ಬೆಂಗಳೂರು: ಬಾರ್‌ನಲ್ಲಿ ರೌಡಿ ಹತ್ಯೆಗೆ ಕಾಲು ತಾಗಿದ್ದೇ ಕಾರಣ..!

Published : Apr 13, 2023, 08:32 AM IST
ಬೆಂಗಳೂರು: ಬಾರ್‌ನಲ್ಲಿ ರೌಡಿ ಹತ್ಯೆಗೆ ಕಾಲು ತಾಗಿದ್ದೇ ಕಾರಣ..!

ಸಾರಾಂಶ

ವೈಯಕ್ತಿಕ ಕಾರಣಕ್ಕೆ ಇಟ್ಟಮಡು ಮುಖ್ಯರಸ್ತೆಯಲ್ಲಿರುವ ‘ಸ್ಪೈಸ್‌ ಬಾರ್‌’ನಲ್ಲಿ ಶಿವರಾಜ್‌ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಕೊಂದು ಪರಾರಿಯಾಗಿದ್ದರು. ಮೊಬೈಲ್‌ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. 

ಬೆಂಗಳೂರು(ಏ.13):  ಮೂರು ದಿನಗಳ ಹಿಂದೆ ಇಟ್ಟಮಡು ಮುಖ್ಯರಸ್ತೆಯ ಬಾರ್‌ನಲ್ಲಿ ನಡೆದಿದ್ದ ರೌಡಿ ಶಿವರಾಜ್‌ ಕೊಲೆ ಪ್ರಕರಣ ಸಂಬಂಧ ಐವರು ದುಷ್ಕರ್ಮಿಗಳನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಸಕೆರೆಹಳ್ಳಿಯ ಮಂಜುನಾಥ್‌ ಅಲಿಯಾಸ್‌ ಪೋಲಾರ್ಡ್‌, ಇಟ್ಟುಮಡುವಿನ ಪ್ರಜ್ವಲ್‌, ಪ್ರಶಾಂತ್‌, ರಾಮಕೃಷ್ಣ ಹಾಗೂ ಸುಮಂತ್‌ ಬಂಧಿತರಾಗಿದ್ದು, ವೈಯಕ್ತಿಕ ಕಾರಣಕ್ಕೆ ಇಟ್ಟಮಡು ಮುಖ್ಯರಸ್ತೆಯಲ್ಲಿರುವ ‘ಸ್ಪೈಸ್‌ ಬಾರ್‌’ನಲ್ಲಿ ಶಿವರಾಜ್‌ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಕೊಂದು ಪರಾರಿಯಾಗಿದ್ದರು. ಮೊಬೈಲ್‌ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಮ​ನ​ಗರ: ಲವ್‌ ಮ್ಯಾರೇಜ್‌ಗೆ ವಿರೋಧ, ಭಾವ​ನನ್ನೇ ಬರ್ಬ​ರ​ವಾಗಿ ಕೊಂದ ಭಾಮೈದ...!

ಕಾಲು ತಾಕಿದಕ್ಕೆ ಗಲಾಟೆ:

ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಮೂಲದ ಶಿವರಾಜ್‌, ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು, ಪೆಂಟರ್‌ ಆಗಿ ಕೆಲಸ ಮಾಡಿಕೊಂಡಿದ್ದ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಕೂಡಾ ತೊಡಗಿದ್ದ. ಈ ಹಿನ್ನೆಲೆಯಲ್ಲಿ 2016ರಲ್ಲಿ ಆತನ ಮೇಲೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ರೌಡಿಪಟ್ಟಿತೆರೆಯಲಾಗಿತ್ತು. ಇಟ್ಟಮಡು ಮುಖ್ಯರಸ್ತೆಯ ಸ್ಪೈಸ್‌ ಬಾರ್‌ಗೆ ತನ್ನ ಮೂವರು ಸ್ನೇಹಿತರ ಜತೆ ಭಾನುವಾರ ರಾತ್ರಿ ಶಿವರಾಜ್‌ ಮದ್ಯ ಸೇವನೆಗೆ ತೆರಳಿದ್ದ.

ಅದೇ ವೇಳೆ ಆ ಬಾರ್‌ನಲ್ಲಿ ಮಂಜುನಾಥ್‌ ಹಾಗೂ ಆತನ ಗೆಳೆಯರು ಇದ್ದರು. ಆಗ ಕಾಲು ತಾಕಿದ್ದಕ್ಕೆ ಮಂಜುನಾಥ್‌ಗೆ ‘ನಮ್ಮ ಏರಿಯಾಗೆ ಬಂದು ಧಿಮಾಕು ತೋರಿಸುತ್ತೀಯಾ’ ಎಂದು ಶಿವರಾಜ್‌ ನಿಂದಿಸಿದ್ದಾನೆ. ಬಳಿಕ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಎರಡು ಗುಂಪುಗಳು ಕೈ-ಕೈ ಮಿಲಾಯಿಸಿವೆ. ಜಗಳಕ್ಕೆ ಮಧ್ಯಪ್ರವೇಶಿಸಿದ ಬಾರ್‌ ಸಿಬ್ಬಂದಿ ಸಮಾಧಾನಪಡಿಸಿ ಹೊರ ಕಳುಹಿಸಿದ್ದರು. ಬಾರ್‌ನಿಂದ ಹೊರ ಬಂದ ಶಿವರಾಜ್‌ಗೆ ಬಿಯರ್‌ ಬಾಟಲ್‌ನಿಂದ ಆರೋಪಿಗಳು ಹೊಡೆದಿದ್ದರು. ಈ ಹಂತದಲ್ಲಿ ಕೆಳಗೆ ಬಿದ್ದ ಆತನ ಮೇಲೆ ಕಲ್ಲು ಎತ್ತಿ ಹಾಕಿ ಆರೋಪಿಗಳು ಪರಾರಿಯಾಗಿದ್ದರು.ಹಲ್ಲೆಗೊಳಗಾಗಿದ್ದ ಶಿವರಾಜ್‌ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ