Udupi: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬ್ಯಾಂಕ್ ಉದ್ಯೋಗಿಯ ಮೃತದೇಹ ಪತ್ತೆ

By Govindaraj S  |  First Published Nov 15, 2022, 11:37 AM IST

ಮನೆ ಮಹಡಿಯ ಕೊಠಡಿಯೊಂದರಲ್ಲಿ ಬೆಂಕಿಯಿಂದ ಸಂಪೂರ್ಣ ಸುಟ್ಟು ಹೋಗಿರುವ ಸ್ಥಿತಿಯಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರ ಶವ ಪತ್ತೆಯಾಗಿದೆ. ಆಸುಪಾಸಿನ ಮನೆಯವರ ಸೂಚನೆಯಂತೆ ಪರಿಶೀಲಿಸಿದಾಗ ಮೃತ ದೇಹ ಕಂಡು ಬಂದಿದೆ.


ಉಡುಪಿ (ನ.15): ಮನೆ ಮಹಡಿಯ ಕೊಠಡಿಯೊಂದರಲ್ಲಿ ಬೆಂಕಿಯಿಂದ ಸಂಪೂರ್ಣ ಸುಟ್ಟು ಹೋಗಿರುವ ಸ್ಥಿತಿಯಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರ ಶವ ಪತ್ತೆಯಾಗಿದೆ. ಆಸುಪಾಸಿನ ಮನೆಯವರ ಸೂಚನೆಯಂತೆ ಪರಿಶೀಲಿಸಿದಾಗ ಮೃತ ದೇಹ ಕಂಡು ಬಂದಿದೆ. ಉಡುಪಿ ಜಿಲ್ಲೆಯ ಕೃಷ್ಣ ಮಠದ ಆವರಣದ ರಸ್ತೆಯೊಂದರಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಖಾಸಗಿ ಬ್ಯಾಂಕಿನ ಲೀಗಲ್ ಆಫೀಸರ್ ರಾಜಗೋಪಾಲ ಸಾಮಗ ಎಂದು ಗುರುತಿಸಲಾಗಿದೆ. ಇವರು ಮಠದ ಆವರಣದ ವಾದಿರಾಜ ರಸ್ತೆಯ ಬಳಿ ವಾಸವಾಗಿದ್ದಾರೆ.

ನಿವೃತ್ತ ಪೊಲೀಸ್,  ಕೃಷ್ಣ ಸಾಮಗ ಅವರ ಪುತ್ರರಾದ ರಾಜಗೋಪಾಲ ಸಾಮಗ ರಾಷ್ಟ್ರೀಯ ಬ್ಯಾಂಕ್ ಒಂದರ ಉದ್ಯೋಗಿಯಾಗಿದ್ದು ಪತ್ನಿ ಹಾಗೂ ಪುತ್ರ ಇದ್ದಾರೆ. ಬ್ಯಾಂಕಿನ ಹೈದರಾಬಾದ್ ಶಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದ ರಾಜಗೋಪಾಲ್ ಕೆಲ ಸಮಯಗಳ ಹಿಂದೆ ವರ್ಗಾವಣೆಗೊಂಡಿದ್ದರು. ಮಂಗಳೂರಿನ ಶಾಖೆಗೆ ವರ್ಗಾವಣೆಗೊಂಡಿದ್ದು ಆರೋಗ್ಯ ಸಮಸ್ಯೆಯ ಕಾರಣಕ್ಕೆ ಮನೆಯಲ್ಲೇ ಉಳಿದುಕೊಂಡು ಕೆಲಸ ನಿರ್ವಹಿಸುತ್ತಿದ್ದರು.

Latest Videos

undefined

Karnataka PSI Scam: ಪಿಎಸ್‌ಐ ಕೇಸ್‌ ತನಿಖಾಧಿಕಾರಿ ಉಮೇಶ್ ಕುಮಾರ್‌ ವರ್ಗಾವಣೆಗೆ ಅಸಮಾಧಾನ

ಸಂಜೆ ಚಹಾ ಕುಡಿದು ಮಹಡಿ ಮೇಲಿನ ರೂಮಿಗೆ ಹೋಗಿದ್ದು ಆ ಬಳಿಕ ಇವರ ಮೃತ ದೇಹ ಪತ್ತೆಯಾಗಿದೆ. ರೂಮಿಗೆ ಹೋದ ಕೆಲ ಹೊತ್ತಿನ ಬಳಿಕ ಹೊಗೆ ಬರಲು ಆರಂಭಿಸಿದೆ. ಇದನ್ನು ಗಮನಿಸಿದ ಪಕ್ಕದ ಮನೆಯವರು, ಸಾಮಗರ ಮನೆಗೆ ಮಾಹಿತಿ ನೀಡಿದ್ದರು. ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಕೋಣೆಯ ಬಾಗಿಲು ಮುರಿದು ಪರಿಶೀಲನೆ ನಡೆಸಿದ್ದಾರೆ. ಈ ಹೊತ್ತಿದಾಗಲೇ ರಾಜಗೋಪಾಲ ಸಾಮಗ ಮೃತಪಟ್ಟಿದ್ದರು.

ಓಲಾ, ಉಬರ್ ಆಟೋ ಬಿಕ್ಕಟ್ಟು: ಇಂದು ಆರ್‌ಟಿಒ ಅಧಿಕಾರಿಗಳಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

ಅನಾರೋಗ್ಯ ಸಮಸ್ಯೆಯಿಂದ ಇವರು ಜೀವನದಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಇದೆ. ರಾಜಗೋಪಾಲ ಸಾಮುಗರು ಕೆಲಸ ಮಾಡುತ್ತಿದ್ದಾಗ ಲ್ಯಾಪ್‌ಟಾಪ್ ಸಿಡಿದು ಅಥವಾ ಮೊಬೈಲ್ ಸಿಡಿದು ಮೃತಪಟ್ಟಿರುವ ಸಾಧ್ಯತೆಯೂ ಇದೆ. ಈ ವೇಳೆ ಗುಡುಗು ಇದ್ದ ಕಾರಣ ಈ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

click me!