ತನ್ನ ಹೆಂಡತಿಗಾಗಿ ಬೇರೆ ಊರಿಗೆ ಹೋಗಿ ಮನೆ ಮಾಡಿ ನೆಲೆಸಿದರೂ ಹೆಂಡ್ತಿ ಮಾತ್ರ ತನ್ನ ಚಾಳಿ ಬಿಡಲಿಲ್ಲ. ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಗೊತ್ತಿದ್ದರೂ ನನ್ನ ಹೆಂಡತಿ ಅಂತವಳಲ್ಲ ಎಂದು ಸಮರ್ಥನೆ ಮಾಡ್ಕೊಳ್ತಿದ್ದ ಗಂಡ. ಇಂದು ಪತ್ನಿ ತನ್ನ ಪ್ರಿಯಕರ ಜೊತೆ ಸೇರಿದ ಖೆಡ್ಡಾಗೆ ಬಿದ್ದು ಹೆಣವಾಗಿ ಬಿದ್ದಿದ್ದಾನೆ.
ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಮೇ.29): ತನ್ನ ಹೆಂಡತಿಗಾಗಿ ಬೇರೆ ಊರಿಗೆ ಹೋಗಿ ಮನೆ ಮಾಡಿ ನೆಲೆಸಿದರೂ ಹೆಂಡ್ತಿ ಮಾತ್ರ ತನ್ನ ಚಾಳಿ ಬಿಡಲಿಲ್ಲ. ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಗೊತ್ತಿದ್ದರೂ ನನ್ನ ಹೆಂಡತಿ ಅಂತವಳಲ್ಲ ಎಂದು ಸಮರ್ಥನೆ ಮಾಡ್ಕೊಳ್ತಿದ್ದ ಗಂಡ. ಇಂದು ಪತ್ನಿ ತನ್ನ ಪ್ರಿಯಕರ ಜೊತೆ ಸೇರಿದ ಖೆಡ್ಡಾಗೆ ಬಿದ್ದು ಹೆಣವಾಗಿ ಬಿದ್ದಿದ್ದಾನೆ. ಈ ಕುರಿತು ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ. ತನ್ನ ಮಗ ಬೀದಿ ಹೆಣವಾಗಿ ಸಾವನ್ನಪ್ಪಿದನಲ್ಲ ಎಂದು ಪೋಟೋ ಹಿಡಿದು ಕಣ್ಣೀರು ಹಾಕ್ತಿರೋ ವೃದ್ದೆ ಮಾತೆ. ಇನ್ನೂ ಮೊದಲೇ ತಾಯಿ ಕಳೆದುಕೊಂಡು ಅನಾಥವಾಗಿದ್ದ ನಾಲ್ಕು ಮುದ್ದಾದ ಮಕ್ಕಳು ಇಂದು ತಂದೆಯನ್ನು ಕಳೆದುಕೊಂಡೆವಲ್ಲ ಎಂದು ನೋವಿನಿಂದ ಕುಳಿತಿರೋ ಸಂದರ್ಭ.
ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಭರಮಸಾಗರ ನಗರದ ಜಟ್ ಪಟ್ ನಗರದಲ್ಲಿರೋ ಮೃತನ ತಾಯಿಯ ನಿವಾಸ. ಮೃತ ವ್ಯಕ್ತಿ ಭಾಷಾಸಾಬ್ ತನ್ನ ಮೊದಲ ಹೆಂಡತಿ ಅನಾರೋಗ್ಯದಿಂದ ಸಾವನ್ನಪ್ಪಿದ ಪರಿಣಾಮ ಸುಮಾರು 10 ವರ್ಷಗಳ ಹಿಂದೆ ಫರ್ವೀನ್ ಎಂಬಾಕೆಯನ್ನು ವಿವಾಹ ಆಗುತ್ತಾನೆ. ಇವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಸಹ ಇರುತ್ತವೆ. ಭಾಷಾಸಾಬ್ ಹೊಟ್ಟೆಪಾಡಿಗಾಗಿ ನಿತ್ಯ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾನೆ ಇತ್ತ ಮಡದಿ ಯನ್ನೇ ಇರುತ್ತಾಳೆ.
Chitradurga: ಏಕಕಾಲದಲ್ಲೇ 161 ಕಲಾವಿದರಿಂದ ಬೃಹತ್ ವೀಣಾ ವಾದನ ಕಾರ್ಯಕ್ರಮ!
ಆದ್ರೆ ತನ್ನ ಜೊತೆ ಸ್ನೇಹಿತನಾಗಿ ಪರಿಚಯವಾದ ಅದೇ ಏರಿಯಾದ ಯುವಕ ದಾದಾಪೀರ್ ಹಾಗಾಗ ಭಾಷಾಸಾಬ್ ಮನೆಗೆ ಬಂದು ಹೋಗ್ತಿರುತ್ತಾನೆ. ಸ್ನೇಹಿತ ಸುಮ್ನೆ ಬರ್ತಾನೆ ಹೋಗ್ತಾನೆ ಬಿಡು ಎಂದು ಭಾಷಾ ಏನೂ ಅನುಮಾನ ಪಡದೇ ತನ್ನ ಪಾಡಿಗೆ ತಾನು ಇರ್ತಾನೆ. ಆದ್ರೆ ಕಳೆದ ಎರಡು ವರ್ಷಗಳಿಂದ ಅಕ್ರಮ ಸಂಬಂಧದ ಚಟುವಟಿಕೆಗಳು ಮಿತಿ ಮೀರಿದ್ದು ಕುಟುಂಬಸ್ಥರೇ ಈ ಬಗ್ಗೆ ಕರೆಸಿ ಪಂಚಾಯ್ತಿ ಮಾಡಿದ್ದರು. ಹಾಗಾಗಿ ಭರಮಸಾಗರ ತೊರೆದು ಪತ್ನಿಗಾಗಿಯೇ ವಡ್ಡನಹಳ್ಳಿಯಲ್ಲಿ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಮೊದಲೇ ಹೆವಿ ಡ್ರಿಂಕರ್ ಆಗಿದ್ದ ಭಾಷಾ ಕಳೆದ 15 ದಿನಗಳಿಂದ ಸಂಸಾರ ಚೆನ್ನಾಗಿರಲಿ ಎಂದು ಕುಡಿಯೋದನ್ನ ಬಿಟ್ಟಿದ್ದ.
ಆದ್ರೆ, ಗಂಡನ ಕೊಲೆ ಮಾಡಲೇಬೇಕೆಂದು ಸ್ಕೆಚ್ ಹಾಕಿದ್ದ ಪತ್ನಿ ಹಾಗೂ ಪ್ರಿಯಕರ ಜೊತೆಗೂಡಿ, ಸಿಬಾರ ಗ್ರಾಮದ ಬಳಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ಸದ್ಯ ನಾಲ್ಕು ಮಕ್ಕಳು ತಂದೆ ತಾಯಿ ಇಬ್ಬರನ್ನೂ ಕೆಳೆದುಕೊಂಡು ಅನಾಥರಾಗಿದ್ದಾರೆ. ಅವರಿಗೆ ನ್ಯಾಯ ಕೊಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ಎಂಬುದು ಸಂಬಂಧಿಕರ ಆಗ್ರಹವಾಗಿದೆ. ಇನ್ನೂ ಈ ಕುರಿತು ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಈ ಕೊಲೆಗೆ ಕಾರಣ ಏನೂ ಎಂಬುದರ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಮೃತ ಪತ್ನಿಯು ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಇದೆ ಎನ್ನಲಾದ ಮಾಹಿತಿ ಸಿಕ್ಕಿದೆ.
ಚಿತ್ರದುರ್ಗ: ಎಲ್ಲರ ಗಮನ ಸೆಳೆದ ದೇಸಿ ತಳಿ ಗೋವುಗಳ ಪ್ರದರ್ಶನ
ಈಗಾಗಲೇ ಪೊಲೀಸರು ತನಿಖೆ ಶುರು ಮಾಡಿದ್ದು ಶೀಘ್ರವೇ ಕೊಲೆಗೆ ಕಾರಣ ಏನು ಹಾಗೂ ಕೊಲೆ ಮಾಡಿದವರು ಯಾರು ಎಂದು ಆರೋಪಿಗಳಿಗೆ ಎಡೆಮುರಿಕಟ್ಟುವ ಮೂಲಕ ಈ ಕೇಸ್‌ಗೆ ನ್ಯಾಯ ಒದಗಿಸಲಾಗುವುದು ಎಂದು ಎಸ್ಪಿ ತಿಳಿಸಿದರು. ತನ್ನ ಪತ್ನಿ ಫರ್ವೀನಾ ಮೊದಲ ಹೆಂಡತಿಯ ಮಕ್ಕಳಿಗೂ ಸರಿಯಾಗಿ ಮಾತನಾಡಿಸದಿದ್ದರೂ ಹೇಗೋ ಮನೆಯಲ್ಲಿ ತಾಯಿ ಸ್ಥಾನದಲ್ಲಿ ಸಾಕಪ್ಪ ಎಂದು ಗಂಡ ಎಷ್ಟೇ ಉಳುಕು ಮುಚ್ಚಿಕೊಂಡು ಪ್ರಯೋಜನ ಆಗಲಿಲ್ಲ. ಪರ ಪುರಷನ ಕಾಮದಾಟಕ್ಕೆ ಬಲಿಯಾದ ಪತ್ನಿ ಗಂಡನನ್ನೇ ಸ್ಕೆಚ್ ಹಾಕಿ ಕೊಲೆ ಮಾಡಿಸಿದ್ದು ದುರಂತವೇ ಸರಿ. ಇಂತಹ ಮಾನಗೆಟ್ಟ ಮಹಿಳೆಯರು ಹಾಗೂ ಅಂತಹ ಆರೋಪಗಳಿಗೆ ಪೊಲೀಸರು ಉಗ್ರ ಶಿಕ್ಷೆ ನೀಡಲಿ ಎಂಬುದು ಸ್ಥಳೀಯರ ಆಗ್ರಹ.