
ಚಿಕ್ಕಮಗಳೂರು (ಮೇ.29): ಮಲೆನಾಡಿನಲ್ಲಿ ಕೆಲ ಯುವಕರು ಮೀನು ಶಿಕಾರಿಯೂ ಒಂದು ಹವ್ಯಾಸವೆಂದು ರೂಢಿಸಿಕೊಂಡಿದ್ದಾರೆ. ಇದೇ ಹವ್ಯಾಸ ಒಮ್ಮೊಮ್ಮೆ ಪ್ರಾಣಕ್ಕೂ ಸಂಚಕರ ತಂದೊಡ್ಡುತ್ತದೆ. ಇದಕ್ಕೆ ನಿದರ್ಶನ ಎನ್ನುವಂತೆ ಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯುಲು ಹೋದ ಸಮಯದಲ್ಲಿ ಯುವಕನೊರ್ವ ಮೃತಪಟ್ಟಿರುವುದು ಇಡೀ ಕುಟುಂಬ ಇದೀಗ ಶೋಕಸಾಗರದಲ್ಲಿ ಇದೆ.
ಭದ್ರಾ ಹಿನ್ನೀರಿನಲ್ಲಿ ಯುವಕ ಸಾವು: ಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಭದ್ರಾ ಹಿನ್ನೀರಿನಲ್ಲಿ ನಡೆದಿದೆ. ಮೃತನನ್ನ 29 ವರ್ಷದ ಮಹಮದ್ ಎಂದು ಗುರುತಿಸಲಾಗಿದೆ. ಮಹಮದ್ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಆಯಾ ತಪ್ಪಿ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾನೆ ಎಂದು ಹೇಳಲಾಗಿದೆ. ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿರಲಿಲ್ಲ.
Chikkamagaluru; ಕೊಟ್ಟಿಗೆಗೆ ಬೆಂಕಿ, ಜಾನುವಾರುಗಳು ಸಜೀವ ದಹನ
ಸ್ಥಳೀಯ ಮೀನುಗಾರರು ಮೀನಿಗೆ ಬಲೆ ಹಾಕಲು ಹೋದಾಗ ಮೃತದೇಹ ತೇಲುತ್ತಿದ್ದನ್ನ ಗಮನಿಸಿ ನೋಡಿದಾಗ ಯುವಕ ಸಾನ್ನಪ್ಪಿರುವುದು ಪತ್ತೆಯಾಗಿದೆ. ಕೂಡಲೇ ಸ್ಥಳಿಯ ಮೀನುಗಾರರು ವಾರಸುದಾರರಿಗೆ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಮೃತನ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ವಿಷಯ ತಿಳಿದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಎನ್.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹದಿಹರೆಯದ ಯುವಕನ ಮೃತದೇಹ ಕಂಡು ಸ್ಥಳಿಯರು ಕೂಡ ಕಣ್ಣೀರಿಟ್ಟಿದ್ದಾರೆ.
ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಯುವಕ ಸಾವು: ಆತ ತಾಯಿಗೆ ಮೆಚ್ಚಿನ ಮಗ, ಬಡತನವಿದ್ದರೂ ಪ್ರತಿನಿತ್ಯ ಕೂಲಿ ಮಾಡಿ ತಾಯಿ ಸಹೋದರನ್ನು ಸಾಕುತ್ತಿದ್ದ. ತನ್ನ ಸಂಬಂಧಿಕರ ಜಮೀನಿನಲ್ಲೇ ಕೆಲಸ ಮಾಡಿ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ. ಆತನ ಮುಗ್ದ ಮನಸ್ಸಿಗೆ ಇಡೀ ಗ್ರಾಮದ ಜನರೇ ಮನಸೋತಿತ್ತು. ಆದರೆ ದುರದೃಷ್ಟ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಯುವಕ ಪ್ರಾಣಪಕ್ಷಿ ಹಾರಿಹೋಗಿದೆ. ದಾವಣಗೆರೆ ತಾಲ್ಲೂಕಿನ ಮಾಗನಹಳ್ಳಿ ಗ್ರಾಮದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಕುರಿತ ಒಂದು ವರದಿ ಇಲ್ಲಿದೆ.
Chikkamagaluru: ದೇವಾಲಯದ ಸೀರೆ ಕುಪ್ಪಸಗಳ ಹರಾಜಿನಲ್ಲಿ ಮೋಸ: ಕ್ರಮಕ್ಕೆ ಒತ್ತಾಯ!
ಭತ್ತ ಕೊಯ್ಯುವ ಜಮೀನಿನಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ: ಮಾಗನಹಳ್ಳಿ ಸಮೀಪದ ಭತ್ತದ ಹೊಲದಲ್ಲಿ ಇಂದು ನಡೆಯಬಾರದ್ದು ನಡೆದುಹೋಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ಮಾಗನಹಳ್ಳಿಯ ಗಣೇಶ್ ಎಂಬ ಯುವಕನನ್ನು ಬಲಿ ಪಡೆದಿದೆ. ಬೆಳಿಗ್ಗೆ 10.30ರ ಸುಮಾರಿಗೆ ಮಾಗನಹಳ್ಳಿ ಗ್ರಾಮಕ್ಕೆ ವಿಷ್ಯ ತಿಳಿಯುತ್ತಿದ್ದಂತೆ ಆಕ್ರೋಶ ದುಃಖದ ಕಟ್ಟೆ ಹೊಡೆದಿದೆ. ಪರುಶರಾಮಣ್ಣನ ಗದ್ದೆಯಲ್ಲಿ ಗಣೇಶ್‌ಗೆ ವಿದ್ಯುತ್ ಶಾಕ್ ಆಗಿದೆ ಎಂಬುದು ಗೊತ್ತಾಗುತ್ತಿದ್ದಂತೆ ಇಡೀ ಗ್ರಾಮವೇ ಹೊಲದ ಬಳಿ ಬಂದಿದೆ. ಗಣೇಶ್‌ನ ತಾಯಿ ಅಣ್ಣತಮ್ಮಂದಿರ ಗೋಳಂತು ಹೇಳತೀರಾದಾಗಿದೆ. ಕೆಇಬಿ ಅಧಿಕಾರಿಗಳು, ಲೈನ್ ಮ್ಯಾನ್ ಗಳು ನಮ್ಮ ಹುಡುಗನನ್ನು ಬಲಿ ತೆಗೆದುಕೊಂಡಿತು ಎಂದು ಸಿಬ್ಬಂದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ