ದೇಶವನ್ನು ಬೆಚ್ಚಿ ಬೀಳಿಸಿದ ಭೀಕರ ಹತ್ಯೆ ಪ್ರಕರಣಗಳು..!
Most famous and controversial criminal cases in India: ದೆಹಲಿಯಲ್ಲಿ ಗರ್ಲ್ ಫ್ರೆಂಡ್ ಅನ್ನು 35 ಪೀಸ್ ಮಾಡಿದ ಬರ್ಬರ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೇ ರೀತಿ, ದೇಶವನ್ನು ಬೆಚ್ಚಿ ಬೀಳಿಸಿದ ಇತರೆ ಭೀಕರ ಹತ್ಯೆ ಪ್ರಕರಣಗಳ ವಿವರ ಹೀಗಿದೆ..
ಮದುವೆಯಾಗು (Marriage) ಎಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನೊಂದಿಗೆ ಸಹಬಾಳ್ವೆ (Living Together) ನಡೆಸುತ್ತಿದ್ದ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ (Murder) ಮಾಡಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ನಡೆದಿದೆ. ತನ್ನ ಲಿವಿಂಗ್ ಟುಗೆದರ್ ಜೊತೆಗಾತಿಯನ್ನು ಕೊಂದ ಯುವಕ ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧೆಡೆ ಎಸೆದಿದ್ದಾನೆ. ದೆಹಲಿಯ ಮೆಹ್ರೌಲಿ (Mehrauli) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶ್ರದ್ಧಾ ವಾಕರ್ (Shraddha Walker) ಅನ್ನು ಬಾಯ್ ಫ್ರೆಂಡ್ ಅಫ್ತಾಬ್ ಪೂನಾವಾಲಾ (Aftab Poonawala) ಭೀಕರವಾಗಿ ಹತ್ಯೆ ಮಾಡಿದ್ದು, ಆಕೆಯ ದೇಹವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಸದ್ಯ, ಆರೋಪಿಯನ್ನು ಬಂಧಿಸಲಾಗಿದ್ದು, 5 ದಿನಗಳ ಕಾಲ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಇನ್ನು, ನಮ್ಮ ದೇಶವನ್ನು ಬೆಚ್ಚಿ ಬೀಳಿಸಿದ ಇತರೆ ಭೀಕರ ಹತ್ಯೆ ಪ್ರಕರಣಗಳ ವಿವರ ಇಲ್ಲಿದೆ..
ಇದನ್ನು ಓದಿ: ಮಹಿಳಾ ಹಕ್ಕುಗಳ ಹೋರಾಟದ ಸೋಗು ಹಾಕಿದ್ದ ಗರ್ಲ್‌ಫ್ರೆಂಡ್ ಅನ್ನು 35 ಪೀಸ್ ಮಾಡಿದ ಪಾತಕಿ ಅಫ್ತಾಬ್..!
ತಂದೂರಿ ಮರ್ಡರ್
1995ರಲ್ಲಿ ದೆಹಲಿಯ ಶಾಸಕ ಸುನೀಲ್ ಶರ್ಮಾ ತಮ್ಮ ಪತ್ನಿ ನೈನಾ ಸಹಾನಿಯನ್ನು ಗುಂಡಿಕ್ಕಿ ಕೊಂದು, ಬಳಿಕ ರೆಸ್ಟೋರೆಂಟಿನ ಮಾಲಿಕನೊಂದಿಗೆ ಸೇರಿ ಮೃತದೇಹವನ್ನು ತಂದೂರಿ ರೋಟಿ ಮಾಡುವ ಒಲೆಯಲ್ಲಿ ಸುಟ್ಟು ಹಾಕಿದ್ದ.
ಬೇಲಾರಾಣಿ ದತ್ತಾ ಹತ್ಯೆ
1954ರಲ್ಲಿ ಕೋಲ್ಕತ್ತಾದ ಬೇಲಾರಾಣಿ ದತ್ತಾ ಎಂಬುವವಳನ್ನು ಪ್ರಿಯಕರ ಬಿರೇನ್ ಕೊಂದು ದೇಹದ ಭಾಗಗಳನ್ನು ದಿನಪತ್ರಿಕೆಯಲ್ಲಿ ಸುತ್ತಿ ಶೌಚಾಲಯ ಬಳಿ ಎಸೆದು ಭೀಕರತೆ ತೋರಿದ್ದ.
ಇದನ್ನೂ ಓದಿ: ಮದ್ವೆ ಆಗು ಎಂದಿದ್ದೇ ತಪ್ಪಾಯ್ತು: ಗೆಳತಿಯ ಕೊಂದು 35 ಪೀಸ್ ಮಾಡಿದ ಪಾಪಿ
ಆರುಷಿ ಹತ್ಯೆ
ನೋಯ್ಡಾದಲ್ಲಿ 2008ರಲ್ಲಿ 13 ವರ್ಷದ ಆರುಷಿ ತಲವಾರ್‌ಳನ್ನು ಮನೆಯಲ್ಲೇ ಕತ್ತನ್ನು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮನೆಗೆಲಸದವನ ಮೇಲೆ ಶಂಕೆಯಿದ್ದು 2 ದಿನದ ನಂತರ ಆತನ ಮೃತದೇಹವೂ ಸಿಕ್ಕಿತ್ತು.
ನಿಠಾರಿ ಸರಣಿ ಹತ್ಯೆ
ಉತ್ತರಪ್ರದೇಶದ ನಿಠಾರಿ ಉದ್ಯಮಿ ಮೊನಿಂದರ್‌ಸಿಂಗ್ ಪಂದೇರ್ 2005-2006ರ ಅವಧಿಯಲ್ಲಿ ಹಲವಾರು ಪುಟ್ಟಮಕ್ಕಳನ್ನು ತನ್ನ ಬಂಗಲೆಗೆ ಕರೆದು ಹತ್ಯೆ ಮಾಡಿದ್ದ. ಮೃತದೇಹದ ಜತೆ ಲೈಂಗಿಕ ಕ್ರಿಯೆ ನಡೆಸಿ, ಬಳಿಕ ಅವುಗಳನ್ನು ತುಂಡಾಗಿ ಕತ್ತರಿಸಿ ತಿಂದಿದ್ದ.
ಇದನ್ನೂ ಓದಿ: ಮಗಳ ಕೈಯಲ್ಲಿ ಡೆತ್‌ನೋಟ್ ಬರೆಸಿ ಕೊಲೆ ಮಾಡಿದ ತಂದೆ..!
ನೀರಜ್ ಗ್ರೋವರ್ ಹತ್ಯೆ
2008ರಲ್ಲಿ ನೀರಜ್ ಗ್ರೋವರ್‌ನನ್ನು ಕನ್ನಡ ನಟಿ ಮರಿಯಾ ಮೋನಿಯಾ ಸುಸೈರಾಜ್‌ನ ಪ್ರಿಯಕರ ಎಮಿಲಿ ಮ್ಯಾಥಿವ್ ಹತ್ಯೆ ಮಾಡಿದ್ದ. ಬಳಿಕ ಮೊನಿಕಾಳೊಂದಿಗೆ ಸೇರಿ ಮೃತದೇಹವನ್ನು 300 ತುಂಡುಗಳಾಗಿ ಕತ್ತರಿಸಿ ಬ್ಯಾಗ್‌ನಲ್ಲಿ ತುಂಬಿ ಕಾಡಿಗೆ ಹೋಗಿ ಸುಟ್ಟಿದ್ದ.
ಶರತ್ ಹತ್ಯೆ
2017ರಲ್ಲಿ ಬೆಂಗಳೂರಿನ ಆದಾಯ ತೆರಿಗೆ ಅಧಿಕಾರಿಯ ಮಗ 19 ವರ್ಷದ ಶರತ್‌ನನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿ ರಾಮೋಹಳ್ಳಿ ಕೆರೆಯಲ್ಲಿ ಎಸೆಯಲಾಗಿತ್ತು. ಹಣಕ್ಕಾಗಿ ಶರತ್‌ನ ಗೆಳೆಯ ವಿಶಾಲ್‌ನೇ ಹತ್ಯೆಮಾಡಿದ್ದು ತನಿಖೆಯಲ್ಲಿ ತಿಳಿದುಬಂದಿತ್ತು.
ಇದನ್ನೂ ಓದಿ: Bengaluru: ಪತಿಗೆ ಮದ್ಯ ಕುಡಿಸಿ, ಕಬಾಬ್ ತಿನ್ನಿಸಿ ಕತ್ತು ಹಿಸುಕಿ ಹತ್ಯೆ!
ಅಮರದೀಪ್ ಸದಾ
2007ರಲ್ಲಿ ಬಿಹಾರದ ಅಮರ್‌ದೀಪ್ ಸದಾ ಎನ್ನುವ 8 ವರ್ಷದ ಬಾಲಕ ತನ್ನ ಸಂಬಂಧಿ ಹಾಗೂ ಪಕ್ಕದ ಮನೆಯ ಹುಡುಗಿ ಸೇರಿ ಒಟ್ಟು 3 ಮಕ್ಕಳ ಹತ್ಯೆ ಮಾಡಿದ್ದ. ಈತ ಭಾರತದ ಅತಿ ಕಿರಿಯ ವಯಸ್ಸಿನ ಸರಣಿ ಹಂತಕ.
ಪ್ರಿಯದರ್ಶಿನಿ ಮಟ್ಟೂ ಹತ್ಯೆ
1996ರಲ್ಲಿ ಕಾನೂನು ವಿದ್ಯಾರ್ಥಿಯಾದ ಪ್ರಯದರ್ಶಿನಿ ಮಟ್ಟುವನ್ನು ಆಕೆಯ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂತೋಷ್ ಕುಮಾರ್ ಸಿಂಗ್ ಕತ್ತಿಗೆ ವೈರ್ ಬಿಗಿದು ಹತ್ಯೆ ಮಾಡಿದ್ದ. ಬಳಿಕ ಹೆಲ್ಮೆಟ್‌ನಿಂದ ಮುಖಕ್ಕೆ ಗುದ್ದಿ ಗುರುತಿಸಲಾರಂದೇ ಮಾಡಿ ಕ್ರೌರ್ಯ ಮೆರೆದಿದ್ದ.