಿರೋಧದ ನಂತರ ಶ್ರದ್ಧಾ, ತನಗೆ 25 ವರ್ಷ ಆಗಿದೆ. ನನ್ನ ಬದುಕಿನ ನಿರ್ಧಾರವನ್ನು ನಾನೇ ತೆಗೆದುಕೊಳ್ಳುವೆ ಎಂದು ಬಟ್ಟೆಬರೆಗಳನ್ನು ಹೊತ್ತುಕೊಂಡು ಮನೆಬಿಟ್ಟು ಅಫ್ತಾಬ್ ಜೊತೆ ದೆಹಲಿಗೆ ಬಂದಿದ್ದಳು.
ದೆಹಲಿಯ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಿದ್ದರು. ಇತ್ತ ಮನೆಯೊಂದಿಗೆ ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದ ಶ್ರದ್ಧಾ, ಫೇಸ್ಬುಕ್‌ನಲ್ಲಿ ಆಗಾಗ ಏನಾದರೂ ಪೋಸ್ಟ್‌ಗಳನ್ನು ಮಾಡುತ್ತಿದ್ದಳು. ಮಗಳೊಂದಿಗೆ ಮಾತುಕತೆ ಇಲ್ಲದಿದ್ದರೂ ಪೋಷಕರು ಈ ಮೂಲಕ ಮಗಳ ಇರುವಿಕೆಯನ್ನು ಗಮನಿಸುತ್ತಿದ್ದರು. ಆದರೆ ಅನೇಕ ದಿನಗಳಿಂದ ಫೇಸ್‌ಬುಕ್‌ನಲ್ಲಿ ಯಾವುದೇ ಪೋಸ್ಟ್‌ಗಳು ಬಾರದ ಹಿನ್ನೆಲೆಯಲ್ಲಿ ಪೋಷಕರಿಗೆ ತಮ್ಮ ಮಗಳೇನಾದಳು ಎಂಬ ಬಗ್ಗೆ ಸಂಶಯ ಮೂಡಿದ ಹಿನ್ನೆಲೆಯಲ್ಲಿ ಶ್ರದ್ಧಾ ತಂದೆ ಐದು ತಿಂಗಳ ಹಿಂದೆ ದೆಹಲಿಗೆ ಬಂದು ಶ್ರದ್ಧಾ ಇರುವ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಬೀಗ ಹಾಕಿತ್ತು. ಈ ಹಿನ್ನೆಲೆಯಲ್ಲಿ ಸಂಶಯಗೊಂಡ ಶ್ರದ್ಧಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದಾಗಿ ಐದು ತಿಂಗಳ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ದೇಶವನ್ನು ಬೆಚ್ಚಿ ಬೀಳಿಸಿದ ಭೀಕರ ಹತ್ಯೆ ಪ್ರಕರಣಗಳು..!
ಸ್ಥಳ ಮಹಜರು
ಇನ್ನು ಪೊಲೀಸರು ಇಂದು ಶ್ರದ್ಧಾಳ ದೇಹದ ಭಾಗಗಳನ್ನು ಬಿಸಾಕಿದ ಮೆಹ್ರುಲಿಯ ಕಾಡಿಗೆ ಆರೋಪಿಯನ್ನು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ