15 ವರ್ಷದ ಚೇತನ್, ರಾತ್ರಿ ಕುಟುಂಬಸ್ಥರ ಕಣ್ತೆಪ್ಪಿಸಿ ಪಕ್ಕದ ರಸ್ತೆಯಲ್ಲಿರುವ ಕ್ಲಾಸ್‌ಮೇಟ್ ಭೇಟಿಯಾಗಲು ಹೋಗಿದ್ದಾನೆ. ಚೇತನ್ ಮತ್ತು ಹುಡುಗಿ ಒಂದೇ ಕೋಣೆಯಲ್ಲಿದ್ದರು.
ಜೈಪುರ: ತಡರಾತ್ರಿ ಯುವತಿ ಕೋಣೆಗೆ ನುಗ್ಗಿದ 15ರ ಪೋರನ ಸಾವು ಆಗಿದೆ. ಈ ಘಟನೆ ರಾಜಸ್ಥಾನದ ಜೋಧಪುರದ ಗ್ರಾಮೀಣ ಕ್ಷೇತ್ರದ ಕಸಬೆಯಲ್ಲಿ ನಡೆದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಸಾವಿನ ರಹಸ್ಯವನ್ನು ಶೀಘ್ರವಾಗಿ ಪತ್ತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಶನಿವಾರ ಇಡೀ ದೇಶದ ಜನರು ಟಿಟ್ವೆಂಟಿ ವಿಶ್ವಕಪ್ ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ 15 ವರ್ಷದ ಚೇತನ್, ರಾತ್ರಿ ಕುಟುಂಬಸ್ಥರ ಕಣ್ತೆಪ್ಪಿಸಿ ಪಕ್ಕದ ರಸ್ತೆಯಲ್ಲಿರುವ ಕ್ಲಾಸ್‌ಮೇಟ್ ಭೇಟಿಯಾಗಲು ಹೋಗಿದ್ದಾನೆ. ಚೇತನ್ ಮತ್ತು ಹುಡುಗಿ ಒಂದೇ ಕೋಣೆಯಲ್ಲಿದ್ದರು. ಈ ವಿಷಯ ಯುವತಿಯ ಮನೆಯವರಿಗೆ ಗೊತ್ತಾಗಿದೆ. ಚೇತನ್ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿರುವಾಗ ಜಮೀನಿನ ಬೇಲಿಗೆ ಹಾಕಲಾಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ. ಯುವತಿ ಪೋಷಕರು ಬಾಲಕನ ಶವವನ್ನು ಹೆದ್ದಾರಿಯ ಬದಿಯಲ್ಲಿ ಎಸೆದು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂತಿಮ ಸಂಸ್ಕಾರಕ್ಕೆ ಮುಂದಾಗದೇ ಪ್ರತಿಭಟನೆ
ಭಾನುವಾರ ಬೆಳಗ್ಗೆ ಚೇತನ್ ಶವ ರಸ್ತೆ ಬದಿ ಸಿಗುತ್ತಿದ್ದಂತೆ ಗ್ರಾಮದಲ್ಲಿ ಸೂತಕದ ಛಾಯೆ ಆರಂಭಿಸಿತ್ತು. ಚೇತನ್ ಪೋಷಕರು ಇದು ಕೊಲೆ ಎಂದು ಆರೋಪಿಸಿದ್ದಾರೆ. ಸುಮಾರು 24 ಗಂಟೆಯಾದ್ರೂ ಚೇತನ್ ಕುಟುಂಬಸ್ಥರು ಅಂತಿಮ ಸಂಸ್ಕಾರಕ್ಕೆ ಮುಂದಾಗದೇ, ನ್ಯಾಯ ಬೇಕೆಂದು ಬಿಗಿಪಟ್ಟು ಹಿಡಿದಿದ್ದರು.
ಪ್ರಿಯತಮೆಯನ್ನ ಕೊಂದ ಬಳಿಕ ಆತ್ಮಹತ್ಯೆ ಯೋಚನೆ; ತಾಯಿ ಸಮಾಧಿ ಬಳಿ ಹೋದ ಬಳಿಕ ನಡೀತು ಅಚ್ಚರಿ
ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನ
ಚೇತನ್ ಕುಟುಂಬಸ್ಥರ ದೂರಿನ ಅನ್ವಯ ಯುವತಿ ಕುಟುಂಬದ ವಿರುದ್ಧ ಕೊಲೆ ಪ್ರಕರಣ ದಾಖಲಾದ ಬಳಿಕವೇ ಅಂತಿಮ ಸಂಸ್ಕಾರ ನಡೆಸಲಾಗಿದೆ. ಇತ್ತ ಭಾನುವಾರ ರಾತ್ರಿ ಯುವತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಕಟ್ಟಡದಿಂದ ಜಿಗಿದ ಪರಿಣಾಮ ಯುವತಿಯ ಕೈ-ಕಾಲುಗಳು ಮುರಿತಕ್ಕೊಳಗಾಗಿದೆ ಎಂದು ವರದಿಯಾಗಿದೆ.
ದೂರಿನ ಅನ್ವಯ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರೆಗೂ ಯಾರನ್ನು ಬಂಧಿಸಿಲ್ಲ, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಇಬ್ಬರು ಒಂದೇ ತರಗತಿಯಲ್ಲಿ ಓದುತ್ತಿದ್ದರು. ಚೇತನ್ ಸಾವಿನ ಬಳಿಕ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ನಂತರ ಶವವನ್ನು ಹೆದ್ದಾರಿ ಬಳಿ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿ ಗರ್ಭಿಣಿಯಾಗಿದ್ದಕ್ಕೆ ಹಣೆಗೆ ಶೂಟ್ ಮಾಡ್ಕೊಂಡ ಗಂಡ