ಆರೋಪಿ ಮಹಿಳೆ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿರುವುದು ಪತಿ ಹಾಗೂ ಅತ್ತೆ - ಮಾವನಿಗೆ ಗೊತ್ತಾಗಿದೆ. ನಂತರ, ಅತ್ತೆ - ಮಾವ ತಮ್ಮ ಸೊಸೆಯ ಮೇಲೆ ಕಣ್ಣಿಟ್ಟಿದ್ದರಿಂದ ಬಾಯ್‌ಫ್ರೆಂಡ್ ಜತೆಗೆ ಸಂಬಂಧ ಮುಂದುವರಿಸೋದು ಕಷ್ಟವಾಗಿತ್ತು ಎಂಬ ಕಾರಣಕ್ಕಾಗಿ ಆಕೆಗೆ ಅತ್ತೆ - ಮಾವನ ಮೇಲೆ ಸಿಟ್ಟು ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ.
ಹೊಸದಿಲ್ಲಿ (ಏಪ್ರಿಲ್ 13, 2023): ಆಸ್ತಿಯಾಸೆಗಾಗಿ ಸ್ವಂತ ಅತ್ತೆ - ಮಾವನನ್ನೇ ರಾಕ್ಷಸಿ ಸೊಸೆ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ವರದಿಯಾಗಿತ್ತು. ಈ ಭೀಕರ ಹತ್ಯೆ ಪ್ರಕರಣದ ಒಂದೊಂದೇ ರಹಸ್ಯಗಳು ಈಗ ಹೊರಬರುತ್ತಿವೆ. ತನ್ನ ಬಾಯ್‌ಫ್ರೆಂಡ್ ಆಶಿಶ್ (29) ಎಂಬಾತನ ನೆರವಿನಿಂದ ಅತ್ತೆ - ಮಾವನನ್ನು ಕೊಂದ ಆರೋಪದ ಮೇಲೆ ಮೋನಿಕಾ ವರ್ಮಾ (29) ಬಂಧನವಾಗಿದ್ದಾಳೆ.
ಈ ಕೊಲೆಗೆ ಆಸ್ತಿಯಾಸೆ ಒಂದೇ ಅಲ್ಲ, ಅದಕ್ಕಿಂತಲೂ ಪ್ರಮುಖವಾದ ಮತ್ತೊಂದು ಕಾರಣವಿದೆ. ಅದೇನಂತೀರಾ..? ಆರೋಪಿ ಮಹಿಳೆ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿರುವುದು ಪತಿ ಹಾಗೂ ಅತ್ತೆ - ಮಾವನಿಗೆ ಗೊತ್ತಾಗಿದೆ. ನಂತರ, ಅತ್ತೆ - ಮಾವ ತಮ್ಮ ಸೊಸೆಯ ಮೇಲೆ ಕಣ್ಣಿಟ್ಟಿದ್ದರಿಂದ ಬಾಯ್‌ಫ್ರೆಂಡ್ ಜತೆಗೆ ಸಂಬಂಧ ಮುಂದುವರಿಸೋದು ಕಷ್ಟವಾಗಿತ್ತು ಎಂಬ ಕಾರಣಕ್ಕಾಗಿ ಆಕೆಗೆ ಅತ್ತೆ - ಮಾವನ ಮೇಲೆ ಸಿಟ್ಟು ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ.
ಇದನ್ನು ಓದಿ: ಆಸ್ತಿಗಾಗಿ ಅತ್ತೆ - ಮಾವನನ್ನೇ ಕೊಲೆ ಮಾಡಿದ ರಾಕ್ಷಸಿ ಸೊಸೆ: ಬಾಯ್‌ಫ್ರೆಂಡ್ ನೆರವಿನಿಂದ ಹತ್ಯೆ!
ಮನೆಯವರಿಗೆ ಗೊತ್ತಿಲ್ಲದೆ ಬಾಯ್‌ಫ್ರೆಂಡ್ ಜತೆ ಮಾತನಾಡಲು ಹಾಗೂ ಚಾಟ್ ಮಾಡಲು ಮಹಿಳೆ ಇನ್ನೊಂದು ಸಿಮ್ ಬಳಸುತ್ತಿದ್ದಳು.ಇದು ಪತಿಗೆ ಗೊತ್ತಾಗಿ, ಪರಿಶೀಲಿಸಿದ ವೇಳೆ ಸೆಕ್ಸ್ ಚಾಟ್ ಮಾಡುತ್ತಿದ್ದದ್ದು ಬಹಿರಂಗಗೊಂಡಿದೆ. ನಂತರ, ಗಂಡನ ಮನೆಯವರು ಸ್ಮಾರ್ಟ್‌ಫೋನ್ ಕಿತ್ತುಕೊಂಡು ಬೇಸಿಕ್ ಫೋನ್ ಅನ್ನು ನೀಡಿದರೂ ಸಹ ಆಕೆ ಕಾಲ್ ಮಾಡುವುದು ಹಾಗೂ ಬಾಯ್ ಫ್ರೆಂಡ್‌ನನ್ನು ಮೀಟ್ ಮಾಡುವುದನ್ನು ಮುಂದುವರಿಸಿದ್ದಳು ಎಂದೂ ತಿಳಿದುಬಂದಿದೆ.
ಇನ್ನು, ಪತಿಯ ಮನೆಯವರು ಈಶಾನ್ಯ ದೆಹಲಿಯ ಗೋಕಲ್ಪುರಿಯಲ್ಲಿರುವ ಮನೆಯನ್ನು ಭಾಗಗಳಲ್ಲಿ ಮಾರಾಟ ಮಾಡಲು ಮತ್ತು ದ್ವಾರಕಾಗೆ ಸ್ಥಳಾಂತರಗೊಳ್ಳುವ ಬಗ್ಗೆ ಚರ್ಚಿಸಲು ಪ್ರಾರಂಭಿಸಿದಾಗ, ಮೋನಿಕಾ ತನ್ನ ಅತ್ತೆ - ಮಾವನನ್ನು ಕೊಂದು ಅದನ್ನು ದರೋಡೆ ಎಂಬಂತೆ ಬಿಂಬಿಸಲು ಸಂಚು ರೂಪಿಸಿದಳು ಎಂಬುದು ಬಹಿರಂಗವಾಗಿದೆ.
ಇದನ್ನೂ ಓದಿ: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ 15 ವರ್ಷದ ಬಾಲಕಿ
ಕೊಲೆ ಮಾಡಿದ್ದರೂ ಪಶ್ಚಾತಾಪವಿಲ್ಲ ಎಂದ ರಾಕ್ಷಸಿ..!
ಮೋನಿಕಾ ದೆಹಲಿ ವಿಶ್ವವಿದ್ಯಾನಿಲಯದಿಂದ ಪದವಿ ಮುಗಿಸಿದ್ದರು ಮತ್ತು ಮದುವೆಗೆ ಮೊದಲು ನೋಯ್ಡಾದ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. 22 ನೇ ವಯಸ್ಸಿನಲ್ಲಿ ವಿವಾಹವಾದ ಈಕೆಗೆ ನಾಲ್ಕು ವರ್ಷಗಳ ಕುಟುಂಬ ಜೀವನವು ಅವಳನ್ನು ಏಕಾಂಗಿ ಗೃಹಿಣಿಯಾಗಿ ಪರಿವರ್ತಿಸಿತಂತೆ. ಈ ಹಿನ್ನೆಲೆ ಆನ್‌ಲೈನ್‌ನಲ್ಲಿ ಸ್ನೇಹಿತರನ್ನು ಮಾಡಿಕೊಳ್ಳಲು ಪ್ರಾರಂಭಿಸಿದಳು ಎಂದು ತಿಳಿದುಬಂದಿದೆ.
ಇದರಲ್ಲಿ ಒಬ್ಬ ಆಶಿಶ್ ಆಗಿದ್ದು, ಆಗಸ್ಟ್ 2020 ರಲ್ಲಿ ಆನ್‌ಲೈನ್‌ನಲ್ಲಿ ಸ್ನೇಹ ಬೆಳೆಸಿದರು. ಇಬ್ಬರೂ ಆಗಾಗ್ಗೆ ಚಾಟ್ ಮಾಡುತ್ತಿದ್ದರು ಮತ್ತು ಶೀಘ್ರದಲ್ಲೇ ಒಬ್ಬರಿಗೊಬ್ಬರು ಇಷ್ಟಪಡಲು ಆರಂಭಿಸಿದರು. ಚಾಟ್‌ಗಳು ಕ್ರಮೇಣ ಸೆಕ್ಸ್‌ಟಿಂಗ್‌ಗೆ ತಿರುಗಿದವು ಮತ್ತು ಅಂತಿಮವಾಗಿ ಅವರು ಫೆಬ್ರವರಿ 2021 ರಲ್ಲಿ ಪ್ರೇಮಿಗಳ ದಿನದಂದು ಹೋಟೆಲ್‌ನಲ್ಲಿ ಭೇಟಿಯಾಗಿದ್ದರು. ಬಳಿಕ, ಗಾಜಿಯಾಬಾದ್‌ನ ವಿವಿಧ ಹೋಟೆಲ್‌ಗಳಲ್ಲಿ ಆಗಾಗ್ಗೆ ಭೇಟಿಯಾದರಂತೆ.
ಇದನ್ನೂ ಓದಿ: ಕುಡುಕ ಪತಿ ಕಾಟಕ್ಕೆ ಬೇಸತ್ತು 3 ಮಕ್ಕಳನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡ್ಕೊಂಡ ಮಹಿಳೆ..!
ಆದರೆ, ಕಳೆದ ವರ್ಷ ಈ ವಿಚಾರ ಪತಿ ರವಿಗೆ ಗೊತ್ತಾದಾಗ ಅವರು ಫೋನ್ ಕಿತ್ತುಕೊಂಡರು. ನಂತರ, "ನನಗೆ ಉಸಿರುಗಟ್ಟಿದಂತಾಯಿತು. ನನ್ನ ಪ್ರತಿ ಚಲನವಲನ, ಪ್ರತಿ ಕ್ರಿಯೆಯ ಮೇಲೆ ಮನೆಯವರು ನಿಗಾ ಇಡುತ್ತಿದ್ದರಿಂದ ನನಗೆ ಜೈಲಿನಲ್ಲಿ ಇದ್ದಂತೆ ಭಾಸವಾಯ್ತು. ಅವರು ನನ್ನ ಜೀವನವನ್ನು ನಿಯಂತ್ರಿಸಲು ಬಯಸಿದ್ದರು, ನನ್ನ ಧ್ವನಿಯನ್ನು ಕಸಿದುಕೊಳ್ಳಲು ಬಯಸಿದ್ದರು. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ" ಎಂದು ಕೊಲೆ ಆರೋಪಿ ಮೋನಿಕಾ ಪೊಲೀಸರಿಗೆ ಹೇಳಿದ್ದಾರೆ.
ತನ್ನ ಅತ್ತೆ ವೀಣಾ ತನ್ನ ಮೇಲೆ ತೀವ್ರ ನಿಗಾ ಇರಿಸಿದ್ದರು ಮತ್ತು ಈ ಕಾರಣದಿಂದಾಗಿ ಕುಟುಂಬದಲ್ಲಿ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಮೋನಿಕಾ ಆರೋಪಿಸಿದ್ದಾರೆ. ಆಕೆಯ ಚಲನವಲನವನ್ನು ನಿರ್ಬಂಧಿಸಲಾಗಿದೆ ಎಂದು ರವಿ ಸಹ ತಮ್ಮ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.
ಇದನ್ನೂ ಓದಿ: ದೇವಸ್ಥಾನದ ಬಳಿ ಬಿರುಗಾಳಿಗೆ ಉರುಳಿದ ಬೃಹತ್ ಮರ: 7 ಭಕ್ತರು ಬಲಿ, 20 ಕ್ಕೂ ಹೆಚ್ಚು ಮಂದಿಗೆ ಗಾಯ
ಒಟ್ಟಾರೆ ಆಸ್ತಿ ವಿಚಾರಕ್ಕಿಂತ ತನ್ನ ಮೇಲೆ ಹೆಚ್ಚು ನಿರ್ಬಂಧ ವಹಿಸಿದ ಕಾರಣಕ್ಕಾಗಿ ಮೋನಿಕಾ ಕೊಲೆ ಮಾಡಿದ್ದಾಳೆ ಎಂಬ ಬಗ್ಗೆ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.